ಪುಣ್ಯಸ್ಮರಣ್ಮೋತ್ಸವ

ಸಂಸ್ಥಾನ ಗವಿಮಠದ ಪರಂಪರೆಯ ೧೭ನೇ ಪೀಠಾಧೀಶರಾದ       ಶ್ರೀ.ಮ.ನಿ.ಪ್ರ.ಜ|| ಶ್ರೀ ಶಿವಶಾಂತ ಶಿವಯೋಗಿಗಳು
(    ಪುಣ್ಯಸ್ಮರಣ್ಮೋತ್ಸವ ನಿಮಿತ್ಯ)
ಸಹಸ್ರಾರು ವರ್ಷಗಳ ಸಾಹಿತ್ಯಿಕ-ಸಾಂಸ್ಕೃತಿಕ ಹಾಗೂ ಧಾರ್ಮಿಕ ದಾಖಲೆಗಳನ್ನು ಶಿಲಾಶಾಸನಗಳನ್ನು ತನ್ನೊಡಲಾಳದಲ್ಲಿ ಗರ್ಭೀಕರಿಸಿಕೊಂಡಿರುವ, ಕೊಪ್ಪಳ, ಶಾಸನಗಳಲ್ಲಿ ಕೊಪಣ್,  ಕೊಪಣ ತೀರ್ಥ, ವಿಧಿತ ಮಹಾನಗರ ಎಂಬ ಖ್ಯಾತಿಯನ್ನು ಹೊಂದಿರುವುದರ ಮುಖೇನ ತಿರುಳ್ಗನ್ನಡ ನಾಡುಎಂಬ ಹೆಗ್ಗಳಿಕೆಯನ್ನೂ  ಸಹ ಹೊಂದಿದೆ.
ನಗರದ ಪೂರ್ವದ ಬೆಟ್ಟದಲ್ಲಿ ಕಂಗೊಳಿಸುವ ಗವಿಮಠ, ಅನ್ನ-ಅಕ್ಷರ-ಆಧ್ಯಾತ್ಮ ದಾಸೋಹದ ತವನಧಿಯಾಗಿದೆ. ಶ್ರೀಮಠದ ಎಲ್ಲ ಶಿವಯೋಗಿಗಳು ಈ ತ್ರಿವಿಧ ದಾಸೋಹವನ್ನು ನಿರಂತರವಾಗಿ ಸಾಗಿಸಿಕೊಂಡುಬಂದವರಾಗಿದ್ದಾರೆ.  ಈಗಾಗಲೇ ೧೮ ಪೀಠಾಧೀಶರನ್ನು ಹೊಂದಿದ ಹೆಗ್ಗಳಿಕೆಗೆ  ಪಾತ್ರವಾಗಿದೆ. ಈ ಮಣಿಮಾಲಿಕೆಯಲ್ಲಿಯೇ ಸಾಗಿಬಂದ ಜ|| ಶಿವಶಾಂತವೀರ ಮಹಾಶಿವಯೋಗಿಗಳವರು ೧೭ನೇ ಪೀಠಾಧಿಪತಿಗಳಾಗಿದ್ದಾರೆ. ಪೂಜ್ಯರ ಆಧ್ಯಾತ್ಮಿಕ-ಸಾಮಾಜಿಕ, ಸಾಹಿತ್ಯಿಕ ಹಾಗೂ ಶೈಕ್ಷಣಿಕ ಕಾರ್ಯಗಳು ಅಗಣಿತ ಹಾಗೂ ಅಪರಿಮಿತವಾಗಿವೆ. ಅವರ ಸಮಾಜಮುಖಿ ಬದುಕು ಆದರ್ಶವಾದದಾಗಿದೆ.
*ಜನನ-ಬಾಲ್ಯ-ಶಿಕ್ಷಣ : ಇಂದಿನ ಗದಗ ಜಿಲ್ಲೆಗೆ ಸೇರಿದ ರೋಣ ತಾಲೂಕಿನ ’ಸೂಡಿ’ ಶಿವಯೋಗಿಗಳ ಜನ್ಮಸ್ಥಳ. ಅಲ್ಲಿಯ ಜುಕ್ತಿ ಹಿರೇಮಠದ ಜಗಧಿಶ್ವರಯ್ಯ ಹಾಗೂ ಬಸವಾಂಬೆಯರ ಪೂಜ್ಯರ ತಂದೆ-ತಾಯಿಗಳು ಬಾಲ್ಯದ ನಾಮ ಉಮಾಪತಿ ಸೂಡಿ ಕೊಪ್ಪಳ ಹಾಗೂ ಬೆಂಗಳೂರಿನಲ್ಲಿ ಶಿಕ್ಷಣ ಪಡೆದ ಪೂಜ್ಯರು ಆಧ್ಯಾತ್ಮ  ವಿದ್ವಾತ್ತು ವಿನಯ ಹಾಗೂ ದಯಾಪರತೆಯ ದಿವ್ಯ ತೇಜಸ್ವಿನಿಂದಾಗಿ ಶ್ರೀ ಮಠದ ೧೬ನೇ ಪೀಠಾಧಿಪತಿಗಳಾಗಿದ್ದ ಜ|| ಮರಿಶಾಂತವೀರ ಮಹಾಶಿವಯೋಗಿಗಳವರ ಪೂರ್ಣ ಕೃಪೆಗೆ ಪಾತ್ರರಾಗಿದ್ದರು.
 ಈ ನಾಡಿನ ಭಕ್ತರ ಅಪೇಕ್ಷೆಯ ಮೇರೆಗೆ  ದಿನಾಂಕ: ೨೭/೦೪/೧೯೬೬ ರಂದು  ಶ್ರೀ.ಮ.ನಿ.ಪ್ರ.ಜ. ಶಿವಶಾಂತವೀರ ಮಹಾಸ್ವಾಮಿಗಳೆಂಬ ಅಭಿನಾಮದಿಂದ ಶ್ರೀ ಮಠದ ಪೀಠಾಧಿಕಾರಿಗಳಾದರು. ಸಮಾಜೋದ್ಧಾರಕ್ಕಾಗಿ, ಶ್ರೀಮಠದ ಸರ್ವಾಂಗೀಣ ಉನ್ನತಿಗಾಗಿ ಅಖಂಡ ೩೬ ವರ್ಷಗಳ ಕಾಲ ಅಹರ್ನಿಸಿ ಶ್ರಮಿಸಿ ತಮ್ಮ ಕಾಯವನ್ನು  ಶ್ರೀಗಂಧದಂತೆ ಸವೆಸಿದವರು ನೂತನರಥ, ಪುಷ್ಕರಣೆಯಲ್ಲಿ ೧೫ನೇ ಶ್ರೀಗಳವರ ಶಿಲಾಮೂರ್ತಿ, ಶ್ರೀಮಠಕೊಪ್ಪುವ ಮಹಾದ್ವಾರ, ಶಾಖಾಮಠಗಳ ಜೀಣೋದ್ವಾರ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗಳಂತಹ ಮಹಾನ್ ಕಾರ್ಯಗಳನ್ನು ಕೈಗೂಂಡವರು ಶಿವಯೋಗಿಗಳವರು.
ಆಯುರ್ವೇದದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಜ|| ಮರಿಶಾಂತವೀರ ಮಹಾಶಿವಯೋಗಿಗಳ ಅಪೇಕ್ಷೆಯ ಮೇರೆಗೆ ಆಗಿನ ಸಂದರ್ಭದಲ್ಲಿಯೇ  ಸು. ೫-೬ ಕೋಟಿ ರೂಪಾಯಿಗಳನ್ನು ವ್ಯಯಿಸಿ ಜ|| ಗವಿಸಿದ್ಧೇಶ್ವರ ಆಯುರ್ವೇದ ಆಸ್ಪತ್ರೆ ಹಾಗೂ ಮಹಾವಿದ್ಯಾಲಯವನ್ನು ಸ್ಥಾಪಿಸಿ ಆಯುರ್ವೇದ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದವರಾಗಿದ್ದಾರೆ. ಸರಳ, ಸಜ್ಜನಿಕೆಯ, ನಿರಾಡಂಬರ ಶಿವಯೋಗಿಗಳು ಶಿವಪೂಜೆ-ಅನುಷ್ಠಾನ ಪ್ರೇಮಿಗಳಾಗಿದ್ದರು. ಪ್ರತಿ ಮಂಗಳವಾರದಂದು ಮೌನ-ಅನುಷ್ಠಾನ ಕೈಗೊಳ್ಳುತ್ತಿದ್ದರು.  ಶ್ರೀ ಗವಿಸಿದ್ಧೇಶ್ವರ ಸುಪ್ರಭಾತ ಹಾಗೂ ಮಂಗಲ ಗೀತೆಗಳಂತಹ ಕೃತಿಗಳನ್ನು ಶಿವಯೋಗಿಗಳು ರಚಿಸಿದ್ದಾರೆ. ಮರಿಶಾಂತವೀರ ಮಹಾಸ್ವಾಮಿಗಳವರ ಗೌರವ ಗ್ರಂಥ  ಗವಿದೀಪ್ತಿ  ಹಾಗೂ           ಶ್ರೀ ಗವಿಸಿದ್ಧೇಶ್ವರ ಪುರಾಣಂಗಳಂತಹ ಕೃತಿಗಳು ಪೂಜ್ಯರ ಸಾನಿಧ್ಯದಲ್ಲಿಯೇ ಪ್ರಕಟಣೆಗೊಂಡಿವೆ. 
ಅನುಷ್ಠಾನ-ಅಂತಃಕರುಣೆ ಭಕ್ತರೇ ತಮ್ಮ ಸರ್ವಸ್ವ ಹಾಗೂ ಭಕ್ತ ಕೋಟಿಯ ಕಲ್ಯಾಣೆವೇ ತಮ್ಮ ಜಪ-ತಪ,  ಮಂತ್ರ-ಸಾಧನೆ -ಸಿದ್ಧಿ -ಹಾಗೂ ಸಾರ್ಥಕತೆಯ ಪರಮ ಪವಿತ್ರ ಧ್ಯೇಯದಿಂದ ಸಂಪೂರ್ಣವಾಗಿ ತಮ್ಮ ಸರ್ವಸ್ವವನ್ನೇ ಜನಹಿತಕ್ಕಾಗಿ ಸಮರ್ಪಿಸಿಕೊಂಡ ಸಮಾಜಮುಖಿ ಶಿವಯೋಗಿಗಳಾಗಿದ್ದರು. ಆಂತಃಕರಣದ ಆಗರ-ಆಧ್ಯಾತ್ಮದ ತವನಿಧಿಗಳಾಗಿದ್ದ ಶಿವಯೋಗಿಗಳು ನಡೆದಾಡುವ ದೇವರೆಂದೇ ಖ್ಯಾತಿಗೊಂಡವರಾಗಿದ್ದರು. ಇಂತಹ ಪೂಜ್ಯ ಶಿವಯೋಗಿಗಳು ಲಿಂಗಪೂಜಾನುಷ್ಠಾನ ಗೈಯುತ್ತ ಆ ಲಿಂಗದ ಬೆಳಕಿನಲ್ಲಿ ೨೬.೦೩.೨೦೦೩ ರಂದು ಬೆಳಕಾಗಿ ಬಯಲಾದರು.
ಶಿವಯೋಗಿಗಳ ಸ್ಮರಣೋತ್ಸವ ಬದುಕಿಗೆ ದಿವ್ಯ ಚೇತನ ನೀಡಲಿ ಅವರ ಕೃಪಾಶೀರ್ವಾದ ಸದಾ ಶ್ರೀರಕ್ಷೆಯಾಗಿಲಿ ಎಂದು ಶಿವಯೋಗಿಗಳ ಸನ್ನಿಧಿಗೆ ಅನಂತ ನಮನಗಳನ್ನುರ್ಪಿಸುವೆನು.
                                 –             ಎಸ್.ಎಮ್.ಕಂಬಾಳಿಮಠ ,  ಹಿರಿಯ ಸಾಹಿತಿಗಳು ಕೊಪ್ಪಳ.  
Please follow and like us:
error

Related posts

Leave a Comment