fbpx

ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಪ್ರೋತ್ಸಾಹ ಅಗತ್ಯ

 

ಕೊಪ್ಪಳ ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಪ್ರೋತ್ಸಾಹ ಅಗತ್ಯವಾಗಿದೆ, ಇಲ್ಲಿ ಅತಿಥಿಗಳಾದರೆ ಮಾತ್ರ ಕಾರ್ಯಕ್ರಮಕ್ಕೆ ಬರುವ ಪದ್ದತಿ ತಪ್ಪದಿದ್ದರೆ ಕಾರ್ಯಕ್ರಮ ಮಾಡುವದು ಕಷ್ಟ ಎಂದು ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಹೇಳಿದರು.

ಅವರು ನಗರದ ಗಣೇಶನಗರದ ಸಂಡೂರಕರ್ ಬಿಲ್ಡಿಂಗ್‌ನಲ್ಲಿ ಈಚೆಗೆ ಆರಂಭವಾಗಿರುವ ಅಭಿನವ ನ್ಯೂ ಡ್ಯಾನ್ಸ್ ಅಕಾಡೆಮಿಯ ಬೇಸಿಗೆ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಗೊಂಡಬಾಳ, ಕೊಪ್ಪಳದಂಥ ಸ್ಥಳದಲ್ಲಿ ಈಗ ಕಾರ್ಯಕ್ರಮಗಳನ್ನು ಮಾಡುವದು, ಸಂಘಟನೆ ಮಾಡುವದು ತುಂಬಾ ಕಷ್ಟವಾಗಿದೆ ಇಲ್ಲಿ ಆರ್ಥಿಕವಾಗಿ ಸಹಾಯ ಸಿಗುವದಿಲ್ಲ, ಜೊತೆಗೆ ಜನರು ತುಂಬಾ ಆಯ್ಕೆ ಸ್ವಭಾವ ಹೊಂದಿದ್ದು, ಗಣ್ಯರೆನಿಸಿಕೊಂಡವರು ಕೇವಲ ಅತಿಥಿಗಳಾಗಿದ್ದರೆ ಬರುತ್ತಾರೆ, ಪ್ರೇಕ್ಷಕರಾಗಿ ಕಾರ್ಯಕ್ರಮಕ್ಕೆ ಬಂದು ಪ್ರೋತ್ಸಾಹ ನೀಡುವದಿಲ್ಲ ಎಂದು ಅಸಮಾಧಾನ ತೋಡಿಕೊಂಡರು.
ಸಾವಿರಾರು ರುಪಾಯಿಗಳನ್ನು ಖರ್ಚು ಮಾಡಿಕೊಮಡು ಶಿಬಿರ ನಡೆಸುತ್ತಿರುವ ರಾಮು, ಅವರಿಗೆ ಸಹಾಯ ಮಾಡಿರುವ ಲತಾ ಸಂಡೂರಕರ್ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮವನ್ನು ಸಾಹಿತಿ ಡಾ|| ಮಹಾಂತೇಶ ಮಲ್ಲನಗೌಡರ ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಾಗಿ ಪತ್ರಕರ್ತ ಜಿ. ಎಸ್. ಗೋನಾಳ, ಕಲಾವಿದ ಬಸವರಾಜ ಕೊಪ್ಪಳ, ಸಮಾಜ ಸೇವಕರಾದ ಲತಾ ಸಂಡೂರಕರ್, ಮಮತಾ ಕುದರಿಮೋತಿ, ಉಪನ್ಯಾಸಕ ಹನುಮಂತಪ್ಪ ಅಂಡಗಿ, ಧನವಂತರಿ ಕಂಪ್ಯೂಟರ‍್ಸ್‌ನ ಶಿವರಾಜ, ಭರತನಾಟ್ಯ ತರಬೇತಿದಾರರಾದ ಕಲಾವತಿ ಇತರರು ಇದ್ದರು. ಸಂಜೀವ ಕೆ. ಸ್ವಾಗತಿಸಿದರು, ರಡ್ಡಿ ನಿರೂಪಿಸಿದರು, ರಾಮು ಪೂಜಾರ ಪ್ರಾಸ್ತಾವಿಕವಾಗಿ ಮತನಾಡಿದರು.

Please follow and like us:
error

Leave a Reply

error: Content is protected !!