ಮಹಿಳೆ ಕಾಣೆ ಪತ್ತೆಗೆ ಸಹಕರಿಸಲು ಸೂಚನೆ.

ಕೊಪ್ಪಳ, ಜು. ೦೧ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕುಪ್ಪಲಿ ಗ್ರಾಮದ ವೆಂಕವ್ವ ಸೋಮನಗೌಡ ಕುರಹಟ್ಟಿ (೬೬) ಎಂಬ ಮಹಿಳೆಯು ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆಂದು ಬಂದ ಸಂದರ್ಭದಲ್ಲಿ ಕಾಣೆಯಾಗಿದ್ದು, ಈ ಮಹಿಳೆಯ ಪತ್ತೆಗೆ ಸಹಕರಿಸುವಂತೆ ಮುನಿರಾಬಾದ್ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕುಪ್ಪಲಿ ಗ್ರಾಮದ ನಿವಾಸಿಯಾದ ವೆಂಕವ್ವ ಸೋಮನಗೌಡ ಕುರಹಟ್ಟಿ (೬೬) ಎಂಬ ಮಹಿಳೆಯು ತನ್ನ ಸಂಬಂಧಿಕರೊಂದಿಗೆ ಕಳೆದ ಮೇ.೦೬ ರಂದು ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ಕಾಣೆಯಾಗಿರುತ್ತಾರೆ. ಕಾಣೆಯಾದ ಮಹಿಳೆಯ ವಿವರ ವೆಂಕವ್ವ ಸೋಮನಗೌಡ ಕುರಹಟ್ಟಿ, ವಯಸ್ಸು: ೬೬, ವಿಳಾಸ : ಸಾ|| ಕುಪ್ಪಲಿ, ತಾ|| ನರಗುಂದ, ಜಿ||ಗದಗ, ಜಾತಿ: ರೆಡ್ಡಿ, ಎತ್ತರ : ಸುಮಾರು ೫ ಅಡಿ ೨ ಇಂಚು, ಕನ್ನಡ ಭಾಷೆ ಮಾತನಾಡುತ್ತಾಳೆ, ತೆಳ್ಳನೆಯ ಮೈಕಟ್ಟು, ಸಾದಾಗಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕಾಣೆಯಾದ ದಿನ ಚಾಕಲೇಟ ಬಣ್ಣದ ಟೋಪಿನ ಸೀರೆ ಧರಿಸಿರುತ್ತಾಳೆ. ಈ ಮೇಲ್ಕಂಡ ಚಹರೆಯುಳ್ಳ ಮಹಿಳೆಯು ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಯಾರಿಗಾದರೂ ಕಂಡಲ್ಲಿ ಅಥವಾ ಮಹಿಳೆಯ ಬಗ್ಗೆ ಮಾಹಿತಿ ದೊರಕಿದಲ್ಲಿ ಮುನಿರಾಬಾದ್ ಪೊಲೀಸ್ ಠಾಣೆ ಪಿಎಸ್‌ಐ ದೂರವಾಣಿ ಸಂಖ್ಯೆ:೦೮೫೩೯-೨೭೦೩೩೩, ಡಿ.ಎಸ್.ಪಿ ಕೊಪ್ಪಳ-೦೮೫೩೯-೨೨೨೪೩೩, ಸಿ.ಪಿ.ಐ ಕೊಪ್ಪಳ ಗ್ರಾಮೀಣ ವೃತ್ತ-೦೮೫೩೯-೨೨೧೩೩೩, ಎಸ್.ಪಿ. ಕೊಪ್ಪಳ-೦೮೫೩೯-೨೩೦೧೧೧ ನ್ನು ಸಂಪರ್ಕಿಸುವಂತೆ ತಿಳಿಸಿದೆ.

Leave a Reply