ಉಪಚುನಾವಣೆ : ನೀತಿ ಸಂಹಿತೆ ನಿಗಾ ತಂಡದ ವಿವರ

ಕೊಪ್ಪಳ ಸೆ. ೧೪ (ಕ.ವಾ): ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ನಿಗಾ ವಹಿಸಲು ಜಿಲ್ಲಾ ಮಟ್ಟದ ತಂಡ ಸೇರಿದಂತೆ ನಗರ, ತಾಲೂಕು, ಹೋಬಳಿ ಮಟ್ಟದ  ಎಂ.ಸಿ.ಸಿ. ತಂಡವನ್ನು ರಚಿಸಲಾಗಿದೆ.
  ಕೊಪ್ಪಳ ಜಿಲ್ಲಾ ಮಟ್ಟದ ತಂಡದ ನೇತೃತ್ವವನ್ನು ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿನಿರ್ದೇಶಕ ಆನಂದ್- ೯೯೭೨೧೨೯೬೭೨ ಅವರನ್ನು ನೇಮಿಸಲಾಗಿದ್ದು, ಉಳಿದಂತೆ ತಂಡದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರು, ಅಬಕಾರಿ ಉಪಆಯುಕ್ತರು, ಸಾರಿಗೆ ಇಲಾಖೆ ಹಿರಿಯ ಮೋಟಾರು ವಾಹನ ನಿರೀಕ್ಷಕರು ಹಾಗೂ ಸಂಬಂಧಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇದ್ದಾರೆ.  ಕೊಪ್ಪಳ ನಗರ ಮಟ್ಟದ ತಂಡದ ನೇತೃತ್ವವನ್ನು ಸಹಕಾರಿ ಸಂಘಗಳ ಉಪನಿಬಂಧಕ ಜಬ್ಬಾರ್ ಬೇಗ್- ೯೪೪೮೨೬೨೦೬೨ ಅವರಿಗೆ ವಹಿಸಲಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ನಗರಸಭೆ ಪೌರಾಯುಕ್ತರು, ವ್ಯಾಟ್ ಆಫೀಸರ್, ಅಬಕಾರಿ ನಿರೀಕ್ಷಕರು ತಂಡದ ಇತರೆ ಸದಸ್ಯರು.  ಕೊಪ್ಪಳ ಹೋಬಳಿ ಮಟ್ಟದ ತಂಡದಲ್ಲಿ ಜಿಲ್ಲಾ ಜಲಾನಯನ ಅಧಿಕಾರಿ ಮಲ್ಲಿಕಾರ್ಜುನ್- ೨೨೧೭೬೦, ೨೨೧೦೨೨ ಅವರು ತಂಡದ ಮುಖ್ಯಸ್ಥರಾಗಿದ್ದು, ತೋಟಗಾರಿಕೆ ಉಪನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು, ಅಬಕಾರಿ ನಿರೀಕ್ಷಕರು, ಅಲ್ಲದೆ ಕೊಪ್ಪಳ ಹೋಬಳಿ ವ್ಯಾಪ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸದಸ್ಯರಾಗಿದ್ದಾರೆ.  ಅಳವಂಡಿ ಹೋಬಳಿ ಮಟ್ಟದಲ್ಲಿ ರೇಷ್ಮೆ ಇಲಾಖೆ ಉಪನಿರ್ದೇಶಕರು- ೨೨೦೧೭೦ ತಂಡದ ಮುಖ್ಯಸ್ಥರಾಗಿದ್ದು, ಸಹಕಾರಿ ಸಂಘಗಳ ಲೆಕ್ಕ ಪರಿಶೋಧನೆ ಇಲಾಖೆ ಉಪನಿರ್ದೇಶಕರು- ೯೧೬೪೮೧೬೭೬೩, ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕರು- ೯೪೪೮೩೫೬೦೮೪, ಜೊತೆಗೆ ಈ ವ್ಯಾಪ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಂಡದ ಸದಸ್ಯರುಗಳನ್ನಾಗಿ ನೇಮಿಸಲಾಗಿದೆ.  ಹಿಟ್ನಾಳ ಹೋಬಳಿ ಮಟ್ಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಅಶೋಕ ಕಲಘಟಗಿ- ೯೪೪೯೦೨೭೧೮೩ ತಂಡದ ಮುಖ್ಯಸ್ಥರಾಗಿದ್ದು, ಉಳಿದಂತೆ ಜಿಲ್ಲಾ ಮೀನುಗಾರಿಕೆ ನೋಡಲ್ ಅಧಿಕಾರಿಗಳು, ಜಿಲ್ಲಾ ನೋಂದಣಾಧಿಕಾರಿಗಳು, ಕೊಪ್ಪಳ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಸೇರಿದಂತೆ ವ್ಯಾಪ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.  ಗಂಗಾವತಿ, ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕು ಮಟ್ಟದ ತಂಡದಲ್ಲಿ ಆಯಾ ತಾಲೂಕು ತಹಸಿಲ್ದಾರರು ತಂಡದ ಮುಖ್ಯಸ್ಥರಾಗಿದ್ದು,   ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಸಭೆ/ಪುರಸಭೆಗಳ ಪೌರಾಯುಕ್ತರು / ಮುಖ್ಯಾಧಿಕಾರಿಗಳು, ಅಬಕಾರಿ ನಿರೀಕ್ಷಕರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಎಂ.ಸಿ.ಸಿ. ತಂಡದ ಸದಸ್ಯರುಗಳಾಗಿರುತ್ತಾರೆ.  ಎಂ.ಸಿ.ಸಿ. ತಂಡದ ಮುಖ್ಯಸ್ಥರು ಪ್ರತಿ ದಿನದ ವರದಿಯನ್ನು ಜಿಲ್ಲಾ ಮಟ್ಟದ ತಂಡದ ಮುಖ್ಯಸ್ಥರಿಗೆ ಮತ್ತು ಸಂಬಂಧಪಟ್ಟ ತಹಸಿಲ್ದಾರರಿಗೆ ಸಲ್ಲಿಸಬೇಕು.  ಒಟ್ಟಾರೆ ಕ್ರೋಢೀಕೃತ ವರದಿಯನ್ನು ಜಿಲ್ಲಾ ಮಟ್ಟದ ತಂಡದ ಮುಖ್ಯಸ್ಥರು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಪ್ರತಿದಿನ ವರದಿಯನ್ನು ತಪ್ಪದೆ ಸಲ್ಲಿಸಬೇಕು.  ಗ್ರಾಮೀಣ ಪ್ರದೇಶಗಳಲ್ಲಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ, ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸುವ ಸಲುವಾಗಿ ಸಂಚಾರಿ ತಂಡ (ಈಟಥಿiಟಿg Squಚಿಜ) ನೇಮಕ ಮಾಡಲಾಗಿದ್ದು, ಇದಕ್ಕಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ೨೭ ಗ್ರಾಮ ಪಂಚಾಯತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು/ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.  ಇವರು ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಯಾಗುವಂತೆ ಮಾಡುವುದು, ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು.  ಇದಕ್ಕಾಗಿ ಪ್ರತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು/ ಕಾರ್ಯದರ್ಶಿಗಳ ಜೊತೆಗೆ ಒಬ್ಬ ಪೊಲೀಸ್ ಪೇದೆಯನ್ನು ನಿಯೋಜಿಸಲಾಗಿದೆ.  ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಬಗ್ಗೆ ಹಾಗೂ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚುವ ಸಲುವಾಗಿ ವಿಡಿಯೋ ಸವೇಲೆನ್ಸ್ ಹಾಗೂ ವಿಡಿಯೋ ವಿವಿಂಗ್ ತಂಡವನ್ನು ನೇಮಕ ಮಾಡಲಾಗಿದೆ.  ಒಟ್ಟು ೦೫ ವಿಡಿಯೋ ಸವೇಲೆನ್ಸ್ ತಂಡವನ್ನು ನೇಮಕ ಮಾಡಲಾಗಿದ್ದು ಪ್ರತಿ ತಂಡದಲ್ಲಿ ಒಬ್ಬರು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಒಬ್ಬರು ಪ್ರಥಮ ದರ್ಜೆ ಸಹಾಯಕರನ್ನು ನೇಮಿಸಲಾಗಿದೆ.  ಅದೇ ರೀತಿ ಒಟ್ಟು ೫ ವಿಡಿಯೋ ವಿವಿಂಗ್ ತಂಡವನ್ನು ನೇಮಕ ಮಾಡಲಾಗಿದ್ದು, ಪ್ರತಿ ತಂಡದಲ್ಲಿ ಒಬ್ಬರು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಒಬ್ಬರು ಪ್ರ.ದ.ಸ./ ದ್ವಿ.ದ.ಸ. ಕಾರ್ಯ ನಿರ್ವಹಿಸಲಿದ್ದಾರೆ.  ಕ್ಷೇತ್ರದಲ್ಲಿ ಅಕ್ರಮ ಮದ್ಯ ಸರಬರಾಜು ಆಗದಂತೆ ತಡೆಯಲು ಬೆಳಗಟ್ಟಿ, ಭಾನಾಪುರ, ಇರಕಲ್ಲಗಡಾ, ಜಬ್ಬಲಗುಡ್ಡಾ, ಮುನಿರಾಬಾದ್ ಡ್ಯಾಂ ಕ್ರಾಸ್ ಹಾಗೂ ಹೊಸೂರು ಕ್ರಾಸ್ ಸೇರಿದಂತೆ ಒಟ್ಟು ೦೬ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.  ಪ್ರತಿ ಚೆಕ್ ಪೋಸ್ಟ್‌ಗೆ ತಲಾ ಮೂವರು ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ದಿನದ ೨೪ ಗಂಟೆಗಳೂ ಸಹ ಈ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸಿ, ಅಕ್ರಮ ಮದ್ಯ ಸಾಗಾಣಿಕೆಯನ್ನು ಪತ್ತೆಹಚ್ಚುವ ಕಾರ್ಯದಲ್ಲಿ ನಿರತವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
Please follow and like us:
error