fbpx

ಬಲಿಷ್ಟ ರಾಷ್ಟ್ರ ನಿರ್ಮಾಣಕ್ಕೆ ಯುವಕರ ಪಾತ್ರ ಅತ್ಯವಶ್ಯ: ಪರಮಾನಂದ ಯಾಳಗಿ

ಕೊಪ್ಪಳ,ಜ.೨೬: ವಿಶ್ವದಲ್ಲಿಯೇ ಅತಿಹೆಚ್ಚು ಯುವಶಕ್ತಿಯನ್ನು ಹೊಂದಿರುವ ದ್ವೀತಿಯ ರಾಷ್ಟ್ರವೆಂಬ ಹೆಗ್ಗಳಿಕೆ ನಮ್ಮ ರಾಷ್ಟ್ರಕ್ಕಿದೆ. ಅದೇ ರೀತಿ ರಾಷ್ಟ್ರ ಅಭಿವೃದ್ಧಿ ಕನಸ್ಸಿನ ಭವಿಷ್ಯ ಯುವಜನತೆಯ ಹೆಗಲ ಮೇಲಿದೆ. ಬಲಿಷ್ಟ ರಾಷ್ಟ್ರ ನಿರ್ಮಾಣಕ್ಕೆ ಯುವಕರ ಪಾತ್ರ ಅತ್ಯವಶ್ಯವೆಂದು ಶಾಲಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಪರಮಾನಂದ ಯಾಳಗಿ ಹೇಳಿದರು.
ಅವರು ಸೋಮವಾರ ಇಲ್ಲಿನ ಬನ್ನಿಕಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ೬೬ ನೇ ಗಣಾರಾಜ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಇಂದಿನ ಯುವಜನತೆ ಸಶಕ್ತರಾಗಿ ರಾಷ್ಟ್ರ ಅಭಿವೃದ್ಧಿ ಪತದತ್ತ ಮುನ್ನಡೆಬೇಕಿದೆ. ಇತ್ತಿಚೆಗೆ ಅತಿ ಹೆಚ್ಚು ಯುವಕರು ದುಶ್ಚಟಗಳಿಂದ ತಮ್ಮ ಆಶಾದಾಯಕ  ಬದುಕನ್ನು ಮೊಟಕುಗೊಳಿಸಿಕೊಳ್ಳುತ್ತಿದ್ದಾರೆ ಇದು ಸಮಾಜಕ್ಕೆ ಹಾಗೂ ರಾಷ್ಟ್ರಕ್ಕೆ ಹಿತವಲ್ಲವೆಂದು ಖೇದ ವ್ಯಕ್ತಪಡಿಸಿದರು. ವೈಜ್ಞಾನಿಕವಾಗಿ ಆರ್ಥಿಕವಾಗಿ ಮುನ್ನಡೆಯುತ್ತಿರುವ ಭಾರತವು ಮುಂದೊಂದು ದಿನ ಭಾತರವು ಎರಡನೇ ಅತಿದೊಡ್ಡ ರಾಷ್ಟ್ರವಾಗಿ ಬೆಳೆಯಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ಪರಕೀಯರಿಂದ ೧೯೪೭ ಅಗಷ್ಟ ೧೫ಕ್ಕೆ ಸ್ವಂತತ್ರಗೊಂಡ ಭಾರತಕ್ಕೆ ೬೦೦ ಪ್ರಾಂತಗಳಿಂದ ಹರಿದು ಹಂಚಿಹೋಗಿದ್ದ ಭಾರತಕ್ಕೆ ಎಕರೂಪದ ಕಾನೂನಿನ ವ್ಯವಸ್ಥೆಗಾಗಿ ಒಂದು ಸಂವಿಧಾನದ ಅವಶ್ಯಕತೆಯು ಇತ್ತು. ಇದೇ ವೇಳೆ ರಾಷ್ಟ್ರದ ಪ್ರಥಮ ರಾಷ್ಟ್ರಪತಿ ಡಾ.ಬಾಬಾ ರಾಜೇಂದ್ರ ಪ್ರಸಾದ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನೆಗೆ ಒಂದು ಸಮಿತಿ ರಚಿಸಲಾಯಿತು. ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಡಾ. ಬಿ.ಆರ್.ಅಂಬೇಡ್ಕರ ರವರನ್ನು ನೇಮಿಸಲಾಯಿತು ಅವರು ಜಗತ್ತಿನ ಹಲವಾರು ರಾಷ್ಟ್ರಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿ ಅದರಲ್ಲಿನ ಉತ್ತಮ ಅಂಶಗಳನ್ನು ಕಲೆಹಾಕಿ ನಮ್ಮ ಭಾರತೀಯರಿಗೆ ಒಪ್ಪುವಂತಹ ಸಂವಿಧಾನವನ್ನು ರಚಿಸಿ ಯಶಸ್ವಿಯಾದರು, ೧೯೫೦ರ ಜನೇವರಿ ೨೬ ರಂದು ಈ ಸಂವಿಧಾನ ಜಾರಿಗೆ ತರಲಾಯಿತು.  ಈ ದಿನವನ್ನೇ ಪ್ರಜಾರಾಜ್ಯೋತ್ಸವ ದಿನಚಾರಣೆಯನ್ನಾಗಿ ಆಚರಿಸಲಾಯಿತು ಎಂದು ತಿಳಿಸಿದರು. 
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಕರಿಬಸಪ್ಪ ಪಲ್ಲೇದ, ಹಿರಿಯ ಶಿಕ್ಷಕರಾದ ರಾಷ್ಟ್ರಪದಕ ವಿಜೇತ ಜಯರಾಜ ಬೂಸದ್, ರಾಮರಡ್ಡೇರ, ಮಂಜುಳಾ ವಿ. ತಾಹೇರಾ ಬೇಗಂ, ಶೈಲಜಾ ಹೆಚ್., ಮಂಜುಳಾ ನಾಲ್ವಾಡ, ಶೋಭಾ ಗಡಾಗ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!