ಸಾಕಿ ಪದ್ಯ

ಇದು ಎಂದಿಗೂ ಮುಗಿಯದ ದಾಹ ಸಾಕಿ
ಬಟ್ಟಲು ತುಂಬಿ ವಿಷವನಿಕ್ಕಿ, ಹೆಣದ ರಾಶಿಗೆ ಬೆಂಕಿಯನಚ್ಚುವರು
ರಾಕ್ಷಸದಾಹಕೆ ಕೊನೆ ಎಲ್ಲಿದೆ ಸಾಕಿ
ಅನ್ನ ಕಿತ್ತು , ಹರಿವ ಬೆವರ ರಕ್ತಕ್ಕೆ ಉಪ್ಪು ಸುರಿವರು
ಹತ್ಯೆಗಳಿಗಿಲ್ಲ ಕೊನೆ ಸಾಕಿ
ಮರ್‍ಯಾದೆ ಹೆಸರಿಗೆ.ಧರ್ಮದ ಹೆಸರಿಗೆ ಯಾವ್ಯಾವುದೋ ನೆಪಕ್ಕೆ ಕೊಲ್ಲುವರು
ಕೊಲ್ಲುವರು ಪ್ರೀತಿಗೂ , ದ್ವೇಷಕ್ಕೂ ಸಾಕಿ
ರಕ್ತ ಕುಡಿಯುವ ವಿಕೃತ ದಾಹ ಎಂದಿಗೂ ಮುಗಿಯದು
ಎಂದಾದರೊಮ್ಮೆ ನಿನ್ನ ಮಧುಮಂದಿರಕ್ಕೆ ಬಂದೇ ಬರುವರು ಸಾಕಿ
ಅಮೃತ ಪ್ರೀತಿಯ ಬಟ್ಟಲು ತುಂಬಿ ಕುಡಿಸು
Please follow and like us:
error

Related posts

Leave a Comment