ಭಾಗ್ಯನಗರದ ಪಯೋನಿಯರ್ ಪಬ್ಲಿಕ್ ಶಾಲೆಯ ಸಮಾರಂಭ ಬ್ರ.ಕು.ಯೋಗಿನಿ ಅಕ್ಕ ಅಭಿಮತ.

ಕೊಪ್ಪಳ 18 – ಭಾರತ ದೇಶ ಹಬ್ಬಗಳ ತವರೂರು. ಸ್ವಾತಂತ್ರ್ಯೋತ್ಸವ ಹಬ್ಬ ದೇಶಪ್ರೇಮದ ಹಬ್ಬ, ನರನಾಡಿಗಳಲ್ಲಿ ಸ್ವಾತಂತ್ರ್ಯದ ಹರಿವನ್ನು ಹೆಚ್ಚಿಸುವ ಹಬ್ಬ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಯೋಗಿನಿ ಅಕ್ಕಾ ಅವರು ನುಡಿದರು.
ಅವರು ಭಾಗ್ಯನಗರದ ಪಯೋನಿಯರ್ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ೬೯ನೇ ಸ್ವಾತಂತ್ರ್ಯೋತ್ಸ ಸಮಾರಂಭದಲ್ಲಿ ಮಾತನಾಡಿದರು. ಪಣತೊಟ್ಟು, ಛಲ ತೊಟ್ಟು, ವಿರಮಿಸಿದೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರು ಸದಾಕಾಲ ಪ್ರಾತಃಸ್ಮರಣೀಯರು ಎಂದ ಅವರು ಸ್ವಾತಂತ್ರ್ಯವನ್ನು ನಾವು ಪಡೆದೆವು ಆದರೆ ಸಂತೋಷ ಇದೆಯೇ? ಎಂದು ಪ್ರಶ್ನಿಸಿಕೊಂಡಾಗ ಉತ್ತರ ಸಿಗುವುದಿಲ್ಲ.  ಕಾರಣ ದೇಶದಿಂದ ಬ್ರಿಟೀಷರನ್ನು ಹೊಡೆದಟ್ಟಿದ್ದೇವೆ ಆದರೆ ದೇಹದಲ್ಲಿರುವ ಈರ್ಷೆ, ದುರಾಸೆ, ದ್ವೇಷ, ಅಸೂಯೆ ಎಂಬ ಬ್ರಿಟೀಷರನ್ನು ತೊಲಗಿಸಿಲ್ಲ.  ದೇಹದಲ್ಲಿರುವ ಬ್ರಿಟೀಷರನ್ನು ತೊಲಗಿಸಿದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಎಂದು ಅಭಿಪ್ರಾಯ ಪಟ್ಟರು.  ಇಂತಹ ಸ್ವಾತಂತ್ರ್ಯವನ್ನು ತಂದುಕೊಡಲು ಪಣತೊಡಿರಿ ಎಂದು ಕರೆ ನೀಡಿದರು. ಹಿರಿಯ ಪತ್ರಕರ್ತ ವಿಟ್ಟಪ್ಪ ಗೊರಂಟಿ ಮಾತನಾಡಿ ಸ್ವಾತಂತ್ರ್ಯ ಬಂದ ೬೯ ವರ್ಷಗಳಲ್ಲಿ ನಾಲ್ಕು ಪಟ್ಟು ಜನಸಂಖ್ಯೆ ಏರಿದ್ದೇ ಸಾಧನೆಯಾಗಬಾರದು.  ನಾನು,ನನ್ನದು ಎನ್ನದೇ ತಮ್ಮದೆಲ್ಲವನ್ನೂ ದೇಶಕ್ಕಾಗಿ ತ್ಯಾಗ ಮಾಡಿದ ಕ್ರಾಂತಿವಾದಿ ಭಗತ್ ಸಿಂಗ್, ಸುಭಾಷ್‌ಚಂದ್ರ ಬೋಸ್, ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಮಂಗಲ್ ಪಾಂಡೆ, ಅಹಿಂಸಾತ್ಮಕ ಹೋರಾಟದ ಮೂಲಕ ಹೊಸ ಭಾಷ್ಯವನ್ನೇ ಬರೆದ ಮಹಾತ್ಮ ಗಾಂಧೀಜಿ ಇವು ನಮ್ಮ ಮಕ್ಕಳಿಗೆ ಆದರ್ಶಗಳಾಗಬೇಕು. ಧರ್ಮ, ಭಾಷೆ, ಗಡಿ ಎಂದು ಬಡಿದಾಡದೆ ದೇಶದ ಅಖಂಡತೆಯನ್ನು ಹಿಡಿಯಬೇಕು,  ಹಿಂದೆ ಏನಾಗಿದ್ದೆವು, ಇಂದೇನು ಮಾಡುತ್ತಿದ್ದೇವೆ, ಇದರಿಂದ ದೇಶಕ್ಕೆ ಮುಂದೇನಾಗಬಹುದು ಎಂಬುದನ್ನು ದೊಡ್ಡವರೂ ಕೂಡ ಆತ್ಮಾವಲೋಕನ ಮಾ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾಗ್ಯನಗರ ಕಲ್ಪವೃಕ್ಷ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಕೃಷ್ಣ ಎಂ. ಇಟ್ಟಂಗಿಯವರು ವಹಿಸಿ ಧ್ವಜಾರೋಹಣ  ಮಾಡಿ ಮಕ್ಕಳಿಂದ ಧ್ವಜ ವಂದನೆ ಸ್ವೀಕರಿಸಿದರು. ನಂತರ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ, ಗಾಯನ ಹಾಗೂ ಭಾಷಣ ಕಾರ್ಯಕ್ರಮಗಳು ನೆರವೇರಿದವು. ನಂತರ ಭಾಗ್ಯನಗರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹೊನ್ನೂರಸಾಬ್ ಬೈರಾಪುರ ಮಕ್ಕಳ ಆಟಿಕೆಯ ಉದ್ಯಾನವನನ್ನು ಉದ್ಘಾಟಿದರೆ, ಯೋಗಿನಿ ಅಕ್ಕಾರವರು ವಿಶಾಲವಾದ ಪಯೋನಿಯರ್ ಕ್ರೀಡಾಂಗಣವನ್ನು ಉದ್ಘಾಟಿಸಿದರು.  ತದನಂತರ ನಡೆದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಕರು, ಪೋಷಕರು ,ಮಕ್ಕಳು ಮತ್ತು ಅತಿಥಿಗಳಿಂದ ೨೦ಕ್ಕೂ ಹೆಚ್ಚು ವೃಕ್ಷಸಸ್ಯಗಳನ್ನು ನೆಡಲಾಯಿತು.  ಕಾರ್ಯಕ್ರಮದಲ್ಲಿ ಭಾಗ್ಯನಗರ ಕಲ್ಪವೃಕ್ಷ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸುರೇಶ್ ಕಠಾರೆ, ಕಾರ್ಯದರ್ಶಿ ಕೃಷ್ಣ ಕಬ್ಬೇರ್, ಖಜಾಂಚಿ ಲಕ್ಷ್ಮಣಸಾ ನಿರಂಜನ್,ಉಮೇಶ್ ಕಬ್ಬೇರ್, ಉದ್ಯಮಿ ಸತೀಷ್ ಮೇಘರಾಜ್ ,ಶಾಲಾ ಪ್ರಾಂಶುಪಾಲ ಆರ್. ದತ್ತಾತ್ರೇಯ ಸಾಗರ್ ಮುಂತಾದವರು ಉಪಸ್ಥಿತರಿದ್ದರು.  ಶ್ರೀದೇವಿ ಕಡಕೋಳ್ ಪ್ರಾರ್ಥಿಸಿ, ಮಾಧವಿ ಪಾಟೀಲ್ ನಿರೂಪಿಸಿದರು.  ಉಷಾ ವಡ್ಡಟ್ಟಿ ಸ್ವಾಗತಿಸಿ, ರೀತು ಮೆಹರ್‍ವಾಡೆ ವಂದಿಸಿದರು.

ಡಿಕೊಳ್ಳಬೇಕಾಗಿದೆ ಎಂದರು.

Please follow and like us:
error