ಶಾಸಕರಿಂದ ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ಸಹಾಯಧನ ಚೆಕ್ಕ ವಿತರಣೆ.

ಕೊಪ್ಪಳ-೧೮ ನಗರದ ಶಾಸಕರ ಕಾರ್ಯಾಲಯದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿಸಿದ ಕಾರ್ಮಿಕರ ಖಾಸಿಮಲಿ ಎಂಬ ಕಾರ್ಮಿಕನು ಅನಾರೋಗ್ಯದಿಂದ ಮೃತ ಪಟ್ಟಿದ್ದು ಇತನ ಕುಟುಂಬಕ್ಕೆ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಅಂತ್ಯಕ್ರೀಯೆ ಮತ್ತು ಅನುಗ್ರಹ ರಾಸಿ ಸಹಾಯಧನ ರೂ. ೫೪೦೦೦ ಸಹಾಯಧನ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಕಾಮಿಕ ಇಲಾಖೆಯ ನಿರಿಕ್ಷಕರಾದ ಬಸಯ್ಯ ಅಂಗಡಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ ಪಿ ಚಿಕೆನಕೊಪ್ಪ , ಜಿಲ್ಲಾ ಸಂಚಾಲಕ ಎಸ್. ಎ. ಗಫಾರ್, ವಕ್ತಾರ ಅಕ್ಬರ್ ಪಾಷಾ ಪಲ್ಟಾನ ಉಪಸ್ಥಿತರಿದ್ದರು.

Please follow and like us:
error