fbpx

ಬನ್ನಿಕಟ್ಟಿ ಏರಿಯಾದ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ ರಚನೆ

 ಕೊಪ್ಪಳ ನಗರದ ಬನ್ನಿಕಟ್ಟಿ ಏರಿಯಾದ ಸರಕಾರಿ ಪ್ರೌಢಶಾಲೆಯಲ್ಲಿ ನೂತನವಾಗಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ       ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ  ಪರಮಾನಂದ ಯಾಳಗಿಯವರು ಸರ್ವಾನುಮತದಿಂದ ಆಯ್ಕೆ       ಯಾದರು. ಸದಸ್ಯರಾಗಿ  ಮಲ್ಲಿಕಾರ್ಜುನ ಪ್ರಭುಶೆಟ್ಟರ್ ,   ಈರಪ್ಪ ಅಗಡಿ,   ಮಲ್ಲಪ್ಪ ದೊಡ್ಡಮನಿ,  ರಮೇಶ        ಬಿಶೆಟ್ಟಿ,  ಚಾಂದ್ ಪಾಷಾ ಗೂದಿ, ಶ್ರೀಮತಿ ಮಂಜುಳಾ ಮೀರಜಕರ್, ಶ್ರೀಮತಿ ಮಂಜುಳಾ ಹೂಗಾರ,  ಶ್ರೀಮತಿ       ಲಕ್ಷ್ಮೀ ಸುರ್ವೆ ಆಯ್ಕೆಯಾಗಿದ್ದಾರೆ.
                             ಸಭೆಯಲ್ಲಿ ಹಾಜರಿದ್ದ ಪಾಲಕರ ಪರಿಷತ್ತಿನ ಸದಸ್ಯರು ನೂತನ ಎಸ್.ಡಿ.ಎಂ.ಸಿ ಯನ್ನು ಆಯ್ಕೆ ಮಾಡಿದರು.    ಸಭೆಯ ಆರಂಭದಲ್ಲಿ ಪಾಲಕರನ್ನು  ರಾಮರಡ್ಡೆಪ್ಪ ಶಿಕ್ಷಕರು ಸ್ವಾಗತಿಸಿದರು. ಹಿರಿಯ ಶಿಕ್ಷಕರಾದ  ಜಯರಾಜ    ಬೂಸದ ಪ್ರಾಸ್ತಾವಿಕ ಮಾತನಾಡಿದರು. ಸಭೆಯ ಅದ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ   ಕರಿಬಸಪ್ಪ ಪಲ್ಲೇದ ಇವರು    ವಹಿಸಿ ನೂತನ ಸದಸ್ಯರಿಗೆ ಶುಭ ಕೋರಿದರು. ಸಭೆಯ ಕೊನೆಯಲ್ಲಿ  ವೀರಯ್ಯ ಚಿತ್ರಕಲಾ ಶಿಕ್ಷಕರು ವಂದಿಸಿದರು.
Please follow and like us:
error

Leave a Reply

error: Content is protected !!