ಅಕ್ರಮವಾಗಿ ಸ್ಫೊಟಕ ವಸ್ತುಗಳ ದಾಸ್ತಾನು : ಆರೋಪಿಗೆ ೫ ವರ್ಷ ಕಾರಾಗೃಹ ಶಿಕ್ಷೆ

ಕೊಪ್ಪಳ ಸೆ. : ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಯಲ್ಲೇಶಿ ಅಲಿಯಾಸ್ ರಾಜಾ ತಂದೆ ಅರ್‍ಮುಗಂ ಎಂಬಾತ ತನ್ನ ಮನೆಯಲ್ಲಿ ೫೧ ಕೆ.ಜಿ. ಸ್ಫೋಟಕ ವಸ್ತುಗಳನ್ನು ಅನಧಿಕೃತವಾಗಿ ದಾಸ್ತಾನು ಇಟ್ಟಿಕೊಂಡಿದ್ದಕ್ಕಾಗಿ ಆರೋಪಿ ಯಲ್ಲೇಶಿಗೆ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ೫ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ೫೦೦೦ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
  ಆರೋಪಿ ಯಲ್ಲೇಶಿ ಸಂಗಾಪುರ ಗ್ರಾಮದ ಲಂಬಾಣಿ ಓಣಿಯಲ್ಲಿರುವ ತನ್ನ ಮನೆಯಲ್ಲಿ ೫೧ ಕೆ.ಜಿ. ಸ್ಫೋಟಕ ವಸ್ತುಗಳನ್ನು ಅನಧಿಕೃತವಾಗಿ ಇರಿಸಿಕೊಂಡಿದ್ದ ಕುರಿತು ಕಳೆದ ೨೦೦೮ ರ ನವೆಂಬರ್ ೨೧ ರಂದು ಪೊಲೀಸ್ ಇನ್ಸ್‌ಪೆಕ್ಟರ್ ಸುಭಾನಸಾಹೇಬ ಖವಾಸ್ ಅವರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿರುದ್ಧ ದೋಷಾರೋಪ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಎಸ್. ಮಾಳಗಿ ಅವರು ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗೆ ೫ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ೫೦೦೦ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.  ಸರ್ಕಾರಿ ಅಭಿಯೋಜಕ ಐ.ಬಿ. ಚೌಧರಿ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
Please follow and like us:

Related posts

Leave a Comment