ಸನ್ಮಾನ ವ್ಯಕ್ತಿಗೆ ನೈತಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ

 ಕೆ. ರಾಘವೇಂದ್ರ ಹಿಟ್ನಾಳ
 ಕೊಪ್ಪಳ :  ನಗರದ ಕೆ.ಜಿ.ಎನ್ ಸಾಮಿಲ್ ನಲ್ಲಿ ಅಪ್ಸರ ಸಾಬ ಅತ್ತ್ತಾರ ಇವರ ಕುಟುಂಬದ ವತಿಯಿಂದ ಕೊಪ್ಪಳ ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷರಾದ ಕೆ.ರಾಘವೇಂದ್ರ ಹಿಟ್ನಾಳ ಇವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಇವರು ಸನ್ಮಾನಗಳು ವ್ಯಕ್ತಿಯ ಜವಾಬ್ಧಾರಿಯನ್ನು ಹೆಚ್ಚಿಸಿ ಸಮಾಜ ಸೇವೆ ದೀನದಲಿತರ ಹಾಗೂ ಹಿಂದುಳಿದ ವರ್ಗಗಳ ಸೇವೆ ಮಾಡಲು ಸನ್ಮಾನಿತ ಚುನಾಯಿತ ಪ್ರತಿನಿಧಿಗೆ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಇತ್ತೀಚಿನ  ದಿನಗಳಲ್ಲಿ ರಾಜಕಾರಣಿಗಳ ಮನೋಧರ್ಮ ಬದಲಾಗುತ್ತಿದ್ದು ಕೇವಲ ಸ್ವಜನ ಪಕ್ಷಪಾತ, ಅಧಿಕಾರದದಾಹ ಹೆಚ್ಚಾಗುತ್ತಿದೆ. ಚುನಾಯಿತ ಪ್ರತಿನಿಧಿಗಳು ಮಾನವಿಯ ಮೌಲ್ಯಗಳನ್ನು ಭಿಂಬಿಸುವ ತತ್ವ ಸಿದ್ದಾಂತಕ್ಕೆ ಒಳಗಾಗಬೇಕೆಂದು ಈ ವೇಧಿಕೆಯ ಮುಖಾಂತರ ಪ್ರತಿಯೋಬ್ಬ ಮನುಷ್ಯನು ತನ್ನ ಜೀವನದಲ್ಲಿ ಪರೋಪಕಾರ ಭಾವನೆಯನ್ನು ಹಾಗೂ ಸೌಹಾರ್ಧತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. 
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ, ಎಸ್.ಬಿ.ನಾಗರಳ್ಳಿ, ಕರಿಯಣ್ಣ ಸಂಗಟಿ, ಕಾಟನ್ ಪಾಷಾ, ಹೆಚ್.ಎಲ್.ಹಿರೇಗೌಡ್ರ, ಅಮ್ಜ್ಜದ್ ಪಟೆಲ, ಜಾಖೀರ ಕಿಲ್ಲೇದಾರ, ಮಾನ್ವಿ ಪಾಷಾ, ಇಂಧಿರಾ ಭಾವಿಕಟ್ಟಿ, ದೇವಮ್ಮ ಚನ್ನವಡಯರಮಠ, ನಾಗರಾಜ ಚಳ್ಳೋಳ್ಳಿ, ಯಮನೂರಪ್ಪ ನಾಯಕ, ಗಾಳೇಪ್ಪ ಪೂಜಾರ, ಗವಿಸಿದ್ದಪ್ಪ ಮುದಗಲ್, ಸೋಮಲಿಂಗಪ್ಪ ಬಾರಕೆರ, ಈಶಪ್ಪ ಮಾದಿನೂರ, ಗವಿಸಿದ್ದಪ್ಪ ಕಂದಾರಿ, ಹನುಮರಡ್ಡಿ ಅಂಗನಕಟ್ಟಿ,  ದ್ಯಾಮಣ್ಣ ಚಿಲವಾಡಗಿ, ನಾಗರಾಜ ಬಳ್ಳಾರಿ, ಯಲ್ಲಪ್ಪ ಕಾಟ್ರಳ್ಳಿ, ಜಡಿಯಪ್ಪ ಬಂಗಾಳ್ಳಿ, ಸುರೇಶ ದಾಸರಡ್ಡಿ ಪ್ರಸ್ತಾವಿಕ ಭಾಷಣ ಮಾಡಿದರು. ಶಿವಾನಂದ ಹೊದ್ಲೂರು ಸ್ವಾಗತಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಅಕ್ಬರಪಾಷಾ ಪಲ್ಟನ್ ಮಾಡಿದರು. 

Leave a Reply