ಬಾನ್ಸುರಿವಾದನದಲ್ಲಿ ಮಿಂದೆದ್ದ ಕೊಪ್ಪಳದ ಜನತೆ.

ಕೊಪ್ಪಳ,ಡಿ,೧೬ ಅಂತರಾಷ್ಟ್ರೀಯ ಖ್ಯಾತಿ ಬಾನ್ಸುರಿವಾದಕ  ಪಂ.ಪ್ರವೀಣ ಗೋಡ್ಖಿಂಡಿ ಅವರ
ಬಾನ್ಸುರಿವಾದನಕ್ಕೆ ಮನಸೋತ ಕೊಪ್ಪಳದ ಜನತೆ ಸಂಗೀತ ಸಾಗರದಲ್ಲಿ ಮಿಂದೆದ್ದರು. ನಗರದ
ಶ್ರೀರಾಘವೇಂದ್ರಸ್ವಾಮಿಗಳವರ ಮಠ ಕೊಪ್ಪಳ ಹಾಗೂ ಕಿನ್ನಾಳದ ಶ್ರೀ ಶಾರದಾ ಸಂಗೀತ, ಕಲಾ
ಶಿಕ್ಷಣ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ   ದಿ.೧೫ರ ಮಂಗಳವಾರ ದಿ. ಹನುಮಂತರಾವ್
ಕುಲಕರ್ಣಿ ಅವರ ೫ನೇ ವರ್ಷದ ಸ್ವರ ಶ್ರದ್ಧಾಂಜಲಿಯ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ
ಖ್ಯಾತಿ ಬಾನ್ಸುರಿವಾದಕ  ಪಂ.ಪ್ರವೀಣ ಗೋಡ್ಖಿಂಡಿ ಅವರ ಬಾನ್ಸುರಿವಾದನದಲ್ಲಿ
ಹಿಂದೂಸ್ತಾನಿ ಶಾಸ್ತ್ರೀ ಸಂಗೀತ ನಡೆಸಿಕೊಟ್ಟರು, 
  ಶ್ರೀರಾಘವೇಂದ್ರ ಸ್ವಾಮಿಗಳವರ ಮಠಕ್ಕೆ ಕೊಪ್ಪಳದ ಸಂಗೀತಾಸಕ್ತ ಜನಸಾಗರವೇ ಹರಿದು ಬಂದಿತ್ತು. ಈಗಿನ ಸದ್ದು ಗದ್ದಲದ ಪಾಶ್ಚಾತ್ಯ ಸಂಗೀತದ ಮಧ್ಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕೇಳುವವರ ಸಂಖ್ಯೆ ಕಡಿಮೆಯೇನಿಲ್ಲ ಎಂಬುದನ್ನು ಈ ಕಾರ್ಯಕ್ರಮ ಸಾಬೀತು ಪಡಿಸಿತು. ರಾಗ ಯಮನ್, ರಾಗದ ಮೂಲಕ ಬಾನ್ಸುರಿ ಝಲಕ್‌ನ್ನು ಪ್ರಾರಂಭಿಸಿದ ಪ್ರವೀಣ ಗೋಡ್ಖಿಂಡಿಯವರು ನಂತರ ರಾಗ.ಜೋಗ್‌ದಲ್ಲಿ ವಿಲಂತ್ ಏಕ್ ತಾಲ್, ಮತ್ತು ಧ್ರುತ್ ತೀನ್ ತಾಲ್ ಹಾಗೂ ರಾಗಗಳ ಸರಮಾಲಿಕೆಯಲ್ಲಿ  ದರ್ಭಾರಿ ಕಾನಡಾ, ದೇಶ್,ತಿಲಕಕಾಮೋದ, ಪಹಾಡಿ ಇನ್ನೂ ಅನೇಕ ರಾಗಗಗಳನ್ನು ತೀನ್‌ತಾಲ್‌ದಲ್ಲಿ ಇಡಿಕೊಪ್ಪಳದ ಜನತೆ ಸಂಭ್ರಮಿಸಿದರು.
 ಈ ಕಾರ್ಯಕ್ರಮದ ಮೊದಲನೇಯದಾಗಿ ಕು.ಚೈತ್ರಾ ಹೆಚ್.ಹೂಲಗೇರಿ, ವಿಭಾ.ವಿ.ಕಟ್ಟಿ, ರುಕ್ಮೀಣಿ ಎಲ್.ಪಾಟೀಲ್ ಇವರುಗಳು ಸುಗಮ ಸಂಗೀತ, ದಾಸವಾಣಿ ನಡೆಸಿಕೊಟ್ಟರು. ಈ ಕಾರ್ಯಕ್ರಮಕ್ಕೆ ಹಾರ್‍ಮೋನಿಯಂ ಸಾಥ್ ಲಚ್ಚಣ್ಣ ಕಿನ್ನಾಳ, ತಬಲಾ ಸಾಥಿಯಾಗಿ ಪಂ.ಕಿರಣ ಗೋಡ್ಖಿಂಡಿ ಬೆಂಗಳೂರು, ಶ್ರೀನಿವಾಸ ಜೋಶಿ ಕೊಪ್ಪಳ, ಕು.ಶಿವಲಿಂಗಪ್ಪ ಕಿನ್ನಾಳ, ತಾಳ ಸಾಥಿಯಾಗಿ ಕು,ವಿನಾಯಕ್ ಹಚ್.ಕಿನ್ನಾಳ, ರಂಗಪ್ಪ ಕಡ್ಲೀಬಾಳ ಸಾಥ್ ನೀಡಿದರು.
 ಈ ವೇದಿಕೆ ಕಾರ್ಯಕ್ರಮದಲ್ಲಿ ಹನುಮಸಾಗರದ ಹಿರಿಯ ಸಂಗೀತ ಕಲಾವಿದರಾದ ವಾಜೇಂದ್ರಾಚಾರ್ ಜೋಶಿ  ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು.ದಿವ್ಯ ಸಾನಿಧ್ಯವನ್ನು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪ.ಪೂ ಶ್ರೀಚೈತನ್ಯಾನಂದಸ್ವಾಮೀಜಿವಹಿಸಿ ಮಾತನಾಡಿ ಕಲಾವಿದರು ಕಲೆ ಆಧಾಸ್ತಂಬಗಳು ಸಾಧನೆ ಶಿಖರಕ್ಕೇರಲು ಅವರ ಹಾದಿ ಹೂವಿನಿಂದ ತುಂಬಿರಲಿಲ್ಲ ಅಪಾರ ಪರಿಶ್ರಮದಿಂದ, ಕಠಿಣ ಸಾಧನೆಯಿಂದ, ಅವಿರತ ಛಲದಿಂದ, ಕಲಾವಿದ ಒಂದು ನಿರ್ಧಿಷ್ಟಗುರಿಯನ್ನು ಮುಟ್ಟುತ್ತಾನೆ. ಸಾಧನೆಗೆ ಯಾವ ನೆಲವಾದರೇನು ಕಲಾವಿದನಿಗೆ ಎಲ್ಲೆಲ್ಲೂ ತನ್ನೂರು, ತನ್ನಜನ, ಸಾಧಿಸುವ ಹುಮ್ಮಸ್ಸು ಮಾತ್ರ ಇರಬೇಕು ಕಲಾದೇವಿಯ ಆರಾಧನೆಗಾಗಿ ತಮ್ಮ ಇಡಿ ಜೀವನ್ನೆ ಮುಡಿಪಾಟಗಿಟ್ಟ ಕೆಲವೆ ಮಹನೀಯರು ಅಜರಾಮರವಾಗಿ ಉಳಿದ್ದಿದ್ದಾರೆ ಅಂತವರ ಸಾಲಿನಲ್ಲಿ ಅಗ್ರಗಣ್ಯರು ಕೊಪ್ಪಳದ ದಿ. ಹನುಮಂತರಾವ್ ಬಂಡಿ (ಕುಲಕರ್ಣಿ)
  ಅವರು ಜಿಲ್ಲೆಯ ಹೆಮ್ಮೆಯ ಪುತ್ರ ಕೊಪ್ಪಳಕ್ಕೆ ಬಂದು ಇಲ್ಲಿ ನೆಲೆಗೊಂಡು ಗಂಧರ್ವಲೋಕವನ್ನೆ ಸೃಷ್ಟಿಸಿ ಇಲ್ಲಿನ ಜನತೆಗೆ ಸಂಗೀತದ ಗುಂಗುಹಿಸಿಡಿ ರಸದೌತಣವನ್ನೆ ಬಡಿಸಿದರು. ಅಂತವರ ನೆನಪು ನೆನಪಿಸುವುದಕ್ಕೋಸ್ಕರ ಶ್ರೀ ಶಾರದಾ ಸಂಗೀತ ಮತ್ತು ಕಲಾ ಶಿಕ್ಷಣ ಸಂಸ್ಥೆ ಕಿನ್ನಾಳ ಮುಖ್ಯಸ್ಥ ಲಚ್ಚಣ್ಣ ಕಿನ್ನಾಳ ಮತ್ತು ಅವರ ಸಂಗಡಿಗರು ಈ ಕಾರ್ಯಕ್ರಮವನ್ನು ಆಯೋಜನ ಮಾಡಿರುವುದು ಅತ್ಯಂತ ಶ್ಲಾಘನೀಯ ಎಂದು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪಪೂ ಶ್ರೀಚೈತನ್ಯಾನಂದಸ್ವಾಮೀಜಿ ನುಡಿದರು.
     ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು, ಅತಿಥಿಗಳಾಗಿ ಭಾಗ್ಯನಗರದ ಪರಶುರಾಮ ಎನ್.ಕಲಾಲ್ ವಹಿಸಿದ್ದರು. ಕಾರ್ಯಕ್ರಮದ ಸ್ವಾಗತ ಮತ್ತು ಪ್ರಾಸ್ತಾವಿಕ ಶ್ರೀನಿವಾಸ ಜೋಶಿ ಕೊಪ್ಪಳ ಹಾಗೂ ಡಾ.ಡಿ.ಆರ್.ಬೆಳ್ಳಟ್ಟಿ ಅವರುಗಳು ನಡೆಸಿಕೊಟ್ಟರು, ಯುವ ಗಾಯಕ ವಾದಿರಾಜ್ ಪಾಟೀಲ್ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Please follow and like us:
error