fbpx

ಭೂಚೇತನ; ಗುಚ್ಚಗ್ರಾಮ ತರಬೇತಿ

 ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಭೂಚೇತನ ಯೋಜನೆಯಡಿ ಗುಚ್ಚಗ್ರಾಮ ತರಬೇತಿಯನ್ನು ಬೂದಗುಂಪ ಗ್ರಾಮದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

   ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿಗಳಾದ ಮಹ್ಮಮದ ಗೇಸುದರಾಜ ಬೀಜೋಪಚಾರ ಹಾಗೂ ಲಘುಪೋಷಕಾಂಶಗಳ ಬಳಕೆ ಕುರಿತು ರೈತ ಬಾಂದವರಿಗೆ ತಿಳಿಸಿಕೊಟ್ಟರು. ತರಬೇತಿಯಲ್ಲಿ ರೈತರಿಗೆ ಬೀಜೋಪಚಾರ, ಅದರ ಮಹತ್ವ ಹಾಗೂ ಬೀಜೋಪಚಾರ ಮಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷತೆ ಮೂಲಕ ತಿಳಿಸಿದರು. ಅಲ್ಲದೆ ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ದೊರೆಯುವ ಟ್ರೈಕೋಡರ್ಮಾ, ಜಿಂಕ್‌ಸಲ್ಫೇಟ್, ಪಿ.ಎಸ್.ಬಿ ಮತ್ತು ಬೋರ್‍ಯಾಕ್ಸ ಇವುಗಳನ್ನು ಉಪಯೋಗಿಸುವ ವಿಧಾನದ ಬಗ್ಗೆ ತಿಳಿಸಿದರು.  ತರಬೇತಿಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಾಕ್ಷರಾದ   ಹನುಮಂತಪ್ಪ ಹೊಳೆಯಾಚೆ, ರೈತ ಸಂಘದ ಜಿಲ್ಲಾ ಸಂಚಾಲಕರಾದ ನಿಂಗಪ್ಪ ಘಂಟಿ, ಕೃಷಿ ಅನುವುಗಾರರು ಹಾಗೂ ಗ್ರಾಮದ ಪ್ರಗತಿಪರ ರೈತರು ಭಾಗವಹಿಸಿದ್ದರು.
ಲೇಬಗೇರಿಯಲ್ಲಿ ಬೀಜೋಪಚಾರ ಆಂದೋಲನ ಯಶಸ್ವಿ  
  ಕೃಷಿ ಇಲಾಖೆಯು ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೀಜೋಪಚಾರ ಆಂದೋಲನ ಕಾರ್ಯಕ್ರಮವನ್ನು  ಇರಕಲ್ಲಗಡ ಹೋಬಳಿಯ ಲೇಬಗೇರಿ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ ಕಾರ್ಯಕ್ರಮ ಯಶಸ್ವಿಗೊಂಡಿತು.
     ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರಾದ ಬಿ. ಮಂಜುಳಾ ಅವರು, ಬೀಜೋಪಚಾರದ ಮಹತ್ವ ಕುರಿತು ರೈತ ಬಾಂದವರಿಗೆ ತಿಳಿಸಿ ಕೊಟ್ಟರು. ಡಾ|| ಯೂಸೂಫ್ ವಿಜ್ಞಾನಿಗಳು ಕೃಷಿ ವಿಸ್ತರಣಾ ಘಟಕ ಇವರು ತರಬೇತಿಯಲ್ಲಿ ರೈತರಿಗೆ   ಬೀಜೋಪಚಾರ ಮಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷತೆ ಮೂಲಕ ತಿಳಿಸಿದರು.  ಸುಜಾತ ಹೆಬ್ಬಳ್ಳಿ ಕೃಷಿ ಅಧಿಕಾರಿಗಳು, ಇರಕಲ್ಲಗಡ ಇವರು ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ತರಬೇತಿಯಲ್ಲಿ ಗ್ರಾಮ ಪಂಚಾಯಿತ ಸದಸ್ಯರಾದ ದ್ಯಾಮಣ್ಣ, ಯಲ್ಲಪ್ಪ, ಪಿಡಿಓ ಗಳಾದ  ಕೃಷ್ಣರೆಡ್ಡಿ  ಹಾಗೂ ನರಸಿಂಹಚಾರಿ, ಮಾರುತಿ ಯುವಕ ಸಂಘ ಅಧ್ಯಕ್ಷರು ಉಪಸ್ಥಿತರಿದ್ದರು. ಸಹಾಯಕ ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರ ಇರಕಲ್ಲಗಡ ಇವರು ಕಾರ್ಯಕ್ರಮ ನಿರೂಪಿಸಿದರು.
ಕೃಷಿ ಸಾಮಗ್ರಿ ಖರೀದಿಸುವ ರೈತರಿಗೆ ಕೃಷಿ ಇಲಾಖೆ ಸಲಹೆ
ಕೃಷಿ ಪರಿಕರಗಳಾದ ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ ಮುಂತಾದ ಸಾಮಗ್ರಿ ಖರೀದಿಸುವ ರೈತರು ವಹಿಸಬೇಕಾದ ಮುಂಜಾಗ್ರತೆಗಳ ಬಗ್ಗೆ ಕೃಷಿ ಇಲಾಖೆ ರೈತರಿಗೆ ಸಲಹೆಗಳನ್ನು ನೀಡಿದೆ.
  ರೈತಬಾಂಧವರು ಹಂಗಾಮು ಪ್ರಾರಂಭವಾಗುತ್ತಿದ್ದಂತೆಯೆ ಕೃಷಿಯಲ್ಲಿ ತೊಡಗಲು ಪ್ರಾರಂಭಿಸುತ್ತಾರೆ. ಕೃಷಿಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ತಯಾರಿಯು ರಭಸದಿಂದ ಸಾಗುತ್ತದೆ. ಕೃಷಿಗೆ ಬೇಕಾದ ಬೀಜ, ರಸಗೊಬ್ಬರ ಕೀಟನಾಶಕಗಳ ಖರೀಧಿಯು ಪ್ರಾರಂಭವಾಗುತ್ತದೆ. ರೈತ ಬಂಧವರು ಅವೈಜ್ಞಾನಿಕವಾಗಿ ಬೀಜಗಳನ್ನು ಖರೀಧಿಸಿ ಮತ್ತು ರೋಗಗಳು / ಕೀಟಗಳ ಬಾದೆ ಕಂಡು ಬಂದಾಗ ಔಷಧಿಗಳನ್ನು ಖರೀಧಿಸಿ ಹೆಚ್ಚು ಹಣ ಖರ್ಚುಮಾಡಿಕೊಂಡು ನಷ್ಟ ಅನುಭವಿಸಿದ ಘಟನೆಗಳ ಸಹ ಇವೆ ಅದ್ದರಿಂದ ರೈತ ಬಂಧವರು ಯಾ ವುದೇ ಕೃಷಿ ಪರಿಕರಗಳನ್ನು ಕೊಳ್ಳಬೇಕಾದರೆ ವೈಜ್ಞಾನಿಕ ಮತ್ತು ಕಾಯ್ದೆಗಳ ಅಂಶಗಳನ್ನು ಮನದಲ್ಲಿಟ್ಟುಕೊಂಡು ಖರೀಧಿಸಿದಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಬಹುದಾಗಿದೆ.
  ರೈತರು ಬಿತ್ತನೆ ಬೀಜ ಖರೀದಿಸುವಾಗ ಅಧಿಕೃತ ಬಿತ್ತನೆ ಬೀಜ ಮಾರಾಟಗಾರರಿಂದಲೇ ಬಿತ್ತನೆ ಬೀಜವನ್ನು ಖರೀದಿಸಬೇಕು. ತಪ್ಪದೆ ಅಧಿಕೃತ ರಶೀದಿ ಪಡೆಯಬೇಕು ರಶೀದಿಯಲ್ಲಿ ಲಾಟ್ ನಂಬರ್ ನಮೂದಿಸಿರುವ ಬಗ್ಗೆ ಗಮನಿಸಬೇಕು. ಚೀಲದ ಮೇಲೆ ನಮೋದಿಸಿರುವಂತೆ ತೂಕ ಸರಿಯಾಗಿದೆಯೇ? ಚೀಲವನ್ನು ಮಿಷಿನಿನಿಂದ ಹೊಲೆಯಲಾಗಿದೆಯೆ? ಬಿತ್ತನೆ ಬೀಜದ ಉತ್ಪಾದಕರು ಹಾಗೂ ಮಾರಾಟಗಾರರ ವಿಳಾಸವನ್ನು ಗಮನಿಸಬೇಕು.  ಬಿತ್ತನೆ ಬೀಜವು ಸಂಬಂದಪಟ್ಟ ಪ್ರಾಧಿಕಾರದಿಂದ ಪರೀಕ್ಷಿಸಲ್ಪಟ್ಟು ಗುಣಮಟ್ಟದ ಬಗ್ಗೆ ಧೃಢೀಕರಿಸಲಾಗಿದೆಯೆ? ದೃಢೀಕರಣದ ಟ್ಯಾಗ್‌ಗಳನ್ನು ಲಗತ್ತಿಸಲಾಗಿದೆಯೆ? ಎಂದು ಖಾತರಿಸಿಪಡಿಸಿಕೊಳ್ಳಬೇಕು. ಬಿತ್ತನೆಗೆ ಮುಂಚೆ ಬೀಜ ಮೊಳೆಯುವಿಕೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬೇಕು. ಬಿತ್ತನೆ ಬೀಜವನ್ನು ಕೀಟನಾಶಕಗಳಿಂದ ಉಪಚರಿಸಲಾಗಿದೆಯೆ ಎಂಬುದನ್ನು ಗಮನಿಸಬೇಕು. ಬಿತ್ತನೆ ಬೀಜದ ಚೀಲ, ಸ್ವಲ್ಪ ಪ್ರಮಾಣದ ಬಿತ್ತನೆ ಬೀಜ, ದೃಢೀಕರಣದ ಬಗ್ಗೆ ಲಗತ್ತಿಸಿರುವ ಟ್ಯಾಗಗಳನ್ನು ಬೆಳೆ ಕಟಾವು ಆಗುವವರೆಗೆ ಸುರಕ್ಷಿತವಾಗಿ ಕಾಯ್ದಿಟ್ಟುಕೊಳ್ಳಬೇಕು. ನಮೂದಿಸಿರುವ ಉತ್ಪಾದನಾ ದಿನಾಂಕ ಮತ್ತು ವ್ಯಾಲಿಡಿಟಿ ಅವಧಿಯನ್ನು ಗಮನಿಸಬೇಕು.  ರೈತರು ಈ ಎಲ್ಲಾ ಅಂಶಗಳನ್ನು ಸಮರ್ಪಕವಾಗಿ ಗಮನಿಸುವಂತೆ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರಾದ ಬಿ. ಮಂಜುಳಾ ಅವರು ರೈತರಿಗೆ ಸಲಹೆಗಳನ್ನು ನೀಡಿದ್ದಾರೆ.
Please follow and like us:
error

Leave a Reply

error: Content is protected !!