ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರವರಿಗೆ ನಾವು ಚಿರಋಣಿಗಳಾಗಿರಬೇಕು- ಕುಂವೀ

ಕೊಪ್ಪಳ :  ನಮ್ಮ ದೇಶದಲ್ಲಿ ಒಂದು ಧರ್ಮ, ಸಂಸ್ಕೃತಿ ಇಲ್ಲ.  ಹಲವು ಧರ್ಮ ಮತ್ತು ಸಂಸ್ಕೃತಿಗಳ ತ್ರಿವೇಣಿ ಸಂಗಮ ನಮ್ಮ ದೇಶ. ನಮ್ಮ  ದೇಶದಲ್ಲಿ ಇರುವ ಏಕೈಕ ಧರ್ಮ ಭಾರತದ ಸಂವಿಧಾನ. ೬೬ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಾವು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಗೆ ಚಿರಋಣಿಗಳಾಗಿರಬೇಕು ಎಂದು ಹಿರಿಯ ಸಾಹಿತಿ ಕುಂ.ವೀರಭಧ್ರಪ್ಪ ಹೇಳಿದರು. ಅವರು ಇಂದು ನಗರದ  ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ೬೬ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಐದು ನೂರಕ್ಕೂ ಹೆಚ್ಚು ರಾಜ ಸಂಸ್ಥಾನಗಳನ್ನು ಒಗ್ಗೂಡಿಸಿ ಒಂದು ಮಾಡಿದ ದಿನ. ಮಕ್ಕಳು  ದೇಶಕ್ಕಾಗಿ ಏನಾದರೂ ಮಾಡಬೇಕು,ದೇಶದ ಏಕತೆಗಾಗಿ,ಸಮಗ್ರತೆಗಾಗಿ  ನಾವೆಲ್ಲ ಶ್ರಮಿಸಬೇಕು ಎಂದು ಪಣ ತೊಡಬೇಕು, ಮಕ್ಕಳು ಭಾರತದ ಸಂವಿಧಾನಕ್ಕನುಗುಣವಾಗಿ ಆಚರಿಸುವ ಸತ್ಪ್ರಜೆಗಳಾಬೇಕು ಎಂದು ಕರೆ ನೀಡಿದರು. 
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ನಗರಸಭಾ ಸದಸ್ಯರಾದ ಮಲ್ಲಪ್ಪ ಕವಲೂರ ವಹಿಸಿದ್ದರು. ವೇದಿಕೆಯ ಮೇಲೆ ಪಂಡಿತಾರಾಧ್ಯ, ಸಂಸ್ಥೆಯ ಕಾರ‍್ಯದರ್ಶಿ ಆರ್.ಎಚ್.ಅತ್ತನೂರ, ಶ್ರೀಮತಿ ರೇಣುಕಾ ಅತ್ತನೂರ ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ಶಾಲೆಯ ಮಕ್ಕಳು ಮತ್ತು ಪಾಲಕರು ಪಾಲ್ಗೊಂಡಿದ್ದರು. ಕಾರ‍್ಯಕ್ರಮ ನಿರೂಪಣೆಯನ್ನು ಶಿವಲೀಲಾ ಮಾಡಿದರು. ಚಿದಾನಂದ ಸ್ವಾಗತಿಸಿದರೆ ,ಜಯಶ್ರೀ ಕುಲಕರ್ಣಿ ವಂದನಾರ್ಪಣೆಯನ್ನು ಮಾಡಿದರು. 

Leave a Reply