ಅ. ೬ರ ಸಂಸ್ಕೃತಿ ಸಂವಾದದಲ್ಲಿ ಸಾಹಿತಿ ಎ. ಎಂ ಮದರಿ

ಬಳ್ಳಾರಿ, ಅ. ೪: ನಗರದ ಸಂಸ್ಕೃತಿ ಪ್ರಕಾಶನ ಮತ್ತು ಕರ್ನಾಟಕ ಜಾನಪದ ಪರಿಷತ್, ತಾಲೂಕು ಘಟಕ ಅ. ೬ ರಂದು ಭಾನುವಾರ ಬೆ. ೧೧ ಗಂಟೆಗೆ ಇಲ್ಲಿನ ಸ್ನೇಹ ಸಂಪುಟ ಸಭಾಂಗಣದಲ್ಲಿ ಆಯೋಜಿಸಿರುವ ೨ ನೇ ಸಂಸ್ಕೃತಿ ಸಂವಾದ ಕಾರ್ಯಕ್ರಮದಲ್ಲಿ 
’ಗೊಂದಲಿಗ್ಯಾ’ ಕೃತಿ ಲೇಖಕ ಎ. ಎಂ. ಮದರಿ ಅವರು  ಭಾಗವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಪ್ರಸಿದ್ಧ ಜಾನಪದ, ರಂಗಭೂಮಿ ಹಿರಿಯ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣಅವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಚಿಂತಕ, ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ಅವರು ವಹಿಸಲಿದ್ದಾರೆ.  ಕಮಲಾಪುರ ಸರಕಾರಿ  ಪದವಿ ಪೂರ್ವ ಕಾಲೇಜ್‌ನ ಉಪನ್ಯಾಸಕ ಡಾ. ದಯಾನಂದ ಕಿನ್ನಾಳ ಅವರು ’ಗೊಂದಲಿಗ್ಯಾ’ ಕೃತಿ ಹಾಗೂ ಲೇಖಕರನ್ನು ಪರಿಚಯಿಸಲಿದ್ದಾರೆ. 
ಮುಖ್ಯ ಅತಿಥಿಗಳಾಗಿ  ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಡಾ. ಕೆ ಎಂ ಮೇತ್ರಿ, ಬಳ್ಳಾರಿ ಜಿಲ್ಲಾ ಶ್ರೀ ವಿಠಲ ಗೊಂದಳಿ ಸಮಾಜದ ಜಿಲ್ಲಾಧ್ಯಕ್ಷ ಡಾ. ಎಸ್ ಎನ್. ಶಾಸ್ತ್ರಿ, ಕಸಾಪ ನಿಕಟಪೂರ್ವ ಅಧ್ಯಕ್ಷ ನಿಷ್ಟಿ ರುದ್ರಪ್ಪ, ಚಿಂತಕ ಕಲ್ಲುಕಂಬ ಪಂಪಾಪತಿ, ಹೆಸರಾಂತ ಜಾನಪದ ಹಿರಿಯ ಕಲಾವಿದೆ ಬಿ. ಸುಜಾತಮ್ಮ ಅವರು ಉಪಸ್ಥಿತರಿರುವರು ಎಂದು ಪ್ರಕಾಶಕ ಸಿ ಮಂಜುನಾಥ್ ತಿಳಿಸಿದ್ದಾರೆ.
ಸಂವಾದದಲ್ಲಿ ಪತ್ರಕರ್ತರಾದ ಎಂ ಇ ಜೋಷಿ, ಮಾನು ವೆಂಕಟೇಶ್, ಶ್ರೀ ಚೈತನ್ಯ ಪದವಿಪೂರ್ವ ಕಾಲೇಜ್‌ನ ಉಪನ್ಯಾಸಕ ಡಾ. ನಿಂಗಪ್ಪ ಬಿ ಹೊಸಳ್ಳಿ, ಗೌತಮ ಬುದ್ಧ ಸ್ಮಾರಕ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಲಕ್ಕಿ ಪೃಥ್ವಿರಾಜ್, ಕರ್ನಾಟಕ ಜಾನಪದ ಪರಿಷತ್ ಬಳ್ಳಾರಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ, ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್, ಕನ್ನಡ ಪರ ಹೋರಾಟಗಾರ ಬಿ ಚಂದ್ರಶೇಖರ್ ಆಚಾರ್, ಕವಯತ್ರಿ ಶ್ರೀಮತಿ ಸರೋe ಬ್ಯಾತನಾಳ್, ಸಂಶೋಧಕ, ಪತ್ರಕರ್ತ ಡಾ. ಕೆ ಬಸಪ್ಪ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಹೆಚ್ ಕುಮಾರಸ್ವಾಮಿ, ಸರಕಾರಿ ಪ್ರಥಮದರ್ಜೆ ಕಾಲೇಜ್‌ನ ಉಪನ್ಯಾಸಕ ಡಾ. ದುರ್ಗಪ್ಪ, ಡಾ. ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆಯ ಉಪಾಧ್ಯಕ್ಷ ಕೂನಾ ರಾಘವೇಂದ್ರ,  ಪ್ರಧಾನ ಕಾರ್ಯದರ್ಶಿ ಬಿ. ಸುರೇಶ್ ಕುಮಾರ್,  ಹಳೇ ದರೋಜಿ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್‌ನ ಅಧ್ಯಕ್ಷ ವಿ ರಾಮಾಂಜನೇಯ (ಅಶ್ವರಾಮು), ಕವಿ ಕೆ ಶಿವಲಿಂಗಪ್ಪ ಹಂದ್ಯಾಳ್, ಉಪನ್ಯಾಸಕ ನಾಗಿರೆಡ್ಡಿ. ಮೇಡಂ ಕ್ಯೂರಿ ಅಕಾಡೆಮಿಯ ಅಧ್ಯಕ್ಷ ಕವಿ ಎಸ್ ಮಂಜುನಾಥ್ ಮತ್ತಿತರರು ಭಾಗವಹಿಸುವರು.
ನಗರದ ಹಂದ್ಯಾಳ್ ಶ್ರೀ ಮಹಾದೇವ ತಾತಾ ಕಲಾ ಸಂಘ, ಡಾ. ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆ ಮತ್ತು ಬಳ್ಳಾರಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕಾರ್ಯಕ್ರಮ ಜರುಗಲಿದೆ. 
Please follow and like us:
error