fbpx

ಕಾಂಗ್ರೇಸ್ ನಿಂದ ದೇಶ ನಿರ್ಮಾಣವಲ್ಲ, ನಿರ್ನಾಮ – ದೊಡ್ಡನಗೌಡ ಪಾಟೀಲ

 ಸ್ವಾತಂತ್ರ್ಯದ ಹೋರಾಟದ ಹೆಸರಿನಲ್ಲಿ ಪ್ರಾರಂಭವಾದ ಕಾಂಗ್ರೆಸ್, ಅಧಿಕಾರದ ಗದ್ದುಗೆಯನ್ನು ಹಿಡಿದು ಭಾರತೀಯರ ಕನಸುಗಳನ್ನು ನನಸು ಮಾಡುವಂತ ಆಡಳಿತವನ್ನು ನೀಡಲೆ ಇಲ್ಲ. ೫ದಶಕಕ್ಕೂ ಹೆಚ್ಚು ಕಾಲ ದೇಶವನ್ನು ಆಳಿದ ಕಾಂಗ್ರೆಸ್ ನಾಯಕರು ದೇಶದ ಹಿತಕ್ಕಿಂತ ಸ್ವಹಿತಾಶಕ್ತಿಗೆ  ಹೆಚ್ಚು ಪ್ರಾಧಾನ್ಯತೆ ಕೊಟ್ಟಿದ್ದು ದೇಶದ ದೌರ್ಭಾಗ್ಯದ ಸಂಗತಿ ಅಲ್ಲದೇ ಇಲ್ಲಿಯವರೆಗೂ ದೇಶ ನಿರ್ಮಾಣವಾಗಿಲ್ಲ ಸಂಪೂರ್ಣವಾಗಿ ನಿರ್ನಾಮವಾಗಿದೆ ಎಂದು ಕುಷ್ಟಗಿಯ ಶಾಸಕರಾದ ದೊಡ್ಡನಗೌಡ ಪಾಟೀಲ ಹೇಳಿದರು.     
ಅವರು ದಿ.೨೨.೦೩.೨೦೧೪ ರಂದು ಕೂಕನಪಳ್ಳಿಯಲ್ಲಿ ಜರುಗಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಸಂಯುಕ್ತ ಪ್ರಗತಿಪರ ಒಕ್ಕೂಟ (ಯು.ಪಿ.ಎ) ಈಗ ಸಂಯುಕ್ತ ಭ್ರಷ್ಟಾಚಾರಿಗಳ ಒಕ್ಕೂಟವಾಗಿದೆ. ಸರಕಾರದ ಮಂತ್ರಿಗಳು, ಸಂಬಂಧಿಗಳು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಯು[ಇಎ ಸರಕಾರ ಸಿ.ಬಿ.ಐಗಳನ್ನು ತನ್ನ ಕೈಗೊಭೆಯನ್ನಾಗಿ ಮಾಡಿಕೊಂಡಿದೆ.  ಇಂದು ಸಿ.ಬಿ.ಐ ಕಾಂಗ್ರೇಸ ಬ್ಯೂರೋ ಆಫ್ ಇನ್ವ್ವಸ್ಟಿಗೆಷನ್ ಎಂಬತಾಗಿದೆ ಎಂದು ಕಿಡಿಕಾಡಿದರು. 
ವಿಧಾನ ಪರಿಷತ್ ಸದಸ್ಯರಾದಲಪ್ಪ ಆಚಾರ ಮಾತನಾಡಿ, ಯು.ಪಿ.ಎ.ಸರಕಾರದ ನಡುವಳಿಕೆಯಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ  ಅತ್ಯಂತ ದುರ್ಬಲ ರಾಷ್ಟ್ರವೆಂಬ ಭಾವನೆಯೂ ವ್ಯಾಪಕವಾಗುತ್ತಿದೆ. ಚೀನಾ ಆಕ್ರಮವಾಗಿ ಭಾರತದ ಗಡಿಯೊಳಗೆ ಪ್ರವೇಶ ಮಾಡುತ್ತಲೆ ಇದ್ದರು ಯಾವುದೇ ರೀತಿಯ ದಿಟ್ಟ ಕ್ರಮ ಕೈಗೊಳ್ಳಲ್ಲು ಯು.ಪಿ.ಎ ಸರಕಾರ ಮೀನಾಮಿಷ ಎಣಿಸುತ್ತಿದೆ. ಪಾಕಿಸ್ತಾನ ನಮ್ಮ ಸೈನಿಕರನ್ನು ಅಮಾನುಷವಾಗಿ ಹತ್ಯೆಗೈದರು ಮೌನದಿಂದಿದೆ ಆದ್ದರಿಂದ ಕಾಂಗ್ರೇಸ್ ಮುಕ್ತ ಭಾರತದ ನಿರ್ಮಾಣಕ್ಕಾಗಿ  ಎಲ್ಲರೂ ಬಿ.ಜೆ.ಪಿ ಯೊಂದಿಗೆ ಕೈಜೋಡಿಸಬೇಕೆಂದು ಮಾತನಾಡಿದರು. 
ಮಾಜಿ ಶಾಸಕರಾದ ಪರಣ್ಣ ಮನವಳ್ಳಿ ಮಾತನಾಡಿ ಕಾಂಗ್ರೇಸ ಹಗರಣಗಳ ಜನಕ ಎಂದರು ತಪ್ಪಾಗಲಾರದು. ಹಗರಣಗಳ ತನಿಖೆಗಳನ್ನು ಮುಚ್ಚಿ ಹಾಕುವ, ತೆರಿಗೆಗಳ್ಳತನಕ್ಕೆ ರಹದಾರಿ ಒದಗಿಸಿದ ಕೀರ್ತಿ ಕಾಂಗ್ರೇಸಗೆ ಸಲ್ಲುತ್ತದೆ. ಕಾಂಗ್ರೇಸ ನಾಯಕರು ದೇಶದ ಹಣವನ್ನು ಕೊಳ್ಳೆ ಹೊಡೆದು ಆಕ್ರಮವಾಗಿ ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದಾರೆ ಎಂದು ಹೇಳಿದರು. 
ಅಭ್ಯರ್ಥಿಯಾದ ಸಂಗಣ್ಣ ಕರಡಿ, ಬಿ.ಜೆ.ಪಿ ಲೋಕಸಭಾ ಪ್ರಭಾರಿಗಳಾದ ಹೆಚ್.ಗಿರೇಗೌಡ್ರ, ತಿಪ್ಪೆರುದ್ರಯ್ಯಸ್ವಾಮಿ, ಹೆಚ್ ಬಸಣ್ಣ, ಬಸವರಾಜ ದಡೇಗಸೂರ, ಅಪ್ಪಣ್ಣ ಪದಕಿ, ಸಂಗನಗೌಡ ಪಾಟೀಲ, ಎ.ಪಿ.ಎಮ್.ಸಿ ಸದಸ್ಯರಾದ ಫಕಿರಯ್ಯ ಹಿರೇಮಠ,   ಗ್ರಾ.ಪಂ ಅಧ್ಯಕ್ಷರಾದ ಅಮರಮ್ಮ ಒಂಟಿಗಾರ ಉಮೇಶಪ್ಪ ಶಾನಬೋಗರ, ಪಂಚಯ್ಯ ಹಿರೇಮಠ, ಶಂಭುಲಿಂಗ ಕಿನ್ನಾಳ, ಅಮರೇಶ ಓಬಳಬಂಡಿ, ಶೇಖರಪ್ಪ ಕರಡಿ, ಮಂಜುನಾಥ ಮುಸ್ಲಾಪೂರ,  ಇನ್ನೂ ಅನೇಕ ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು. ಮುತ್ತಣ್ಣ ಕರಡಿ ನಿರೂಪಿಸಿ, ವಂದಿಸಿದರು. 
Please follow and like us:
error

Leave a Reply

error: Content is protected !!