ಮೆಕ್ಕೆ ಜೋಳ ಖರೀದಿ ಕೇಂದ್ರ ಉದ್ಗಾಟನೆ

ಕೊಪ್ಪಳ ನ. : ನಗರದ ಕೃಷಿ ಮಾರುಕಟ್ಟೆ ಆವಣದಲ್ಲಿ ಮೆಕ್ಕೆ ಜೋಳ ಖರೀದಿ ಕೇಂದ್ರದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಕೆ,ಎಸ್.ಸತ್ಯಮೂರ್ತಿಯವರು ಇಂದು ನೇರವೇರಿಸಿದರು.
ಮೆಕ್ಕೆ ಜೋಳ ಬೆಳೆಗಾರರಿಗೆ ಇದು ಉಪಯುಕ್ತವಾಗಲಿದೆ ರೈತರು ಇದರ ಉಪಯೋಗ ಪಡೆದುಕೊಳ್ಳಬೇಕು ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ಟಿಂಟಾಲಿಗೆ ರೂ.೮೮೦-೦೦ ರಂತೆ ಉತ್ತಮ ಗುಣ ಮಟ್ಟದ ಮೆಕ್ಕೆ ಜೋಳ ಖರೀದಿಸಲಾಗುವುದು ರಾಜ್ಯ ಮಾರಾಟ ಮಂಡಳಿ ಇದರ ಉಸ್ತುವಾರಿ ವಹಿಸಿ ಕೊಂಡಿದ್ದು ಅಗತ್ಯ ಏರ್ಪಾಡು ಮಾಡಿದೆ ಕಡಿಮೆ ಅವಧಿಯಲ್ಲಿ ಕೇಂದ್ರ ತೆರೆಯುವಲ್ಲಿ ಶ್ರಮಿಸಿದ ತಹಸಿಲ್ದಾರ್ ವಿಜಯಕುಮಾರ್ ಮತ್ತು ಮಾರಾಟ ಮಹಾಮಂಡಳಿಯ ವ್ಯವಸ್ಧಾಪಕ ಹುಡೆದ್ ಅವರು ಅಭಿನಂದನಾರ್ಹರು ಮೆಕ್ಕೆ ಜೋಳದ ಎಫ್‌ಎಕ್ಯೂ ಗುಣಮಟ್ಟವನ್ನು ಕೃಷಿ ಇಲಾಖೆಯ ಗ್ರೇಡರ್‍ಸ್ ಆಯ್ಕೆ ಮಾಡುತ್ತಾರೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಅವರು ಹೇಳಿದರು.
ತಹಶೀಸಿಲ್ದಾರ್ ವಿಜಯ ಕುಮಾರ್ ಎಪಿಎಂಸಿ ಕಾರ್ಯದರ್ಶಿ ಪಂಪಾಪತಿ ಮಾರಾಟ ಮಹಾ ಮಂಡಳಿಯ ವ್ಯವಸ್ಧಾಪಕ ಹುಡೇದ ಮುಂತಾದವರು ಉಪಸ್ಧಿತರಿದ್ದರು.
Please follow and like us:
error