You are here
Home > Koppal News > ಅಧ್ಯಕ್ಷ-ಉಪಾಧ್ಯಕ್ಷರಿಂದ ಕೊಪ್ಪಳ ನಗರದ ಎರಡನೇ ಹಂತದ ಕುಡಿವ ನೀರಿನ ಕಾಮಗಾರಿ ವೀಕ್ಷಣೆ

ಅಧ್ಯಕ್ಷ-ಉಪಾಧ್ಯಕ್ಷರಿಂದ ಕೊಪ್ಪಳ ನಗರದ ಎರಡನೇ ಹಂತದ ಕುಡಿವ ನೀರಿನ ಕಾಮಗಾರಿ ವೀಕ್ಷಣೆ

ಕೊಪ್ಪಳ. ಕೊಪ್ಪಳ ನಗರಸಭೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಕೊಪ್ಪಳ ನಗರದ ಎರಡನೇ ಹಂತದ ಕುಡಿವ ನೀರಿನ ಯೋಜನಾ ಕಾಮಗಾರಿ ಭರದಿಂದ ಸಾಗಿದ್ದು, ಸೋಮವಾರ ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸೊಂಡೂರ ಹಾಗೂ ಉಪಾಧ್ಯಕ್ಷ ಅಮ್ಜದ್ ಪಟೇಲ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಖುದ್ದು ಕಾಮಗಾರಿ ವೀಕ್ಷಿಸಿದರು.
ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ೬೩ರಲ್ಲಿ ನಡೆದಿರುವ ಕುಡಿವ ನೀರಿನ ಎರಡನೇ ಹಂತದ ಕಾಮಗಾರಿಯು ಈಗಾಗಲೇ ತುಂಗಭದ್ರಾ ನದಿಯಿಂದ ಕೊಪ್ಪಳ ನಗರಕ್ಕೆ ನೀರು ಪೂರೈಕೆ ಮಾಡುವ ಕಾಮಗಾರಿಯಾಗಿದ್ದು, ಈ ಕಾಮಗಾರಿ ಪೂರ್ಣಗೊಣಂಡಲ್ಲಿ ಕೊಪ್ಪಳ ನಗರಕ್ಕೆ ದಿನದ ೨೪ತಾಸು ನಿರಂತರ ನೀರು ಪೂರೈಕೆಯಾಗಲಿರುವುದರಿಂದ ಈ ಯೋಜನೆ ಮಹತ್ವಹೊಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಅಧ್ಯಕ್ಷ-ಉಪಾಧ್ಯಕ್ಷರು ಕಾಮಗಾರಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕಾಮಗಾರಿಯನ್ನು ತೀವ್ರಗತಿಯಲ್ಲಿ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದ ಹಾಗೂ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಆದೇಶಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅನಿಕೇತ ಅಗಡಿ, ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ, ಕರ್ನಾಟಕ ವಾಟರ್ ಬೋರ್ಡನ ಸಹಾಯಕ ಕಾರ್ಯನಿರ್ವಾಹಕ ಪ್ರಭಣ್ಣನವರ, ಕಿರಿಯ ಅಭಿಯಂತರರು, ಮತ್ತಿತರರು ಉಪಸ್ಥಿತರಿದ್ದರು

Leave a Reply

Top