ವಿವೇಕಾನಂದ ಶಾಲೆಯ ೭ ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪ್ರದಾನ

ಕೊಪ್ಪಳ, ೧೮ : ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ೭ ಮಕ್ಕಳಿಗೆ ಈ ಸಾಲಿನ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ದೊರೆತಿದೆ. ಗೈಡ್ಸ್ ವಿಭಾಗದಲ್ಲಿ ಮಧು ಎನ್.ಎಚ್., ರಚಿತಾ ದೇವಾಡಿಗ, ಶ್ರೀಲಕ್ಷ್ಮೀ ಮತ್ತು ಸ್ಕೌಟ್ಸ್ ವಿಭಾಗದಲ್ಲಿ ರಾಜೇಶ ಉಮಚಗಿ, ಸಾಯಿಕುಮಾರ, ಮಹಮ್ಮದ ತಬ್ರೇಜ್ ಮತ್ತು ಅಸ್ರಾರ್ ಈ ರಾಜ್ಯ ಪುರಸ್ಕಾರ ಗೌರವಕ್ಕೆ ಪಾತ್ರರಾಗಿದ್ದಾರೆ. ಏಪ್ರಿಲ್ ೧೬ ರಂದು ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ವಜುಬಾಯಿ ವಾಲಾ ಇವರು ಈ ಮಕ್ಕಳಿಗೆ ರಾಜ್ಯ ಪುರಸ್ಕಾರ ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಶಾಲೆಯ ಪರವಾಗಿ ಶಾಲಾ ಪ್ರಾಚಾರ್ಯ ಎ. ಧನಂಜಯನ್, ಸ್ಕೌಟ್ಸ್ ಶಿಕ್ಷಕ ಬಿ. ಪ್ರಹ್ಲಾದ್ ಮತ್ತು ಗೈಡ್ಸ್ ಶಿಕ್ಷಕಿ ಶಿವಲೀಲಾ ಭಾಗವಹಿಸಿದ್ದರು. ರಾಜ್ಯ ಪುರಸ್ಕೃತ ಮಕ್ಕಳಿಗೆ ಲಯನ್ಸ್ ಆಡಳಿತ ಮಂಡಳಿ, ಲಯನ್ಸ್ ಕ್ಲಬ್ ಸದಸ್ಯರು, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply