ಶಿಕ್ಷಕರ ವೃತ್ತಿ ಪವಿತ್ರವಾದ ಹುದ್ದೆ.

ಮುನಿರಾಬಾದ-09- ವಿನೂತನ ಶಿಕ್ಷಣ ಸೇವಾ ಸಂಸ್ಥೆಯ ಸುರಭಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಮುನಿರಾಬಾದ (ಆರ್.ಎಸ್) ಇದರ ೨೦೧೪-೧೫ನೇ ಸಾಲಿನ ಪೌರತ್ವ ತರಬೇತಿ ಶಿಭಿರದ ದ್ವಜಾರೋಹಣ ನೇರವೇರಿಸಿ ಉದ್ಘಾಟನಾ ಭಾಷಣ ಮಾಡಿದ ಕೊಪ್ಪಳ ಸಂಸದರಾದ ಸಂಗಣ್ಣ ಕರಡಿಯವರು ಶಿಕ್ಷಕರ ವೃತ್

ತಿ ಪವಿತ್ರವಾದ ಹುದ್ದೆ ಎಂದು ತಿಳಿಸಿದ ಅವರು ನೈತಿಕತೆ ಮೌಲ್ಯ, ಪವಿತ್ರವಾದ ಶಿಕ್ಷಕ ವೃತ್ತಿಯ ಗೌರವವನ್ನು ಎತ್ತಿ ಹಿಡಿದಿದ್ದು ಈ ಹಂತದಲ್ಲಿ ಸರ್ವಪಲ್ಲಿ ರಾಧಕೃಷ್ಣನ್, ಸಿ.ಎನ್.ರಾವ್ ಹಾಗೂ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ, ರವರ ಕೊಡುಗೆ ಅಪಾರವಾದದ್ದು ಎಂದು ಅವರು ತಿಳಿಸುತ್ತಾ ಈ ದಿಶೆಯಲ್ಲಿ ವಿನೂತನ ಶಿಕ್ಷಣ ಸಂಸ್ಥೆಯ ಕೊಡುಗೆಯನ್ನು ಸ್ಮರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅದ್ಯಕ್ಷರಾದ ಸಿದ್ದಲಿಂಗಯ್ಯ ಹಿರೇಮಠರವರು ಮುನಿರಾಬಾದನಲ್ಲಿ ಬಿ.ಇಡಿ ಕಾಲೇಜು ಪ್ರಾರಂಭಿಸಲು ಸಹಕರಿಸಿದ ಸರ್ವರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಸ್ಥಳೀಯ ಗಣ್ಯರಾದ ಶ್ರೀ ಕೊಟ್ರಬಸಯ್ಯರವರು ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು ಉತ್ತಮವಾಗಿ ಬೆಳೆಯಲಿ ಎಂದು ಹರಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ವಿಜಯಾ.ಎಸ್. ಹಿರೇಮಠ ಅವರು ಸಂಸ್ಥೆಯು ಬೆಳೆದು ಬಂದ ಬಗೆಯನ್ನು ತಿಳಿಸಿದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ಖಾಜಾವಲಿ, ಶಿವಕುಮಾರ, ಹನಮಂತಪ್ಪ ಅರಕೇರಿ, ಮಾಜಿ ಗ್ರಾ.ಪಂ ಅಧ್ಯಕ್ಷರಾದ ಪಾಲಾಕ್ಷಪ್ಪ, ಉಪಾಧ್ಯಕ್ಷರಾದ ಎಂ.ಡಿ.ಗೌಸ್, ಸಿದ್ದಣ್ಣ ಬಂಡಿ  ಸದಸ್ಯರಾದ ಹನುಮಂತಪ್ಪ, ಪ್ರಾಚಾರ್ಯರಾದ ಸಿದ್ದಲಿಂಗಸ್ವಾಮಿ ಚಕ್ಕಡಿಯವರು ಮೊದಲಾದವರು ಉಪಸ್ಥಿತರಿದ್ದರು. ಕು. ಸುಷ್ಮಾ ಮತ್ತು ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Please follow and like us:
error