ನೀತಿ ಸಂಹಿತೆ ಪಾಲನೆ ನಿಗಾ ವಹಿಸಲು ವಿಡಿಯೋ ಸರ್ವೈಲೆನ್ಸ್ ತಂಡ

  ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ವಿವಿಧ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲು ವಿಡಿಯೋ ಸರ್ವೈಲೆನ್ಸ್ ತಂಡ ರಚಿಸಲಾಗಿದೆ.
  ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ವಿಡಿಯೋ ಸರ್ವೆಲೆನ್ಸ್ ತಂಡ ರಚಿಸಲಾಗಿದ್ದು, ಪ್ರತಿ ತಂಡದಲ್ಲಿ ಮೂವರು ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ.  ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು ೧೫ ಅಧಿಕಾರಿಗಳ ತಂಡ ನಿಯೋಜಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು  

ಚುನಾವಣಾ ವೆಚ್ಚ ಮೇಲೆ ನಿಗಾ : ಲೆಕ್ಕ ತಪಾಸಕರ ನೇಮಕ

 ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಮತ್ತು ಚುನಾವಣಾ ಆಯೋಗದ ನಿಯಮಾನುಸಾರ ಚುನಾವಣೆ ಜರುಗಿಸಲು ಅನುಕೂಲವಾಗುವಂತೆ ಚುನಾವಣಾ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಖರ್ಚು ವೆಚ್ಚಗಳ ಪರಿಶೀಲನೆಗಾಗಿ ಪ್ರಥಮ ದರ್ಜೆ ಸಹಾಯಕರು, ಸಹಾಯಕ ಅಧಿಕಾರಿಗಳ ಶ್ರೇಣಿಯ ಸಿಬ್ಬಂದಿಯನ್ನೊಳಗೊಂಡ ಲೆಕ್ಕ ತಪಾಸಣಾ ತಂಡ ರಚಿಸಲಾಗಿದೆ.
  ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಇಲಾಖೆಯ ಶರಣಗೌಡ ಪಾಟೀಲ, ಎಸ್.ಜಿ. ಬಡಿಗೇರ, ಹನುಮಪ್ಪ ಕಟ್ಟಿಮನಿ, ಪಿಡಬ್ಲ್ಯೂಡಿ ಇಲಾಖೆಯ ಅಯ್ಯಪ್ಪ ಕಾಮನೂರ, ತಾ.ಪಂ. ನ ಶರಣಯ್ಯ ಹಿರೇಮಠ, ಪಂ.ರಾ.ಇಂ. ವಿಭಾಗದ ದೊಡ್ಡಪ್ಪ ಇವರು ಲೆಕ್ಕ ತಪಾಸಣಾ ತಂಡದಲ್ಲಿದ್ದಾರೆ.  ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಂ.ರಾ.ಇಂ. ವಿಭಾಗದ ಹನುಮಂತಪ್ಪ ಗಟ್ಟಿ, ಸರ್ಕಾರಿ ಪ.ಪೂ. ಕಾಲೇಜಿನ ತುರುಬ ಮಿರ್ಜಾ ಪಟೇಲ್, ಪ್ರಥಮ ದರ್ಜೆ ಕಾಲೇಜಿನ ಮೌನೇಶ್ ಆಚಾರ್, ಪಂ.ರಾ.ಇಂ. ವಿಭಾಗದ ರಾಮಣ್ಣ, ಸಿಟಿಓ ಕಚೇರಿಯ ಸುರೇಶ್ ಪಡಗಟ್ಟಿ, ವಡ್ಡರಹಟ್ಟಿಯ ಬೀಜ ಪರೀಕ್ಷಾ ಕಏಂದ್ರದ ಎಂ.ಎಸ್. ಅಂಗಡಿ ಅವರನ್ನು ಲೆಕ್ಕ ತಪಾಸಕರೆಂದು ನೇಮಿಸಲಾಗಿದೆ.  ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಪಿಡಬ್ಲ್ಯೂಡಿ ಇಲಾಖೆಯ ಡಿ.ಪಿ. ಕುಲಕರ್ಣಿ, ಸಿಟಿಓ ಕಚೇರಿಯ ಗಡ್ಡೆಪ್ಪ, ಪ್ರತಾಪ ರುದ್ರಯ್ಯ, ಸಿಡಿಪಿಓ ಕಚೇರಿಯ ಕೆ.ಎಂ. ವಿನೋದಮೂರ್ತಿ, ವಸುದೇಂದ್ರ, ಸೂರ್ಯಕಾಂತ ಜಮಾದಾರ್ ಅವರು ಲೆಕ್ಕ ತಪಾಸಣಾ ತಂಡದಲ್ಲಿದ್ದಾರೆ.  ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ತಾ.ಪಂ. ಕಚೇರಿಯ ಕೆ.ಐ. ತೆಮ್ಮಿನಾಳ ಮತ್ತು ಮೈಲಾರಪ್ಪ.  ಖಜಾನೆ ಇಲಾಖೆಯ ಮೋಹನ್ ಆಶ್ರಿತ್ ಮತ್ತು ಸೋಮಶೇಖರ ಅವರನ್ನು ಲೆಕ್ಕ ತಪಾಸಕರೆಂದು ನೇಮಿಸಿದೆ.  ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ಜಿ.ಪಂ. ಕಚೇರಿಯ ಪ್ರಸಾದ್, ಭೋಗೇಶ್ ಆಚಾರ್, ಮುರ್ತುಜಾ, ಬಸವನಗೌಡ ಮತ್ತು ತಾ.ಪಂ. ಕಚೇರಿಯ ಸುಶೀಲೇಂದ್ರ ದೇಶಪಾಂಡೆ ಅವರು ಲೆಕ್ಕ ತಪಾಸಕರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿ  ತಿಳಿಸಿದೆ. 
Please follow and like us:
error