ಸರ್ವೆ ನಂ ೪೩೮ ಆಶ್ರಯ ಹಗರಣಕ್ಕೆ ನನಗೆ ಯಾವುದೇ ಸಂಬಂದವಿಲ್ಲ ಕಾಟನ ಪಾಷಾ.

ಕೊಪ್ಪಳ :ದಿ೧೭/೦೫/೨೦೧೨  ರ ಗುರುವಾರದಂದು ಕೊಪ್ಪಳ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಸದಸ್ಯರು  ನಡೆಸಿದ ಪತ್ರಿಕಾ ಘೋಷ್ಠಿಯಲ್ಲಿ ನಗರದ ಬಹದ್ದೂರ ಬಂಡಿ ರಸ್ತೆಯಲ್ಲಿರುವ ಆಶ್ರಯ ನಿವೇಶನಗಳ ಹಗರಣದಲ್ಲಿ ನನ್ನ ಹೆಸರನ್ನು ಶಾಮಿಲು ಮಾಡಿ ನನ್ನ ರಾಜಕೀಯ ಜೀವನವನ್ನು ತೇಜೋವದೆಗೆ  ಪ್ರಯತ್ನಿಸಿದ್ದಾರೆ. ನಾನು ಒಬ್ಬ ವ್ಯಾಪಾರಸ್ತನಾಗಿದ್ದು ಇದೂವರೆಗೂ ನನ್ನ ವಯಕ್ತಿಕ ಜೀವನದಲ್ಲಿ ಯಾವುದೇ ಅಪರಾದ ಮನೋಬಾವನೆಯುಳ್ಳ ಕೆಲಸವನ್ನು ಮಾಡಿಲ್ಲ.  ನನ್ನ ಮತ್ತ ನನ್ನ ಕುಟುಂಬದ ಸದಸ್ಯರ ೨೦ ಮನೆಗ ಆರೋಪವನ್ನು ಮಾಡಿದ್ದಾರೆ. ಇದು ನಿರಾದಾರ ಆರೋಪವಾಗಿದೆ. ೨೦೦೫ ಮತ್ತು ೨೦೦೬ ನೆ ಸಾಲಿನಲ್ಲಿ ನಡೆದಿರು ಸಂದರ್ಭದಲ್ಲಿ ನಾನು ನಗರಸಭೆಯ ಸದಸ್ಯನಾಗಿರಲಿಲ್ಲ.
ಇದೊಂದು ರಾಜಕೀಯ  ದುರುದ್ದೇಶದಿಂದ ನನ್ನ ಹೆಸರನ್ನು ಈ ಹಗರಣದಲ್ಲಿ ಶಾಮೀಲು ಮಾಡಲಾಗಿದೆ. ಹಾಗೂ ನನ್ನ ವಯಕ್ತಿಕ ಪ್ರತಿಷ್ಠೆಯ ತೇಜೋವದೆಗೆ ಪ್ರಯತ್ನಮಾಡಲಾಗಿದೆ. ಈ ಹಗರಣದಲ್ಲಿ ನಾನು ಪರೋಕ್ಷವಾಗಿ ಅಥವಾ ಅಪರೋಕ್ಷವಾಗಿ ಶಾಮೀಲಾಗಿದ್ದರೆ. ಈ ಹಗರಣವನ್ನು ನನ್ನ ರಾಜಕೀಯ ಜೀವನದ ಸವಾಲಾಗಿ ಸ್ವೀಕರಿಸುತ್ತೆನೆ. ಈ ಹಗರಣದ ಸತ್ಯಾಂಶ  ಜಿಲ್ಲಾಧಿಕಾರಿಗಳ ಮತ್ತು ಸರಕಾರದ ಗಮನದಲ್ಲಿದ್ದು ಇದರ ತನಿಖೆಗೆ ನನ್ನ ಸಂಪೂರ್ಣ ಬೆಂಬಲವಿರುತ್ತದೆ. ಈ ಹಗರಣದ ಬಹಿರಂಗ ಚರ್ಚೆಗೆ ನಾನು ಸದಾ ಸಿದ್ದ. ಎಂದು  ನಗರಸಭೆ ಸದಸ್ಯರಾದ ಎಂ. ಕಾಟನ ಪಾಷಾ ತಿಳಿಸಿದ್ದಾರೆ. 
Please follow and like us:
error