ಕೊಪ್ಪಳದಲ್ಲಿ ಕಳ್ಳತನ ಮಾಡಿದ ಆರೋಪಿಗೆ ಶಿಕ್ಷೆ

 : ಕೊಪ್ಪಳ ನಗರದ ಅಮೀನಪುರ ಓಣಿಯ ಕೃಷ್ಣ ಡಬೇರ ಇವರ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗೆ ಶಿಕ್ಷೆ ವಿಧಿಸಿ ಕೊಪ್ಪಳ ನ್ಯಾಯಾಲಯ ತೀರ್ಪು ನೀಡಿದೆ.
  ಬೆಳಗಾವಿ ನಿವಾಸಿ ಅಬ್ದುಲ್ ಮಕಾನದಾರ ಎಂಬಾತನೆ ಶಿಕ್ಷೆಗೆ ಒಳಗಾದ ಆರೋಪಿ. ಕಳೆದ ವರ್ಷ ಜೂ. ೨೮ ರಂದು ಬೆಳಗಿನ ಜಾವ ಕೊಪ್ಪಳ ನಗರದ ಅಮೀನಪೂರ ಓಣಿಯಲ್ಲಿರುವ ಕೃಷ್ಣ ಡಬೇರ ಇವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋದಾಗ, ಮನೆಯ ಬೀಗ ಮುರಿದು ಮನೆಯೊಳಗೆ ಪ್ರವೇಶ ಮಾಡಿದ ಆರೋಪಿ, ಬೆಳ್ಳಿ-ಬಂಗಾರದ ಆಭರಣಗಳನ್ನು ಕಳುವು ಮಾಡಿಕೊಂಡು ಪರಾರಿಯಾಗಿದ್ದನು. ಪ್ರಕರಣ ಕುರಿತು ತನಿಖೆ ನಡೆಸಿದ ಪೊಲೀಸರು, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.  ಈ ಕುರಿತಂತೆ ಪ್ರಕರಣದ ವಿಚಾರಣೆ ನಡೆಸಿದ ಸಿ.ಜೆ.ಎಂ. ನ್ಯಾಯಾಧೀಶರಾದ ಬಸವರಾಜ ಚಗರೆಡ್ಡಿ ಅವರು ಆರೋಪಿತ ಮೇಲಿರುವ ಆಪಾದನೆ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗೆ ೧ ವರ್ಷ ೬ ತಿಂಗಳು ಸಾದಾ ಜೈಲು ಶಿಕ್ಷೆ ಹಾಗೂ ರೂ.೧೦,೦೦೦/- ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.  ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಬಿ.ಅರುಣಾಕ್ಷಿ ಅವರು ವಾದ ಮಂಡಿಸಿದ್ದರು.
Please follow and like us:
error