You are here
Home > Koppal News > ಶಾಸಕರಿಂದ ರೂ. ೭೬.೦೦ ಲಕ್ಷದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ಶಾಸಕರಿಂದ ರೂ. ೭೬.೦೦ ಲಕ್ಷದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ಕೊಪ್ಪಳ-೧೭, ಸೋಮವಾರ ಬೆಳೆಗ್ಗೆ ೧೦.೩೦ಕ್ಕೆ ಹಟ್ಟಿ-ಕೆಸ್ಲಾಪೂರು ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಹೆಚ್.ಕೆ.ಡಿ.ಬಿ (ಟಿ.ಎಸ್.ಪಿ)೫೦೫೪- ೨೦೧೪-೧೫ರ ಯೋಜನೆಯಡಿಯಲ್ಲಿ ೩೬.೧೧ ರೂ ಲಕ್ಷದ ರಸ್ತೆ ಕಾಮಗಾರಿ ನಿರ್ಮಾಣ ಹಾಗೂ ಭಾಗ್ಯನಗರದ ಗ್ರಾಮದಲ್ಲಿ ಮದ್ಯಾಹ್ನ ೧೨.೩೦ಕ್ಕೆ ಎಸ್.ಟಿ.ಕಾಲೋನಿಯಲ್ಲಿ ೫೦೫೪-ಟಿ.ಎಸ್.ಪಿ/೨೦೧೪-೧೫ರ ಯೋಜನೆಯಡಿಯಲ್ಲಿ ೪೦.೦೦ ರೂ ಲಕ್ಷದ ರಸ್ತೆ ಕಾಮಗಾರಿಗೆ ಕೊಪ್ಪಳದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಭೂಮಿ ಪೂಜೆ ನೇರವೆರಿಸಿ ಮಾತನಾಡಿದ ಅವರು ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಕೊಪ್ಪಳ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿ ಮಾಡುವೆನು. ಪ್ರತಿ ಗ್ರಾಮಕ್ಕೆ ಉತ್ತಮ ರಸ್ತೆ ಚರಂಡಿ ಶುದ್ದ ಕುಡಿಯುವನೀರು ಆರೋಗ್ಯ ಕೇಂದ್ರಗಳ ಸ್ತಾಪಿಸಿ ಕ್ಷೇತ್ರದ ಎಲ್ಲಾ ಗ್ರಾಮಗಳು ಅಭಿವೃದ್ದಿ ಹೊಂದಲು ದುಡಿಯುವೆನು ಪ್ರತಿ ಗ್ರಾಮಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ವತ್ತು ಕೊಟ್ಟು ಪ್ರೌಡ ಶಾಲೆ ಹಾಗೂ ವಿಧ್ಯಾರ್ಥಿಗಳಿಗೆ ಹೆಚ್ಚಿನ ವಿಧಾಭ್ಯಾಸಕ್ಕಾಗಿ ಪದವಿಪೂರ್ವ ಕಾಲೇಜುಗಳನ್ನು ಪ್ರಾರಂಬಿಸಲಾಗುವುದು. ಸರ್ವರೂ ಈ ಸೌಲಭ್ಯಗಳ ಸದೋಪಯೋಗ ಪಡೆದುಕೊಂಡು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿ ಕೊಪ್ಪಳವನ್ನು ಒಂದು ಮಾದರಿಯ ಕ್ಷೇತ್ರವನ್ನಾಗಿ ಮಾಡುವೆನು ಎಂದು ಹೇಳಿದರು. ಗುಣಮಟ್ಟದ ಕಾಮಗಾರಿಗಳನ್ನು ನಿರ್ಮಾಣ ಮಾಡಬೇಕೆಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಬಸವರಡ್ಡೆಪ್ಪ ಹಳ್ಳಿಕೇರಿ, ಶ್ರೀನಿವಾಸ ಗುಪ್ತಾ, ಹೂನ್ನೂರು ಸಾಬ್ ಬೈರಾಪೂರು, ಪ್ರಸನ್ನ ಗಡದ್, ಹಟ್ಟ ಭರಮಪ್ಪ, ಕೃಷ್ಣ ಇಟ್ಟಂಗಿ, ಚನ್ನಪ್ಪ ತಟ್ಟಿ, ಕರಡಿ ರಂಗಪ್ಪ, ಸುರೇಶ ದಾಸರಡ್ಡಿ, ಗೋಣೇಶ ಉಪ್ಪಾರ, ಅಕ್ತರ ಫಾರುಕಿ, ಗುತ್ತಿಗೆದಾರರಾದ ಇಬ್ರಾಹಿಂ ಅಡ್ಡೆವಾಲೆ, ಇನ್ನೂ ಅನೇಕ ಗ್ರಾಮಪಂಚಾಯತಿ ಸದಸ್ಯರು ಗ್ರಾಮದ ಗುರು ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.    

Leave a Reply

Top