೮೦೦೦ ಆಶ್ರಯ ಮನೆ ನಿರ್ಮಾಣಕ್ಕೆ ಜಮೀನು ಖರೀದಿ: ಸಂಗಣ್ಣ ಕರಡಿ ಚೆಕ್ ವಿತರಣೆ

ನಗರ ಆಶ್ರಯ ಯೋಜನೆಯಡಿ ೪೫ ಎಕರೆ ಜಮೀನು ಖರೀದಿಗಾಗಿ ೪. ೧೮ ಕೊಟಿ ರೂ. ಮೊತ್ತದ ಚೆಕ್ ಅನ್ನು ಜಮೀನು ಮಾಲೀಕರಿಗೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಹಸ್ತಾಂತರಿಸಿದರು.

  ತಾಲೂಕಿನ ಕೊಪ್ಪಳ-ಸಿಂದೋಗಿ ರಸ್ತೆ ಬಳಿ ಸುಮಾರು ೮೦೦೦ ಮನೆಗಳ ನಿರ್ಮಾಣಕ್ಕೆ ೭೫ ಎಕರೆ ಜಮೀನು ಅಗತ್ಯವಿದ್ದು, ಈ ಪೈಕಿ ಈಗಾಗಲೆ ೪೫ ಎಕರೆ ಜಮೀನು ಖರೀದಿಗಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಜಮೀನು ಮಾಲೀಕರಾದ ಪಾಷಾ ನಾಯಕ್ ಹಾಗೂ ಜಮಾದಾರ್ ಅವರಿಗೆ ೪. ೧೮ ಕೋಟಿ ರೂ. ಮೊತ್ತದ ಚೆಕ್ ಅನ್ನು ವಿತರಣೆ ಮಾಡಿದರು.  ನಗರಸಭೆ ಅಧ್ಯಕ್ಷ ಸುರೇಶ್ ದೇಸಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ತಹಸಿಲ್ದಾರ್ ಬಿ.ಎಲ್. ಗೋಠೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Please follow and like us:
error