ಐಟಿಐ ಖಾಲಿ ಉಳಿದ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನ.

ಕೊಪ್ಪಳ, ಜು.೨೮ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ
ಖಾಲಿ ಉಳಿದಿರುವ ವಿವಿಧ ವೃತ್ತಿ ತರಬೇತಿ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಯಲಬುರ್ಗಾ ತಾಲೂಕಿನ ಕುಕನೂರು, ಯಲಬುರ್ಗಾ(ಮ), ಮಂಗಳೂರು ಗ್ರಾಮ, ತಳಕಲ್, ಮುಧೋಳ
ಪಟ್ಟಣ ಹಾಗೂ ಯಡ್ಡೋಣಿ ಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ವಿವಿಧ
ವೃತ್ತಿಗಳಿಗೆ ಆನ್‌ಲೈನ್ ಪ್ರವೇಶ ಪಡೆದು ಉಳಿದ ಸ್ಥಾನಗಳಿಗೆ ಮೆರಿಟ್ ಕಂ ರಿಸರ್ವೇಶನ್
ಆಧಾರದ ಮೇಲೆ ನಡೆಸಲಾಗುತ್ತಿರುವ ಕ್ಯಾಸುವಲ್ ರೌಂಡ್ ಪ್ರಕ್ರಿಯೆ ಇದಾಗಿದ್ದು, ಆಸಕ್ತರು
ಅರ್ಜಿ ಸಲ್ಲಿಸಬಹುದಾಗಿದೆ. ಈ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವವರು ಹಾಗೂ
ಅರ್ಜಿ ಸಲ್ಲಿಸಿ ಯಾವುದೇ ವೃತ್ತಿಯಲ್ಲಿ ಸ್ಥಾನ ಪಡೆಯದೇ ಇರುವವರು ಸಹ ಅರ್ಜಿ
ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಗಳನ್ನು ಈ ಮೇಲೆ ತಿಳಿಸಿದ ಸಂಸ್ಥೆಗಳಲ್ಲಿ
ಪಡೆಯಬಹುದಾಗಿದ್ದು, ಹೊಸದಾಗಿ ಅರ್ಜಿ ಸಲ್ಲಿಸಲು ಜು.೩೦ ಕೊನೆ ದಿನಾಂಕವಾಗಿದೆ.
    
ಆಯಾ ಸಂಸ್ಥೆಗಳಲ್ಲಿ ಲಭ್ಯವಿರುವ ವೃತ್ತಿಗಳಲ್ಲಿ ಖಾಲಿ ಉಳಿದಿರುವ ಸ್ಥಾನಗಳ ಹಂಚಿಕೆ
ಸಂಬಂಧವಾಗಿ ಆಯಾ ಸಂಸ್ಥೆಗಳಲ್ಲಿ ಜು.೩೧ ರಂದು ಬೆಳಿಗ್ಗೆ ೦೯ ಗಂಟೆಗೆ ಸಮಾಲೋಚನೆ
ನಡೆಸುವುದರಿಂದ ಎಲ್ಲ ಅಭ್ಯರ್ಥಿಗಳು ಅಂದು ಆಯಾ ಸಂಸ್ಥೆ ಆವರಣದಲ್ಲಿ ಹಾಜರಿರುವಂತೆ
ಕುಕನೂರು ಸರ್ಕಾರಿ ಕೈಗಾರಿಕಾ ಸಂಸ್ಥೆಯ ಪ್ರಾಚಾರ್ಯ ಚನ್ನಬಸಪ್ಪ ಬಳ್ಳಾರಿ
ತಿಳಿಸಿದ್ದಾರೆ.

Leave a Reply