ಶ್ರೀನಿವಾಸ ಗುಪ್ತಾ, ರಾಘವೇಂದ್ರ ಪಾನಘಂಟಿಯವರಿಗೆ ಸನ್ಮಾನ

ಕೊಪ್ಪಳ : ಪ್ರಜಾಪಿತ ಬೃಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾರವಾರ ಜಿಲ್ಲೆಯ ಯಲ್ಲಾಪುರದಲ್ಲಿ ಇತ್ತೀಚೆಗೆ ನಡೆದ ಪುನಶ್ಚೆತನ ತಪಸ್ಸಿನ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಹಾಗೂ ಆಂದ್ರ ಮತ್ತು ಕೇರಳ ರಾಜ್ಯದಿಂದ ಆಗಮಿಸಿರುವ ಅನೇಕ ಬೃಹ್ಮಕುಮಾರಿ ಶಿಕ್ಷಕ ಸಹೋದರಿಯರ ಸಮ್ಮುಖದಲ್ಲಿ   ಶ್ರೀನಿವಾಸ ಗುಪ್ತಾ ಅವರಿಗೆ ತಮ್ಮ ಕೂದಲು ಉದ್ಯಮದಲ್ಲಿ ೨ನೇಯ ಬಾರಿ ರಾಷ್ಟ್ರಪತಿ ಪ್ರಶಸ್ತಿ ಹೊಂದಿರುವ ಕಾರಣ ಉಲ್ಲಾಪುರದಲ್ಲಿ ಬೃಹ್ಮಕುಮಾರೀಸ್ ವಲಯ ಕೇಂದ್ರದ ಹುಬ್ಬಳ್ಳಿ ನಿರ್ದೇಶಕರಾದ ಬಿ.ಕೆ. ಬಸವರಾಜ ರಾಜಋಷಿಗಳಿಂದ ಸನ್ಮಾನಿಸಲಾಯಿತು. ಹಾಗೂ ಹಿರಿಯ ವಕೀಲರಾದ   ರಾಘವೇಂದ್ರ ಪಾನಘಂಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಬೃಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕೊಪ್ಪಳ ವತಿಯಿಂದ ನಡೆಸಿಕೊಡಲಾಯಿತು.

Leave a Reply