fbpx

ನ. ೧೬ ರಂದು ಬೆಂಗಳೂರಿನಲ್ಲಿ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ.

ಕೊಪ್ಪಳ
ನ. ೦೯ (ಕ ವಾ) ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ
ಸಲಹಾ ಸಮಿತಿಯ ಹಿಂಗಾರು ಹಂಗಾಮಿನ ೧೦೨ನೇ ಸಭೆ ನ. ೧೬ ರಂದು ಮಧ್ಯಾಹ್ನ ೪-೩೦ ಗಂಟೆಗೆ
ಬೆಂಗಳೂರಿನ ವಿಕಾಸಸೌಧದ ಕೊಠಡಿ ಸಂಖ್ಯೆ ೨೨೨ ರಲ್ಲಿ ನಡೆಯಲಿದೆ.
     ಸಭೆಯ
ಅಧ್ಯಕ್ಷತೆಯನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವ ಪಿ.ಟಿ.
ಪರಮೇಶ್ವರ ನಾಯ್ಕ ಅವರು ವಹಿಸುವರು.  ಸಭೆಯಲ್ಲಿ ಡಿ. ೦೧ ರಿಂದ ವಿವಿಧ ಕಾಲುವೆಗಳಡಿ
ಲಭ್ಯವಾಗಬಹುದಾದ ನೀರಿನ ಪ್ರಮಾಣ ಹಾಗೂ ನೀರು ಬಳಕೆ ಮಾಡುವ ಕುರಿತು ನಿರ್ಣಯ
ಕೈಗೊಳ್ಳುವುದರ ಬಗ್ಗೆ ಚರ್ಚೆ ನಡೆಯಲಿದೆ.  ಸಭೆಯಲ್ಲಿ ಕೊಪ್ಪಳ, ಬಳ್ಳಾರಿ ಮತ್ತು
ರಾಯಚೂರು ಜಿಲ್ಲೆಗಳ ಸಚಿವರುಗಳು, ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು,
ವಿಧಾನಪರಿಷತ್ ಸದಸ್ಯರು ಹಾಗೂ ನೀರಾವರಿ ಸಲಹಾ ಸಮಿತಿಯ ಸದಸ್ಯರುಗಳು ಭಾಗವಹಿಸುವರು ಎಂದು
ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ಪತ್ರಿಕೋದ್ಯಮ ವೃತ್ತಿ ಕೌಶಲ್ಯ ತರಬೇತಿಗಾಗಿ ಅರ್ಜಿ ಆಹ್ವಾನ.

ಬೆಂಗಳೂರು,
ನವೆಂಬರ್ ೯ (ಕ ವಾ) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು
೨೦೧೫-೧೬ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ
ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ
ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ವೃತ್ತಿ ಕೌಶಲ್ಯ ತರಬೇತಿ ನೀಡುವ
ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
    
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ,
ಪತ್ರಿಕೋದ್ಯಮ/ ವಿದ್ಯುನ್ಮಾನ ಮಾಧ್ಯಮ/ ಸಮೂಹ ಸಂವಹನ ವಿಷಯಗಳಲ್ಲಿ ಪದವಿ/ಸ್ನಾತಕ ಪದವಿ/
ಪಿ.ಜಿ ಡಿಪ್ಲೊಮಾ ಪಡೆದಿರುವ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ
ಮಾಡಲಾಗುವುದು. ಅಭ್ಯರ್ಥಿಯು ಪ್ರಸ್ತುತ ಸಾಲಿನಲ್ಲಿ ಇದೇ ಸ್ವರೂಪದ ತರಬೇತಿಯನ್ನು
ಸರ್ಕಾರದ ಯಾವುದೇ ಇಲಾಖೆಯಿಂದ ಪಡೆದಿರಬಾರದು. ದಿನಾಂಕ ೨೦-೧೧-೨೦೧೫ ರೊಳಗಾಗಿ
ಸಲ್ಲಿಸಬೇಕು. ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆಯ್ಕೆಯಾದ ಅಭ್ಯರ್ಥಿ ಮೂಲ
ದಾಖಲೆಗಳ ಪರಿಶೀಲನೆಗೆ ಗೈರುಹಾಜರಾದಲ್ಲಿ ಮೆರಿಟ್ ಆಧಾರದ ಮೇಲೆ ಮುಂದಿನ ಅಭ್ಯರ್ಥಿಗೆ
ಅವಕಾಶ ನೀಡಲಾಗುವುದು.
 
ಹೈನುಗಾರಿಕೆ ಯೋಜನೆ ಅರ್ಜಿ ಆಹ್ವಾನ.
ಕೊಪ್ಪಳ,
ನ.೦೯ (ಕ ವಾ) ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
(ನಿ) ಕೊಪ್ಪಳ ಇವರಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಹಿಂದುಳಿದ
ವರ್ಗಗಳ ಹೈನುಗಾರಿಕೆ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
    
ಯೋಜನೆಯಡಿ ಹಿಂದುಳಿದ ವರ್ಗಗಳ ಜನರು ಜರ್ಸಿ ಅಥವಾ ಹೆಚ್.ಎಫ್.ಬ್ರೀಡ್ ನ ಎರಡು
ಹಸುಗಳನ್ನು ಕೊಂಡು, ಹೈನುಗಾರಿಕೆ ಚಟುವಟಿಕೆ ಕೈಗೊಳ್ಳಲು ಘಟಕ ವೆಚ್ಚಕ್ಕಾಗಿ ಗರಿಷ್ಠ
೧.೨೦ ಲಕ್ಷ ರೂ. ಗಳ ಸೌಲಭ್ಯ ನೀಡಲಾಗುವುದು. ಇದರಲ್ಲಿ ಶೇಕಡಾ ೩೦ ರಷ್ಟು ಗರಿಷ್ಠ
೧೦,೦೦೦ ರೂ.ಗಳ ಸಹಾಯಧನ ನೀಡಿ, ಉಳಿಕೆ ೧.೧೦ ಲಕ್ಷ ರೂ.ಗಳನ್ನು ವಾರ್ಷಿಕ ಶೇಕಡಾ ೪ ರ
ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ಈ ಸಾಲವನ್ನು ೩ ವರ್ಷಗಳಲ್ಲಿ ೧೨
ತ್ರೈಮಾಸಿಕ ಕಂತುಗಳಲ್ಲಿ ಮರುಪಾವತಿಸಬಹುದಾಗಿದೆ. ಅರ್ಜಿ ಸಲ್ಲಿಸಲಿಚ್ಛಿಸುವವರು
ಹಿಂದುಳಿದ ವರ್ಗಗಳ ಪ್ರವರ್ಗ-೧, ೨ಎ, ೩ಎ ಮತ್ತು ೩ಬಿಗೆ ಸೇರಿದವರಾಗಿರಬೇಕು (ವಿಶ್ವಕರ್ಮ
ಸಮುದಾಯಗಳ ಹಾಗೂ ಅಲ್ಪಸಂಖ್ಯಾತರನ್ನು ಹೊರತುಪಡಿಸಿ). ೧೮ ರಿಂದ ೫೫ ವರ್ಷದೊಳಗಿನ
ವಯೋಮಿತಿಯಲ್ಲಿರಬೇಕು. ಅರ್ಜಿದಾರ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ
ಪ್ರದೇಶದವರಿಗೆ ರೂ.೪೦,೦೦೦ ಗಳು ಮತ್ತು ನಗರ ಪ್ರದೇಶದವರಿಗೆ ೫೦,೦೦೦ ಗಳಿಗೆ
ಮೀರಿರಬಾರದು. ಸಾಲದ ಭದ್ರತೆಗೆ ಒದಗಿಸುವ ಸ್ಥಿರಾಸ್ತಿಯ ಮೇಲೆ ನಿಗಮದ ಹಕ್ಕು
ದಾಖಲಿಸಬೇಕು.
     ಅರ್ಜಿ ನಮೂನೆಗಳನ್ನು ನಿಗಮದ ಜಿಲ್ಲಾ ಕಛೇರಿಯಲ್ಲಿ ಉಚಿತವಾಗಿ
ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಡಿಸೆಂಬರ್.೦೫ ರೊಳಗಾಗಿ ನಿಗಮದ
ಜಿಲ್ಲಾ ಕಛೇರಿಗೆ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಗಮದ
ವೆಬ್‌ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/ಜbಛಿಜಛಿ
ಯನ್ನು ಅಥವಾ
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (ನಿ) ಕೊಪ್ಪಳ, ಕಛೇರಿ ದೂರವಾಣಿ
ಸಂಖ್ಯೆ : ೦೮೫೩೯-೨೨೧೮೪೭ ಅಥವಾ ಆಯಾ ಜಿಲ್ಲೆಯಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ
ವರ್ಗಗಳ ಅಭಿವೃದ್ಧಿ ನಿಗಮ(ನಿ)ದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯನ್ನು
ಸಂಪರ್ಕಿಸಬಹುದಾಗಿದೆ.
ಪಪಾಯ ಬೆಳೆ ಕುರಿತು ಬಾಗಲಕೋಟೆಯಲ್ಲಿ ಒಂದು ದಿನದ ಕಾರ್ಯಾಗಾರ.
ಕೊಪ್ಪಳ
ನ. ೦೯ (ಕ ವಾ)ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ
ವಿಸ್ತರಣಾ ನಿರ್ದೇಶನಾಲಯ ಹಾಗೂ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಬಾಗಲಕೋಟ ವತಿಯಿಂದ
ಪಪಾಯ ಬೆಳೆ ಕುರಿತು ಒಂದು ದಿನದ ಕಾರ್ಯಾಗಾರ ಡಿ. ೦೮ ರಂದು ಬಾಗಲಕೋಟದ ವಿಸ್ತರಣಾ
ನಿರ್ದೇಶನಾಲಯದ ತರಬೇತಿ ಭವನದಲ್ಲಿ  ಹಮ್ಮಿಕೊಳ್ಳಲಾಗಿದೆ.
      ಇದರ ಅಂಗವಾಗಿ
ಪಪಾಯ ಕುರಿತು ಪ್ರದರ್ಶನವನ್ನು ಏರ್ಪಡಿಸಲಾಗುವದು ಹಾಗೂ ಪಪಾಯ ಕುರಿತು ತಾಂತ್ರಿಕ
ಕೈಪಿಡಿಯನ್ನು ಬಿಡುಗಡೆ ಮಾಡಲಾಗುವದು. ಈ ಕಾರ್ಯಾಗಾರದಲ್ಲಿ ಪಪಾಯ ಸಸಿಗಳ ಮತ್ತು ಬೀಜಗಳ
ಸರಬರಾಜುದಾರರು,   ರಸಗೊಬ್ಬರ ವಿತರಕರು, ತೋಟಗಾರಿಕೆ ಬೆಳೆಯ ಸಾಗುವಳಿ, ಕೀಟ ಹಾಗೂ
ರೋಗಗಳ ನಿರ್ವಹಣೆ ಕುರಿತು ಉಪನ್ಯಾಸ ನೀಡುವ ತಜ್ಞರುಗಳು, ಪಪಾಯ ಹಣ್ಣನ್ನು ಸಂಸ್ಕರಣೆ
ಮಾಡುವವರು ಮತ್ತು ಖರೀದಿದಾರರು ಭಾಗವಹಿಸುವರು. ಈಗಾಗಲೇ ಪಪಾಯ ಬೆಳೆ ಬೆಳೆದವರು ಹಾಗೂ
ಬೆಳೆಯಲು ಇಚ್ಛಿಸುವ ರೈತ ಭಾಂದವರು ತಮ್ಮ ಹೆಸರನ್ನು ಎಸ್‌ಎಂಎಸ್ ಸಂದೇಶ ಕಳುಹಿಸುವ ಮೂಲಕ
ನೋಂದಾಯಿಸಬೇಕು. ನೋಂದಣಿಗೆ ಡಿ. ೦೫ ಕೊನೆಯ ದಿನಾಂಕವಾಗಿದೆ.   ಲಕ್ಷ್ಮಣರೆಡ್ಡಿ,
ವಿಸ್ತರಣಾ ಮುಂದಾಳು-೯೯೦೦೫೮೫೨೪೨ ಹಾಗೂ ಅಂಬರೀಶ, ತೋಟಗಾರಿಕೆ ವಿಷಯ
ತಜ್ಞರು-೮೯೦೪೬೭೦೨೧೩ ಇವರಿಗ ಎಸ್‌ಎಂಎಸ್ ಸಂದೇಶ  ಕಳುಹಿಸಿ ನೋಂದಾಯಿಸಬೇಕು.  ಹೆಚ್ಚಿನ
ಸಂಖ್ಯೆಯಲ್ಲಿ ಪಪಾಯ ಬೆಳೆಗಾರರು ಭಾಗವಹಿಸಲು ಡಾ. ಎ. ಬಿ. ಪಾಟೀಲ, ವಿಸ್ತರಣಾ
ನಿರ್ದೇಶಕರು, ತೋವಿವಿ, ಬಾಗಲಕೋಟ ಇವರು  ಕೋರಿದ್ದಾರೆ. 

Please follow and like us:
error

Leave a Reply

error: Content is protected !!