ವಸೂಲಿಗೆ ಬಂದಿದ್ದ ಪತ್ರಕರ್ತರ ಬಂಧನ

ಕೊಪ್ಪಳ : ವಿಜಾಪುರ ಮೂಲದ ಮೂವರು ಪತ್ರಕರ್ತರು ಕೊಪ್ಪಳದ ಜಲಾನಯನ ಇಲಾಖೆ ಕಚೇರಿಯ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಸಂದರ್ಭದಲ್ಲಿ ಅವರನ್ನು ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಕುಷ್ಟಗಿಯ ವರದಿಗಾರರೆಂದು ಹೇಳಿಕೊಂಡು ಹಣ ವಸೂಲಿಗೆ ನಿಂತಿದ್ದ ಇವರನ್ನು ಪೊಲೀಸರು ಮತ್ತು ಸ್ಥಳೀಯ ಪತ್ರಕರ್ತರು ಛೀಮಾರಿ ಹಾಕಿದ್ದಾರೆ. ಬೆಂಗಳೂರಿಗೆ ಹೋಗುತ್ತಿದ್ದರಿಂದ ಹಣದ ಸಹಾಯ ಕೇಳಲು ನಮ್ಮ ಪರಿಚಯದ ಅಧಿಕಾರಿಯೊಬ್ಬರು ಜಲಾನಯನ ಇಲಾಖೆಯಲ್ಲಿ ಇದ್ದರಿಂದ ಬಂದಿರುವುದಾಗಿ ಸಮಜಾಯಿಷಿ ನೀಡಿದ್ದಾರೆ.

Leave a Reply