ಬಾನು ಮುಷ್ತಾಕ್‌ಗೆ ಸರೋಜಾದೇವಿ ಸಾಹಿತ್ಯ ಪ್ರಶಸ್ತಿ

ಖ್ಯಾತ ಚಲನಚಿತ್ರ ತಾರೆ ಪದ್ಮಭೂಷಣ ಡಾ.ಬಿ.ಸರೋಜಾದೇವಿ ಅವರು ತಮ್ಮ ಸುಪುತ್ರಿ ದಿವಂಗತ ಬಿ.ಭುವನೇಶ್ವರಿ ಅವರ ಸ್ಮರಣಾರ್ಥ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 2.5 ಲಕ್ಷ ರೂ.ಗಳ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಈ ವರ್ಷದ ಪ್ರಶಸ್ತಿಗೆ ಸಾಹಿತಿ ಬಾನುಮುಷ್ತಾಕ್ ಆಯ್ಕೆಯಾಗಿದ್ದಾರೆ.
ಹಾಸನ ಜಿಲ್ಲೆಯವರಾದ ಬಾನುಮುಷ್ತಾಕ್ ಹಾಸನ ಜಿಲ್ಲಾ ನಗರಸಭೆ ಸದಸ್ಯೆಯಾಗಿ ಮತ್ತು ಬೆಂಗಳೂರಿನ ಆಕಾಶವಾಣಿಯಲ್ಲಿ ಸಲಹಾಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಹಲವಾರು ಕಥಾ ಸಂಕಲನಗಳು ಮತ್ತು ಕಾದಂಬರಿಗಳು ಪ್ರಕಟವಾಗಿವೆ. ವೃತ್ತಿಯಲ್ಲಿ ನ್ಯಾಯವಾದಿಗಳಾಗಿರುವ ಇವರು ಲಂಕೇಶ್ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಇವರ ‘ಹಸೀನಾ’ ಸಣ್ಣಕತೆ ಚಲನಚಿತ್ರವಾಗಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ಕಸಾಪ ಪ್ರಕಟಣೆಯಲ್ಲಿ ತಿಳಿಸಿದೆ.
Please follow and like us:

Related posts

Leave a Comment