ಅಕ್ರಮ ಮರಳು ಸಾಗಾಣಿಕೆ ತಡೆಗೆ ಕಠಿಣ ಕ್ರಮ

 : ಸಹಕರಿಸಲು ಸಾರ್ವಜನಿಕರಿಗೆ ಮನವಿ
ಕೊಪ್ಪಳ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗೆ ಜಿಲ್ಲಾಡಳಿತ ವ್ಯಾಪಕವಾಗಿ ಕಠಿಣ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮನವಿ ಮಾಡಿದ್ದಾರೆ.
  ಜಿಲ್ಲೆಯಲ್ಲಿ ಮರಳು ಸಾಗಾಣಿಕೆ ತಡೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ವ್ಯಾಪಕ ಕ್ರಮ ಕೈಗೊಂಡಿದೆ.  ಸಾರ್ವಜನಿಕರು ಕಟ್ಟಡ ನಿರ್ಮಾಣ ಅಥವಾ ಇತರೆ ಕೆಲಸಗಳಿಗಾಗಿ ಮರಳು ಉಪಯೋಗಿಸಿಕೊಳ್ಳುವ ಸಂದರ್ಭದಲ್ಲಿ ಮರಳು ಸಾಗಾಣಿಕೆಗೆ ಪರವಾನಗಿ ಹೊಂದಿರುವವರಿಂದ ಮಾತ್ರ ಮರಳು ಪಡೆಯಬೇಕು.  ಸಾಗಾಣಿಕೆದಾರರೂ ಸಹ ಕಡ್ಡಾಯವಾಗಿ ಮರಳು ಸಾಗಾಣಿಕೆ ಪರವಾನಿಗೆ ಹೊಂದಿರಬೇಕು.  ತಾವು ಪಡೆದಿರುವ ಪ್ರಮಾಣದಷ್ಟು ಮರಳಿಗೆ ತಮ್ಮಲ್ಲಿ ಪರವಾನಿಗೆ ಹೊಂದಿರಬೇಕು.  ತಪಾಸಣೆಗೆ ಬರುವ ಅಧಿಕಾರಿಗಳು ಭೇಟಿ ನೀಡಿದಾಗ, ಈ ಪರವಾನಿಗೆ ಪತ್ರವನ್ನು ಹಾಜರುಪಡಿಸಬೇಕು.  ಪರವಾನಿಗೆ ಹಾಜರುಪಡಿಸಲು ವಿಫಲರಾದಲ್ಲಿ, ಅಂತಹವರ ವಿರುದ್ಧ ಕಳವು ಅಥವಾ ಕಳುವಿನ ಮರಳು ಹೊಂದಿರುವರೆಂದು ಭಾವಿಸಿ, ಪ್ರಕರಣ ದಾಖಲಿಸಲಾಗುವುದಲ್ಲದೆ, ದಂಡವನ್ನು ಸಹ ವಿಧಿಸಲಾಗುವುದು.  ಮರಳನ್ನು ಕಳ್ಳತನ ಮಾಡಿ, ಮಾರಾಟ ಮಾಡುವುದು ಗಮನಕ್ಕೆ ಬಂದಲ್ಲಿ, ಅಂತಹವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.  ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಸಾರ್ವಜನಿಕರಿಗೆ ಸಕಾಲದಲ್ಲಿ ಮರಳು ಬೇಡಿಕೆ ಪೂರೈಸಲು ಜಿಲ್ಲಾಡಳಿತ ಕೈಗೊಂಡ ಕ್ರಮಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು  ಮನವಿ ಮಾಡಿಕೊಂಡಿದ್ದಾರೆ.
Please follow and like us:
error