೧೪ ದಂದು ಜೀವನ ದರ್ಶನ ಮಾಸಿಕ ಕಾರ್ಯಕ್ರಮ.

ಸೋಮವಾರ ದಂದು ಬೆಳಿಗ್ಗೆ ೧೦-೦೦ ಗಂಟೆಗೆ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಗ್ರಂಥಾಲಯದ ಮುಂಭಾಗದಲ್ಲಿ ಜರುಗಲಿದೆ.
    ಗವಿಮಠ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ.ಸ್ವ.ಜ. ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಹಾಗೂ ಶುಭ ಸಂಕಲ್ಪದಂತೆ ೨೦೧೩-೧೪ನೇ ಸಾಲಿನಿಂದ ಮಹಾವಿದ್ಯಾಲಯದಲ್ಲಿ ವಿನೂತನವಾಗಿ ವಿದ್ಯಾರ್ಥಿಗಳಿಗಾಗಿ ಜೀವನ ದರ್ಶನ ಎಂಬ ಮಾಸಿಕ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ.
    ವಿದ್ಯಾರ್ಥಿಗಳಲ್ಲಿ ಜೀವನದ ಬಗ್ಗೆ ಆತ್ಮ ವಿಶ್ವಾಸ ಬೆಳೆಸುವದು, ಜೀವನ ಕುರಿತು ನಿರ್ದಿಷ್ಟ ಕಲ್ಪನೆ ಮೂಡಿಸುವದು ಹಾಗೂ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ಪ್ರೇರೆಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಪ್ರಸ್ತುತ ಜೀವನ ದರ್ಶನದ ಕಾರ್ಯಕ್ರಮದಲ್ಲಿ ಗವಿಮಠ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ.ಸ್ವ.ಜ. ಗವಿಸಿದ್ಧೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು ಮಾನ್ಯಶ್ರೀ ಡಾ. ಜೆ.ಎಸ್. ಪಾಟೀಲ, ವಿಶ್ರಾಂತ ಕುಲಪತಿಗಳು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಅವರು ಉಪನ್ಯಾಸ ನೀಡಲಿದ್ದಾರೆ.

Leave a Reply