ರೈನಬೋ -೨೦೧೩ ಮಿಡೀಯಾ ಫೆಸ್ಟ್‌ನಲ್ಲಿ ಸಾಧನೆ

ಧಾರವಾಡ ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಹಾಗೂ ಮಾಧ್ಯಮ ಅಕಾಡೆಮಿ ಸಹಯೋಗದಲ್ಲಿ ಜನವೆರಿ ೨೮ ಹಾಗೂ ೨೯ ರಂದು ಎರಡು ದಿನಗಳ ಕಾಲ ನಡೆದ ಮಾಧ್ಯಮ ವಿಚಾರ ಸಂಕಿರಣ ಮತ್ತು ರೈನಬೋ -೨೦೧೩ ಮಿಡೀಯಾ ಫೆಸ್ಟ್‌ನಲ್ಲಿ ಮಾಧ್ಯಮದ ವಿವಿಧ ಸ್ಪರ್ಧೆಗಳಾದ ರೇಡಿಯೋ ಜಾಕಿ, ಪಿ೨ಸಿ, ಫೋಟೋಗ್ರಾಫಿ, ಮ್ಯಾಡ್ ಆಡ್, ಸ್ಪರ್ಧೆಗಳಲ್ಲಿ ಸರಕಾರಿ ಪ್ರಥಮ ದರ್ಜೆಯ ಕಾಲೇಜು ಅಳವಂಡಿ (ಕೊಪ್ಪಳ) ಹಾಗೂ ಎಸ್‌ಕೆಎನ್‌ಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಗಂಗಾವತಿ ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಚೇತನ್ ಸೊಲಗಿ, ಸಂಪತ್ ಕುಮಾರ, ಸೌಮ್ಯ ಗುಬ್ಬಿ,ನಾಗವೇಣಿ ಸೂಗುರ, ಪ್ರವೀಣ.ಕೆ,ಶೃತಿ ಅಳವಂಡಿ, ಶರಣಬಸಪ್ಪ, ಸುನೀಲ್ ಆನಂದ್ ಅಜಯ್, ಗೀತಾ, ತನುಜಾ, ಉಮಾ, ಇನ್ನೀತರ ವಿದ್ಯಾರ್ಥಿಗಳು ಐದು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದು ಜಿಲ್ಲೆಯ ಪತ್ರಿಕೋದ್ಯಮದ ವಿಭಾಗಕ್ಕೆ ಕೀರ್ತಿ ತಂದಿದ್ದಾರೆ. ಇವರ ಈ ಸಾಧನೆಗೆ ಪತ್ರಿಕೋದ್ಯಮದ ಉಪನ್ಯಾಸಕರಾದ ವಾಸುದೇವ ಬುರ್ಲಿ ಹಾಗೂ ರಾಜು ಬಿ.ಆರ್ ಅಭಿನಂದನೆ ಸಲ್ಲಿಸಿದ್ದು ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿ ವರ್ಗ ಕಲೇಜು ಅಭಿರುದ್ಧಿ ಸಮೀತಿ ಸದಸ್ಯರು ಶುಭಕೋರಿದ್ದಾರೆ.
Please follow and like us:
error