ಶನಿವಾರ ಸಹಸ್ರಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ.

ಕೊಪ್ಪಳ, ಜು. ೯. ನಗರದ ಗವಿಶ್ರೀ ನಗರದಲ್ಲಿರುವ ಶ್ರೀ ಸಹಸ್ರಾಂಜನೇಯ ದೇವಸ್ಥಾನದಲ್ಲಿ ಅಧಿಕ ಮಾಸದ ಕೊನೆಯ ಶನಿವಾರ ಜು. ೧೧ ರಂದು ವಿಶೇಷ ಪೂಜೆ ನಡೆಯಲಿದೆ ಎಂದು ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ. ಅಂದು ಬೆಳಿಗ್ಗೆ ೮ ಗಂಟೆಗೆ ಟ್ರಸ್ಟ್ ಅಧ್ಯಕ್ಷರು, ಆಂಜನೇಯನ ಪರಮ ಆರಾಧಕರಾದ ಪ್ರಕಾಶ ಶಿಲ್ಪಿಯವರಿಂದ ೩೦೯೩ ನೇ ಮೂರ್ತಿ ಸೇವಾ ಆರಂಭವಾಗಿ ನಂತರ ಪಂಚಾಮೃತ ಅಭಿಷೇಕ, ಎಲಿ ಪೂಜೆ, ಸರ್ವ ಭಕ್ತರಿಂದ ಅಭಿಷೇಕ ಕಾರ್ಯಕ್ರಮ ಜರುಗುತ್ತಿದ್ದು, ಅಧಿಕ ಮಾಸದಲ್ಲಿ ಆಂಜನೇಯನ ದರ್ಶನ ವಿಶೇಷ ಫಲ ನೀಡುತ್ತದೆ, ಈ ಮಾಸದಲ್ಲಿ ಮೂರು ಆಂಜನೇಯನ ಮೂರ್ತಿಗಳಿರುವ ಕಾಂತೇಶ, ಶಾಂತೇಶ ಮತ್ತು ಭ್ರಾಂತೇಶರಿಗೆ ಹೋಗುತ್ತಾರೆ, ಅಲ್ಲಿಗೆ ಹೋಗಲು ಆಗದವರು ಇಲ್ಲಿಯೇ ಅಂಥಹ ದರ್ಶನ ಭಾಗ್ಯ ಸಿಗಲಿ ಎಂಬ ಆಶಯದಿಂದ ನಿರ್ಮಾಣವಾಗುತ್ತಿರುವ ದೇವಸ್ಥಾನದಲ್ಲಿ ಆಗುತ್ತಿರುವ ಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಶೋಕ ಬಜಾರಮಠ ಕೋರಿದ್ದಾರೆ.

Related posts

Leave a Comment