fbpx

ಕಲ್ಯಾಣ ಕರ್ನಾಟಕ ಬಸವ ಪ್ರಶಸ್ತಿಗೆ ಸಾಧಕರ ಆಯ್ಕೆ

ಕೊಪ್ಪಳ, ಫೆ. ೩. ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಡಾ|| ಕುಂ. ವೀರಭದ್ರಪ್ಪನವರ ಸಮ್ಮೇಳನಾಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ ಕಲ್ಯಾಣ ಕರ್ನಾಟಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡಲಾಗುವ ಕಲ್ಯಾಣ ಕರ್ನಾಟಕ ಬಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಅವರಿಂದು ನಗದ ಸ್ವರಭಾರತಿ ಸಂಸ್ಥೆಯ ಕಛೇರಿಯಲ್ಲಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸಿ ಆಯ್ಕೆ ಮಾಡಲಾಗಿದ್ದು, ಫೆಬ್ರವರಿ ೮ ರಂದು ಪ್ರದಾನ ಮಾಡಲಾಗುವದು ಎಂದು ತಿಳಿಸಿದ್ದಾರೆ. ಕಾರ್ಯಕ್ರಮ ಸಾಹಿತ್ಯ ಭವನದಲ್ಲಿ ಒಂದು ದಿನ ನಡೆಯಲಿದೆ, ಸಭೆಯಲ್ಲಿ ಶಿವಾನಂದ ಹೊದ್ಲೂರ, ವಿಜಯಅಮೃತರಾಜ್ ವಕೀಲರು, ಎಂ.ಎ.ಹನುಮಂತರಾವ್ ವಕೀಲರು, ವಿರುಪಾಕ್ಷಪ್ಪ ಕಟ್ಟಿಮನಿ ವಕೀಲರು, ಗವಿಸಿದ್ದಪ್ಪ ಕರ್ಕಿಹಳ್ಳಿ, ಬಸವರಾಜ ಭೋವಿ, ಸದಾಶಿವ ಪಾಟೀಲ, ಬಸವರಾಜ ದೇಸಾಯಿ, ರಾಮು ಪೂಜಾರ ಅನೇಕರು ಇದ್ದರು. 
ಪ್ರಶಸ್ತಿ ಆಯ್ಕೆಯಾದವರ ವಿವರ : ವೈಜನಾಥ ಪಾಟೀಲ ಹೈ.ಕ.ಹೋರಾಟಗಾರರು (ಸಮಾಜ ಸೇವೆ), ಭಟ್ರಹಳ್ಳಿ ಗೂಳಪ್ಪ ಕೂಡ್ಲಿಗಿ (ಪರಿಸರ ಸಂರಕ್ಷಣೆ), ಅರಳಿ ನಾಗರಾಜ ನಿವೃತ್ತ ನ್ಯಾಯಮೂರ್ತಿಗಳು (ನ್ಯಾಯಾಂಗ), ಮನೋಹರ ಮಸ್ಕಿ ಸಿಂಧನೂರ ಸುಕೋ ಬ್ಯಾಂಕ್ (ಸೌಹಾರ್ಧ ಸಹಕಾರಿ), ಸೂರ್ಯನಾರಾಯಣ ರೆಡ್ಡಿ ಮಾಜಿ ಶಾಸಕರು (ಸಮಾಜ ಸೇವೆ), ಮಾಲತಿ ಸುಧೀರ ಖ್ಯಾತ ನಟಿ (ರಂಗಭೂಮಿ), ಜಿ. ಎನ್. ಶಿವಮೂರ್ತಿ ಎಂ.ಡಿ. ಎನ್‌ಇಕೆಆರ್‌ಟಿಸಿ (ಕನ್ನಡ-ಆಡಳಿತ), ಹೆಚ್. ಎಸ್. ಪಾಟೀಲ (ಸಾಹಿತ್ಯ), ರವಿ ಕುಲಕರ್ಣಿ ಹಾಯ್ ಬೆಂಗಳೂರು (ಪತ್ರಿಕೋದ್ಯಮ), ಸಿ. ವಿ. ಚಂದ್ರಶೇಖರ ನಿರ್ಮಿತಿ ಕೇಂದ್ರ ಧಾರವಾಡ (ಆಧುನಿಕ ತಂತ್ರಜ್ಞಾನ), ಟಿ. ಜನಾರ್ಧನ ಜಿ. ಪಂ. ಅಧ್ಯಕ್ಷರು ಕೊಪ್ಪಳ(ನೈರ್ಮಲ್ಯ ಆಂದೋಲನ) ಮತ್ತು ಬಸವರಾಜ ತಮ್ಮಣ್ಣನವರ (ಯುವ ಉದ್ಯಮಿ) ಕ್ಷೇತ್ರಗಳಲ್ಲಿ ಆಯ್ಕೆ ಮಾಡಲಾಗಿದೆ ಎಂದು ಗೊಂಡಬಾಳ ತಿಳಿಸಿದ್ದಾರೆ.
ಈ ಸಮ್ಮೇಳನದಲ್ಲಿ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಪರ ಹೋರಾಟಗಾರರು, ಶಿಕ್ಷಕರು, ಯುವಜನರು, ಮಹಿಳಾ ಸಂಘಟನೆಯವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ. 
Please follow and like us:
error

Leave a Reply

error: Content is protected !!