ಕ್ರೀಡಾ ಶಾಲೆಗೆ ಪ್ರವೇಶ ಮಾ.೦೧ ರಂದು ಆಯ್ಕೆ ಪ್ರಕ್ರಿಯೆ.

ಕೊಪ್ಪಳ, ಫೆ.೨೬ (ಕ ವಾ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಶಾಲೆಗೆ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಯನ್ನು ಮಾ.೦೧ ರಂದು ಬೆಳಿಗ್ಗೆ ೦೯ ಗಂಟೆಗೆ ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
     ಈಗಾಗಲೇ ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಹಾಗೂ ವಿವಿಧ ತಾಲೂಕುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೇ ಇರುವ ವಿದ್ಯಾರ್ಥಿಗಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಭಾಗವಹಿಸಲಿಚ್ಛಿಸುವ ವಿದ್ಯಾರ್ಥಿಗಳು ೨೦೦೫ ಜೂ.೦೧ ರ ನಂತರ ಜನಿಸಿದವರಾಗಿರಬೇಕು ಮತ್ತು ೨೦೧೬ ಜೂ.೦೧ ಕ್ಕೆ ೧೧ ವರ್ಷ ಮೀರಿರಬಾರದು. ಪ್ರಸ್ತುತ ೪ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ೨೦೧೬-೧೭ ನೇ ಸಾಲಿಗೆ ೫ನೇ ತರಗತಿ ಸೇರಲು ಅರ್ಹತೆ ಹೊಂದಿರಬೇಕು. ವಾಲಿಬಾಲ್ ಮತ್ತು ಅಥ್ಲೆಟಿಕ್ಸ್ ಕ್ರೀಡೆಗೆ ಆಯ್ಕೆ ಪ್ರಕ್ರಿಯೆ ಜರುಗಲಿದ್ದು, ಕನಿಷ್ಠ ೧೪೫ ಸೆ.ಮೀ ಎತ್ತರ ಹೊಂದಿರಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ : ೦೮೫೩೯-೨೦೧೪೦೦ ಅಥವಾ ತರಬೇತುದಾರರಾದ ಸುರೇಶ ಯಾದವ್ ಮೊ:೯೯೦೧೫೨೭೩೩, ತಿಪ್ಪಣ್ಣ ಮಾಳಿ ಮೊ:೮೭೪೬೯೩೩೯೨೧ ಹಾಗೂ ಮಂಜುನಾಥ ಬಿ.ಇಂದರಗಿ ಮೊ:೭೭೯೫೭೫೮೦೫೯ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳದ ಸಹಾಯಕ ನಿರ್ದೇಶಕಿ ಡಾ||ಶಾರದಾ ನಿಂಬರಗಿ ಅವರು ತಿಳಿಸಿದ್ದಾರೆ.
Please follow and like us:
error