fbpx

ಜಾತ್ರೆಯಲ್ಲಿ ಕಬಡ್ಡಿ ಕ್ರೀಡೆಯನ್ನು ಆಯೋಜನೆ ಮಾಡಿರುವದು ಶ್ಲಾಘನೀಯ – ಮಲ್ಲಪ್ಪ ಹೊಸೂರು

 ಕೊಪ್ಪಳ : ಶ್ರೀಗವಿಸಿದ್ಧೇಶ್ವರ ಜಾತ್ರಾ ಅಂಗವಾಗಿ ಸಂಸ್ಥಾನ ಶ್ರೀ ಗವಿಮಠದ ವತಿಯಿಂದ ಅಂತರ ಕಾಲೇಜು ಪುರುಷರ ಕಬಡ್ಡಿ ಪಂದ್ಯಾವಳಿಗಳ ಉದ್ಘಾಟನಾ ಸಮಾರಂಭವು  ಶ್ರೀಗವಿಮಠದ  ಆವರಣಲ್ಲಿ ಜರುಗಿತು. ಉದ್ಘಾಟಕರಾಗಿ ಉಪನ್ಯಾಸಕ ಹಾಗೂ ಕಬಡ್ಡಿ ಆಟಗಾರ ಮಲ್ಲಪ್ಪ ಹೊಸೂರು ಮಾತನಾಡಿ  ಕಬಡ್ಡಿ ಆಟ ಶಾರೀರಿಕ  ಹಾಗೂ ಮಾನಸಿಕ  ಗಟ್ಟಿತನ ಬೆಳಸಿಕೊಳ್ಳುವಲ್ಲಿ ತುಂಬಾ ಮಹತ್ವದ್ದಾಗಿದೆ.     ಇದೊಂದು  ದೇಸಿಯ ಕ್ರೀಡೆ.  ಮೊದಮೊದಲು ನಾವು ಇದನ್ನು ನಿರ್ಲಕ್ಷಿಸಿದ್ದೆವು.  ಈಗ ಮತ್ತೆ ಇದಕ್ಕೆ  ಮರು ಜೀವ ಬಂದಿರುದು ಸಂತೋಷ.   ಗವಿಮಠದ ಶ್ರೀಗಳು  ಜಾತ್ರೆಯಲ್ಲಿ  ಈ ಕಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಿರುವದು ನಿಜಕ್ಕು ಹರ್ಷದಾಯಕ.  ವಿದ್ಯಾರ್ಥಿಗಳಿಗೆ  ಕ್ರೀಡೆಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ದೊರೆಯುವಂತಾಗಬೇಕೆಂದರು.  ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀಗ.ವಿ.ವ ಟ್ರಸ್ಟ ಕಾರ್ಯದರ್ಶಿ ಎಸ್ ಮಲ್ಲಿಕಾರ್ಜುನ ಮಾತನಾಡಿ ಪಠ್ಯದ ಜೊತೆಗೆ ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣವಾಗುತ್ತವೆಂದರು.  ಈ ಕಬಡ್ಡಿ ಪಂದ್ಯಾವಳಿಯಲ್ಲಿ ಶ್ರೀಗವಿಸಿದ್ಧೇಶ್ವರ ಪದವಿ ಕಾಲೇಜು ಕೊಪ್ಪಳ, ಈಶಣ್ಣ ಗುಳಗಣ್ಣನವರ ಬಿ.ಬಿ.ಎಂ ಪದವಿ ಕಾಲೇಜು ದದೇಗಲ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇರಕಲ್ ಗಡಾ , ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಲಬುರ್ಗಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
 ಪ್ರಥಮ ಸ್ಥಾನ ೧೦ ಸಾವಿರ ರೂಪಾಯಿ ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಲಬುರ್ಗಾ ವಿದ್ಯಾರ್ಥಿಗಳು  ಹಾಗೂ  ದ್ವೀತಿಯ ಸ್ಥಾನ ೭ ಸಾವಿರ ರೂಪಾಯಿ ನಗದು ಹಾಗೂ ಪ್ರಮಾಣ ಪತ್ರವನ್ನು  ಶ್ರೀಗವಿಸಿದ್ಧೇಶ್ವರ ಪದವಿ ಕಾಲೇಜು  ವಿದ್ಯಾರ್ಥಿಗಳು  ಪಡೆದರು. ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ  ಶ್ರೀಗ.ವಿ.ವ ಟ್ರಸ್ಟ ಕಾರ್ಯದರ್ಶಿ ಎಸ್ ಮಲ್ಲಿಕಾರ್ಜುನ, ಶ್ರೀಗ.ವಿ.ವ ಟ್ರಸ್ಟ ಸದಸ್ಯರಾದ ಸಂಜಯ ಕೊತಬಾಳ, ಗುತ್ತಿಗೆದಾರರತಾದ ಬಸವರಾಜ ಪುರದ, ಪ್ರೊ ರಾಘವೇಂದ್ರ ರಾವ್ ಇವರ ಸಮುಮಖದಲ್ಲಿ ನಗದು ಹಾಗೂ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು.  ನಿರ್ಣಾಯಕರಾಗಿ ಪ್ರಭು ಹಿರೇಮಠ, ಜಯರಾಂ ಮರಡಿತೋಟದ, ಶಿವುಕುಮಾರ ಪೂಜಾರ, ಮಂಜುನಾಥ ಆರೆಂಟನೂರ, ಪ್ರದೀಪ, ಚಲಪತಿ, ಶೋಭಾ ಸಿ ಕೆ, ಈಶಪ್ಪ ದೊಡ್ಮನಿ, ಗವೀಶ ಕಾರ್ಯ ನಿರ್ವಹಿಸಿದರು.
Please follow and like us:
error

Leave a Reply

error: Content is protected !!