ಕೊಪ್ಪಳ ಜಿಲ್ಲೆಯಿಂದ ಚುನಾಯಿತರಾದವರಿಗೆ ಸಿಎಂ ಯೋಗ!

ವಿಶೇಷ ಲೇಖನ      
  ಕೊಪ್ಪಳ : ಕೊಪ್ಪಳ ಜಿಲ್ಲೆಯ ಕೊಪ್ಪಳ ಇಲ್ಲವೇ ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಬಿಎಸ್ಸಾರ್ ಕಾಂಗ್ರೆಸ್‌ನಿಂದ ಮಾಜಿ ಸಚಿವ ಜನಾರ್ಧನ ರಡ್ಡಿ ಸ್ಪಽಸುತ್ತಾರೆ ಎಂಬ ವದಂತಿ ಇತ್ತು. ಹಾಗೆಯೇ ವಿರೋಧ ಪಕ್ಷದ ನಾಯಕರಾಗಿರುವ ಕಾಂಗ್ರೆಸ್‌ನ ಸಿದ್ಧರಾಮಯ್ಯ ಅವರೂ ಕೂಡಾ ಕುಷ್ಟಗಿಯಲ್ಲಿ ಸ್ಪಽಸಲಿದ್ದಾರೆ ಎಂಬ ಮಾತುಗಳು ಕೆಲ ದಿನಗಳ ಹಿಂದೆ ಕೇಳಿ ಬಂದಿದ್ದವು. ಈಗ ಈ ವದಂತಿಗಳಿಗೆ ಮತ್ತಷ್ಟು ಪುಷ್ಠಿ ಸೇರಿಕೊಂಡಿದೆ. ಅದೇನೆಂದರೆ ಈ ಜಿಲ್ಲೆಯಲ್ಲಿ ಸ್ಪಽಸಿ ಆಯ್ಕೆಯಾದ ಒಬ್ಬರಿಗೆ ಸಿಎಂ ಆಗುವ ಯೋಗವಿದೆ ಎಂಬ ಭವಿಷ್ಯ!
        ಕೆಲ ತಿಂಗಳ ಹಿಂದೆ ಜನಾರ್ಧರೆಡ್ಡಿ ಜೈಲಿನಲ್ಲಿದ್ದರೂ ಈ ಬಾರಿ ಬರುವ ಚುನಾವಣೆಯಲ್ಲಿ ಸ್ಪಽಸುವುದು ನಿಶ್ಚಿತ. ಈಗಾಗಲೇ ಅವರ ಜ್ಯೋತಿಷಿಗಳಿಂದ ಚುನಾವಣೆಯ ಭವಿಷ್ಯ ಕೇಳಿದಾಗ ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳ ಯಾವುದಾದರೂ ಕ್ಷೇತ್ರದಲ್ಲಿ ಅದೂ ಬಳ್ಳಾರಿ ಜಿಲ್ಲೆ ಬಿಟ್ಟು ಬಳ್ಳಾರಿ ಜಿಲ್ಲೆಗೆ ಹತ್ತಿರ ಇರುವ ಕ್ಷೇತ್ರಗಳಲ್ಲಿ ಸ್ಪಽಸಿ ಗೆದ್ದರೆ ಸಿಎಂ ಆಗುವ ಯೋಗವಿದೆ ಎಂದು ಹೇಳಿರುವ ಭವಿಷ್ಯದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
        ಜನಾರ್ಧನರಡ್ಡಿಯವರಿಗೆ ತೊಡೆತಟ್ಟಿ ಸವಾಲು ಹಾಕಿದ ದಿನದಿಂದಲೇ ರೆಡ್ಡಿಯ ಪ್ರತಿ ನಡೆಯ ಬಗ್ಗೆಯೂ ಮತ್ತೊಂದು ಗುಪ್ತ ಕಣ್ಣು ಇಟ್ಟಿರುವ ಸಿದ್ಧರಾಮಯ್ಯನವರು ರಡ್ಡಿ ಭವಿಷ್ಯದ ವಿಷಯ ಅರಿತಿದ್ದಾರೆ. ಅದಕ್ಕಾಗಿ ಅವರು ಈ ಬಾರಿ ಕುಷ್ಟಗಿ ವಿಧಾನಸಬಾ ಕ್ಷೇತ್ರದಿಂದ ಸ್ಪರ್ಧೆಗಿಳಿಯುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಸ್ಪಽಸಿ ಸೋತಿದ್ದ ಸಿದ್ಧರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗುವ ಮುನ್ನ ಕೊಪ್ಪಳ ಜಿಲ್ಲೆಯಲ್ಲಿ ಸ್ಪಽಸಿ ಗೆಲ್ಲುವುದಾಗಿ ಶಪಥಗೈಯ್ದಿದ್ದರು. ಬರುವ ವಿಧಾನಸಬಾ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದೇ ಹೇಳುತ್ತಿರುವ ಸಿದ್ಧರಾಮಯ್ಯ ಕೊಪ್ಪಳದ ಕುಷ್ಟಗಿಯ ಮೇಲೆ ಕಣ್ಣಿಟ್ಟಿದ್ದಾರೆ.
ಯಡಿಯೂರಪ್ಪ ಕೂಡಾ ಸ್ಪರ್ಧಿಸುವ ಸಾಧ್ಯತೆ ?
         ಬಿಎಸ್ಸಾರ್ ಕಾಂಗ್ರೆಸ್ ಹಾಗೂ ಕಾಂಗ್ರೆಸ್‌ನ ನಾಯಕರ ಈ ನಿರ್ಧಾರದಿಂದ ಮೊದಲು ಒಳಗೊಳಗೆ ನಕ್ಕಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಾ ಈಗ ಎಚ್ಚೆತ್ತುಕೊಂಡಿದ್ದಾರೆ. ಹಲವು ಗುಡಿ-ಗುಂಡಾರಗಳಿಗೆ ಸುತ್ತಾಡುವ ಯಡಿಯೂರಪ್ಪನವರಿಗೆ ಸಿಎಂ ಆಗುವ ಯೋಗದ ಭವಿಷ್ಯ ಕಿವಿಗೆ ಬಿದ್ದಿದೆ. ಅದಕ್ಕಾಗಿ ಯಡಿಯೂರಪ್ಪನವರು ಸಹ ತಮ್ಮ ತವರು ಜಿಲ್ಲೆ ಬಿಟ್ಟು ಈ ಬಾರಿ ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿಯಿಂದ ಸ್ಪರ್ಧೆಗಿಳಿಯಲು ವೇದಿಕೆ ಸಜ್ಜುಗೊಳಿಸಿದ್ದಾರೆ.    
                                                                                                                ….ನಾಳೆಗೆ ಮುಂದುವರಿಯಲಿದೆ
Please follow and like us:
error