You are here
Home > Koppal News > ಸಾಮೂಹಿಕ ವಿವಾಹಗಳು ಹೆಚ್ಚಾಗಲಿ-ಸಿದ್ದರಾಮಯ್ಯ

ಸಾಮೂಹಿಕ ವಿವಾಹಗಳು ಹೆಚ್ಚಾಗಲಿ-ಸಿದ್ದರಾಮಯ್ಯ

ಕುಷ್ಟಗಿ : ಶ್ರೀಮಂತರ ಆದ್ದೂರಿ ವಿವಾಹಗಳನ್ನು ಮಧ್ಯಮ ವರ್ಗ ಅನುಸರಿಸುತ್ತ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು. ಅವರು ಚಳಗೇರಿಯಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಮಧ್ಯಮ ವರ್ಗದವರು ಸಾಮೂಹಿಕ ವಿವಾಹಗಳಲ್ಲಿ ಭಾಗವಹಿಸಿ ಸಾಮರಸ್ಯವನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದರು.
ವಿರುಪಾಕ್ಷಲಿಂಗ ಸ್ವಾಮಿಜಿಯವರ 80ನೇ ವರ್ಷದ ಚಂದ್ರದರ್ಶನ ಹಾಗು ಬೆಳ್ಳಿತುಲಾಬಾರ,151 ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ ಅಬಕಾರಿ ಸಚಿವ ರೇಣುಕಾಚಾರ್ಯ, ಪಶುಸಂಗೋಪನಾ ಸಚಿವ ಬೆಳಮಗಿ,ರಂಭಾಪುರಿ ಮಠದ ಶ್ರೀಗಳು, ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ , ಸಂಸದ ಶಿವರಾಮಗೌಡ, ಮಾಜಿ ಸಚಿವ ಬಸವರಾಜ ರಾಯರಡ್ಡಿ ,ಶಾಸಕ ಻ಮರೇಗೌಡ ಬಯ್ಯಾಪೂರ, ಹಸನಸಾಬ ದೋಟಿಹಾಳ ಸೇರಿದಂತೆ ಹಲವಾರು ರಾಜಕಾರಣಿಗಳು, ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Top