ಮರಳಿ ಶಾಲೆಗೆ : ಸರ್ಕಾರೇತರ ಸಂಘ ಸಂಸ್ಥೆಗಳಿಂದ ಪ್ರಸ್ತಾವನೆ ಆಹ್ವಾನ

  ಸಾರ್ವಜನಿಕ ಶಿಕ್ಷಣ ಇಲಾಖೆಯು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಸಂಬಂಧ ಅರ್ಹ ಸರ್ಕಾರೇತರ ಸಂಘ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.
  ಎನ್.ಜಿ.ಓ. ನೋಂದಾಯಿತ ನಮೂನೆಗಳು ವೆಬ್‌ಸೈಟ್ ವಿಳಾಸ http://ssakarnataka.gov.in
£À°è 
ನಲ್ಲಿ ಲಭ್ಯವಿದ್ದು, ಪ್ರಸ್ತಾವನೆ ಸಲ್ಲಿಸುವ ಆಸಕ್ತ ಸರ್ಕಾರೇತರ ಸಂಘ ಸಂಸ್ಥೆಗಳು ಕಡ್ಡಾಯವಾಗಿ ವಿವಿಧ ಅರ್ಹತೆಗಳನ್ನು ಹೊಂದಿರಬೇಕಾಗಿರುತ್ತದೆ. 
  ಎನ್‌ಜಿಓ ಸಂಸ್ಥೆ ನೋಂದಣಿಗೊಂಡು ಕನಿಷ್ಠ ೫ ವರ್ಷ ಆಗಿರಬೇಕು, ೫ ವರ್ಷದ ವಾರ್ಷಿಕ ವರದಿ ಸಲ್ಲಿಸಬೇಕು.  ಭಾಗವಹಿಸುವ ಸಂಸ್ಥೆಯು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಮಾನವ ಸಂಪನ್ಮೂಲ ವಿವರದ ಪಟ್ಟಿಯನ್ನು ವಿದ್ಯಾರ್ಹತೆ ದಾಖಲಾತಿಗಳ ಪ್ರತಿಗಳೊಂದಿಗೆ ಸಲ್ಲಿಸಬೇಕು. ೫ ವರ್ಷದ ಆಡಿಟ್ ವರದಿ ಅದರಲ್ಲಿ ಪ್ರತಿಕೂಲ ಷರಾಗಳು ಇರಬಾರದು. ೫ ವರ್ಷದ ಆದಾಯ ತೆರಿಗೆ ಪಾವತಿಸಿರುವ ಪ್ರತಿ, ಹಣಕಾಸಿನ ವಹಿವಾಟು ಹಾಗೂ ಬ್ಯಾಂಕ್ ಶಿಲ್ಕು ವಿಶೇಷ ತರಬೇತಿ ಕೇಂದ್ರ ನಡೆಸಲು ಖಾತ್ರಿ ಪಡಿಸಬೇಕು, ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ಇಚ್ಚಿಸಿರುವ ಕಾರ್ಯತಂತ್ರದಲ್ಲಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. ಎಲ್ಲಾ ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ದ್ವಿಪ್ರತಿಯಲ್ಲಿ ಪ್ರಸ್ತಾವನೆಗಳನ್ನು ಸರ್ವ ಶಿಕ್ಷಣ ಅಭಿಯಾನ ಜಿಲ್ಲಾ ಕಛೇರಿಗೆ ಜೂ.೦೩ ಒಳಗಾಗಿ ಸಲ್ಲಿಸಬಹುದಾಗಿದೆ .

Leave a Reply