ಸಯ್ಯದ್ ರವರಿಂದ ಉಚಿತ ನೋಟ್‌ಬುಕ್ ವಿತರಣೆ

ಕೊಪ್ಪಳ ೩೦ :  ತಾಲೂಕಿನ ಹೈದರ್ ಗ್ರಾಮದಲ್ಲಿ ಸ.ಹಿ.ಪ್ರಾ. ಶಾಲೆಯಲ್ಲಿ ಸೋಮವಾರದಂದು ಸಯ್ಯದ್ ಫೌಂಡೇಶನ್‌ನ ಅಧ್ಯಕ್ಷ ಹಾಗೂ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಮ್. ಸಯ್ಯದ್ ರವರು ಬಡಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಣೆ ಮಾಡಿದರು.
      ಸಯ್ಯದ್ ಫೌಂಡೇಶನ್‌ನ ಅಧ್ಯಕ್ಷ ಹಾಗೂ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಮ್. ಸಯ್ಯದ್‌ರವರು ಮಾತನಾಡಿ ಬಡವಿದ್ಯಾರ್ಥಿಗಳ ಶಿಕ್ಷಣದ ಅನುಕೂಲಕ್ಕಾಗಿ ಪ್ರತಿ ವರ್ಷ ನಮ್ಮ ಫೌಂಡೇಶನ್ ವತಿಯಿಂದ ನೋಟ್‌ಬುಕ್ ವಿತರಣೆ ಮಾಡಿ ಅಳಿಲು ಸೇವೆ ಮಾಡುತ್ತಿರುವುದಾಗಿ ಹೇಳಿದರು.
      ಈ ಸಂರ್ದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಅಮರೇಶ ಇಟಗಿ, ಗ್ರಾ.ಪಂ ಸದಸ್ಯರಾದ ಲಾಲಪ್ಪ ಪೂಜಾರ, ಪರಸಪ್ಪ ರಾಥೋಡ್, ಪಾಂಡಪ್ಪ ಬಡಿಗೇರ, ಗೌಸ್‌ಸಾಬ, ಸಿದ್ಲಿಂಗಯ್ಯ, ಮೆಹಬೂಬ ಹುಸೇನ ಮುಲ್ಲಾ ಹಾಗೂ ಸಯ್ಯದ್ ಫೌಂಡೇಶನ್‌ನ ಸದಸ್ಯರು, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply