ಬಂಡಿ ೫ನೇ ವರ್ಷದ ಸ್ವರ ಶ್ರದ್ಧಾಂಜಲಿ ಪ್ರವೀಣ ಗೋಡ್ಖಿಂಡಿ ಬಾನ್ಸುರಿ ವಾದನ.

ಕೊಪ್ಪಳ, ೧೨ ಶ್ರೀ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆ  ಕಿನ್ನಾಳ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಕೊಪ್ಪಳ ಇವರುಗಳ ಸಹಯೋಗದಲ್ಲಿ ಸಂಗೀತ ಕಲಾವಿದ ಬಂಡಿ ಹನುಮಂತರಾವ್ ಅವರ ೫ನೇ ವರ್ಷದ ಸ್ವರ ಶ್ರದ್ಧಾಂಜಲಿ ಸಂಗೀತ ಕಾರ್ಯಕ್ರಮ ಡಿ.೧೫ ರ ಸಂಜೆ ೬ಗಂಟೆಗೆ ಕೊಪ್ಪಳದ ರಾಘವೇಂದ್ರಸ್ವಾಮಿಗಳ ಮಠದ ಆವರಣದಲ್ಲಿ ಜರುಗಲಿದೆ.  ಖ್ಯಾತ ಬಾನ್ಸುರಿವಾದಕ ಪ್ರವೀಣ ಗೋಡ್ಖಿಂಡಿ ಅವರ ಕೊಳಲು ವಾದನ ಕಿರಣ್ ಗೋಡ್ಖಿಂಡಿ

ಹಾಗೂ ಸ್ಥಳಿಯ ತಬಲಾ ಕಲಾವಿದರಾದ ಶ್ರೀನಿವಾಸ್ ಜೋಶಿ ಕು.ಶಿವಲಿಂಗ ಅವರ ತಬಲಾ ಸಾಥ್ ಇರುತ್ತದೆ. ಸುಗಮ ಸಂಗೀತ  ಕಲಾವಿದರಾದ  ವಿಭಾ ಕಟ್ಟಿ, ಚೈತ್ರಾ ಹೂಲಗೇರಿ, ಸುಧಾ ಅಡವಿ ಅವರುಗಳಿಂದ ಸುಗಮ ಸಂಗೀತ ಮತ್ತು ಕೃಷ್ಣ ಸೊರಟೂರು, ವಿನಾಯಕ ಕಿನ್ನಾಳ, ರಂಗಪ್ಪ ಕಡ್ಲಿಬಾಳ ತಾಳವಾದ್ಯಗಳ ಸಾಥ್ ನೀಡುವರು. ಕೊಪ್ಪಳದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮ ಶ್ರೀಚೈತನ್ಯಾನಂದ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸುವರು. ಹಿರಿಯ ಕಲಾವಿದ ವಾಜೇಂದ್ರಾಚಾರ್ ಜೋಶಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ರಂಗನಾಥಾಚಾರ್ ಹುಲಗಿ ವಹಿಸುವರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್  ವಾಣಿಜ್ಯೋದ್ಯಮಿ ಶ್ರೀನಿವಾಸ್ ಗುಪ್ತಾ, ನ್ಯಾಯವಾದಿ ರಾಘವೇಂದ್ರ ಪಾನಘಂಟಿ, ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪತ್ರಕರ್ತ ಎಂ.ಸಾದಿಕಲಿ, ನಾರಾಯಣಪ್ಪ ಕಲಾಲ್ ಮುಂತಾದವರುಗಳು ಮುಖ್ಯಅತಿಥಿಗಳಾಗಿಪಾಲ್ಗೊಳ್ಳುವರು ಎಂದು  ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಲಚ್ಚಣ್ಣ ಹಳೆಪೇಟ ಕಿನ್ನಾಳ ತಿಳಿಸಿದ್ದಾರೆ.

Please follow and like us:
error