ಸಮಾಜಕಲ್ಯಾಣ ಇಲಾಖೆ ವಸತಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

 ಕೊಪ್ಪಳ ಮೇ ಸಮಾಜ ಕಲ್ಯಾಣ ಇಲಾಖೆಯು ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಸುತ್ತಿರುವ ವಿದ್ಯಾರ್ಥಿನಿಲಯಗಳಲ್ಲಿ ೬ ರಿಂದ ೧೦ ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
  ಕೊಪ್ಪಳ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲಾಗುತ್ತಿರುವ ಗಿಣಿಗೇರಾ, ಕೊಪ್ಪಳ, ಬಿಸರಳ್ಳಿ, ಬೂದಗುಂಪ, ಗೊಂಡಬಾಳೋ, ಕವಲೂರು, ಚಿಲಕಮುಖಿ ಗ್ರಾಮಗಳಲ್ಲಿನ ಪ.ಜಾತಿಯ ಬಾಲಕರ ವಸತಿ ನಿಲಯ, ಕೂಕನಪಳ್ಳಿ ಗ್ರಾಮದ ಪ.ವರ್ಗದ ಬಾಲಕರ ವಸತಿನಿಲಯಗಳಲ್ಲಿ ೬ ರಿಂದ ೧೦ ನೇ ತರಗತಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಹಾಗೂ ಕೊಪ್ಪಳದ ಪ.ಜಾತಿ ಬಾಲಕಿಯರ ವಸತಿ ನಿಲಯದಲ್ಲಿ ೫ ರಿಂದ ೧೦ ನೇ ತರಗತಿಯ ವಿದ್ಯಾರ್ಥಿನಿಯರಿಗೆ ಪ್ರವೇಶಕ್ಕಾಗಿ ಪ.ಜಾತಿ, ಪ.ವರ್ಗ ಹಾಗೂ ಇತರೆ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ವಿದ್ಯಾರ್ಥಿಗಳನ್ನು ಆಯ್ಕೆ ಸಮಿತಿಯಲ್ಲಿ ಶೇ. ೭೫ ಮತ್ತು ಶೇ. ೨೫ ರ ಅನುಪಾತದಲ್ಲಿ ಆಯ್ಕೆ ಮಾಡಲಾಗುವುದು.  ವಿದ್ಯಾರ್ಥಿಗಳು ನಿಗದಿತ ಅರ್ಜಿಯನ್ನು ಆಯಾ ವಿದ್ಯಾರ್ಥಿನಿಲಯಗಳ ಮೇಲ್ವಿಚಾರಕರಿಂದ ಅಥವಾ ಕೊಪ್ಪಳ ತಾಲೂಕು ಸಮಾಜಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅರ್ಜಿ ಪಡೆದ ಸ್ಥಳದಲ್ಲಿ ಜೂ. ೬ ರೊಳಗಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
Please follow and like us:
error