fbpx

ಕು.ಗಾಯತ್ರಿಗೆ ೨೦೧೫ನೇ ಸಾಲಿನ ಎನ್‌ವಿಎಸ್ ಇನ್ಸೆಂಟಿವ್ ಆವಾರ್ಡ.

ಕೊಪ್ಪಳ :  ಕುಕನೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಓದುತ್ತಿರುವ  ಕು.ಗಾಯತ್ರಿ ೨೦೧೫ನೇ ಸಾಲಿನ ಎನ್‌ವಿಎಸ್ ಇನ್ಸೆಂಟಿವ್ ಆವಾರ್ಡಗೆ ಆಯ್ಕೆಯಾಗಿದ್ದಾಳೆ. ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಾಧನೆ ತೋರಿದ ನವೋದಯದ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಈ ಪುರಸ್ಕಾರ ನೀಡಲಾಗುತ್ತದೆ. ಕು.ಗಾಯತ್ರಿ ೨೦೧೪-೧೫ನೇ ಸಾಲಿನಲ್ಲಿ ಕಾಮರ್ಸ ವಿಭಾಗದಲ್ಲಿ ಎಐಎಸ್‌ಎಸ್‌ಸಿಇ(೧೨) ತರಗತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಅಗ್ರಗಣ್ಯರಾಗಿ ಆಯ್ಕೆಯಾಗಿದ್ದಳು.  ಕು.ಗಾಯತ್ರಿ ಕೊಪ್ಪಳ ಬನ್ನಿಕಟ್ಟಿಯ ನಿವಾಸಿ ರಮೇಶ ಕುಲಕರ್ಣಿಯವರ ಪುತ್ರಿಯಾಗಿದ್ದು ಪ್ರತಿವರ್ಷವೂ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ತೋರುತ್ತಾ ಬಂದಿದ್ದಾಳೆ. ಕಾಮರ್ಸ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಟಾಪರ್ ಎಂದು ಸಾಧನೆ ಮಾಡಿದ್ದಾಳೆ. ಇದೇ ತಿಂಗಳ ೨೪ರಂದು ಹೈದ್ರಾಬಾದ ವಿಶ್ವವಿದ್ಯಾಲಯದ ಡಿಎಸ್ ಟಿ ಅಡಿಟೋರಿಯಂನಲ್ಲಿ  ನಡೆಯಲಿರುವ ಸಮಾರಂಭದಲ್ಲಿ ಬಹುಮಾನ ವಿತರಣೆ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ.  ವಿದ್ಯಾರ್ಥಿನಿಯ ಈ ಸಾಧನೆಗೆ ಶಿಕ್ಷಕರು, ಪಾಲಕರು ಮತ್ತು ಗುರಯ್ಯ ಹಿರೇಮಠ, ವಿಶ್ವನಾಥ ಹಿರೇಮಠ, ರಾಜಶೇಖರ, ರಾಜಾಬಕ್ಷಿ ಎಚ್.ವಿ. ಸೇರಿದಂತೆ ಇತರರು ಅಭಿನಂದಿಸಿದ್ದಾರೆ. 

Please follow and like us:
error

Leave a Reply

ಭಾಗ್ಯನಗರ ವಲಯದ ಕೆ.ಎಚ್.ಡಿ.ಸಿ.ಕಾಲೋನಿ ಶುದ್ಧಗಂಗಾ ನೀರಿನ ಘಟಕದ ಉದ್ಘಾಟನೆ.

ಕೊಪ್ಪಳ : ನಗರದ ಭಾಗ್ಯನಗರದಲ್ಲಿ ವಲಯದ ಕೆ.ಎಚ್.ಡಿ.ಸಿ.ಕಾಲೋನಿ ೬ನೇ ವಾರ್ಡನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಶುದ್ಧಗಂಗಾ ನೀರಿನ ಘಟಕದ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೈ.ಕರ್ನಾಟಕ  ಪ್ರಾದೇಶಿಕ ನಿರ್ದೇಶಕರಾದ ಕೆ. ಬೂದಪ್ಪಗೌಡ್ರ ಜಿ.ಪಂ ಸದಸ್ಯರಾದ ವನಿತಾ ಗಡಾದ, ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ, ದಾನಪ್ಪ ಕವಲೂರ, ಶ್ರೀನಿವಾಸ ಹ್ಯಾಟಿ, ರಮೇಶ ಹ್ಯಾಟಿ, ಹೊನ್ನುರಸಾಬ ಬೈರಾಪೂರ, ಯೋಜನೆಯ ಕೊಪ್ಪಳ ಜಿಲ್ಲಾ ನಿದೆಶಕರಾದ ಹೆಚ್ ಎಲ್ ಮುರಳಿಧರ, ಕೊಪ್ಪಳ ತಾಲೂಕಿನ ಯೋಜನಾಧಿಕಾರಿಯಾದ ಸುರೇಂದ್ರ ನಾಯಕ, ತಾ.ಪಂ ಕಾರ್ಯನಿರ್ವಾಹಕ ಟಿ.ಕೃಷ್ಣಮೂರ್ತಿ, ಗ್ರಾ.ಪಂ ಮಾಜಿ ಸದಸ್ಯ ಚಂದ್ರು ಉಂಕಿ ಕೊಪ್ಪಳ ಜಿಲ್ಲೆ ನೂಡಲ್ ಅಧಿಕಾರಿ ಈರಯ್ಯ ಶುದ್ದಗಂಗಾ ನೀರಿನ ಘಟಕದ ಮೇಲ್ವಿಚಾರಕರು ವಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು
ಪ್ರಾದೇಶಿಕ ನಿರ್ದೇಶಕರಾದ ಕೆ ಬುದಪಗೌಡ್ರು ಮಾತನಾಡುತ್ತಾ ಯೋಜನೆಯ ಕಾರ್ಯಕ್ರಮದ ಬಗ್ಗೆ ಮತ್ತು ಶುದ್ದ ಕುಡಿಯುವ ನೀರಿನ ಬಗ್ಗೆ ಆರೋಗ್ಯದ ಹಿತ ದೃಷ್ಟಿಯಿಂದ ಪ್ಲೋರೈಡ ಅಂಶವಿರುವ ನೀರಿನಿಂದ ಆಗುವ ರೋಗಾಣುಗಳ ಪರಿಣಾಮದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟರು ಮತ್ತು ೨ ರೂ ಯಲ್ಲಿ ೨೦ ಲೀಟರ ನೀರು ಘಟಕದಲ್ಲಿ ಸದಸ್ಯತ್ವ ಹೊಂದಿರುವ ಸದಸ್ಯರಿಗೆ ನೀರನ್ನು ಕೊಳ್ಳುವ ಬಗ್ಗೆ ಹಾಗೂ ಫಲಾನುಭವಿಗೆ ನೀರಿನ ಕ್ಯಾನ ವಿತರಿಸಿದರು. ಕೊಡಪಾನಗಳಲ್ಲಿ ಶುದ್ಧ ನೀರನ್ನು ಬಳಕೆ ಮಾಡಿದರೆ ನೀರಿನ ಗುಣಮಟ್ಟ ಕಳೆದುಕೊಳ್ಳುತ್ತದೆ ಆದ್ದರಿಂದ  ಸ್ವಚ್ಚತೆಯಿರುವ ಫೂಢ್ ಗ್ರೇಡ್ ಕ್ಯಾನಲ್ಲಿ ನೀರಿನ ಬಳಕೆ ಸೂಕ್ತ ಎಂದು ತಿಳಿಸಿದರು.
Please follow and like us:
error

Leave a Reply

error: Content is protected !!