ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಹಿಟ್ನಾಳ ಕರೆ

ಕೊಪ್ಪಳ ೩೦: ಕ್ಷೇತ್ರದ ಬಂಡಿಹರ್ಲಾಪುರ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಡಿಯಲ್ಲಿ ಕೊಠಡಿಗಳ ಕಾಮಗಾರಿ ನೇರೆವೆರಿಸಿ ಮಾತನಾಡಿದ  ಅವರು ಆಧುನಿಕ ಯುಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದಿನೆ ದಿನೆ ಪೈಪೊಟಿ ಏರ್ಪಡುತ್ತಿದ್ದು ಮಾಹಿತಿ ತಂತ್ರಜ್ಞಾನದಿಂದ ಹೊಸ ಅವಿಶ್ಕಾರಗಳು ಜಗತ್ತಿಗೆ ಪರಿಚಯಗೊಳ್ಳುತ್ತಿದ್ದು ಶಿಕ್ಷರು ಮಕ್ಕಳಿಗೆ ಆಧುನಿಕ ಗುಣಮಟ್ಟದ ಶಿಕ್ಷಣವನ್ನು ಕೊಡಬೇಕು ಎಲ್ಲಾ ಮಕ್ಕಳಿಗು ಕಂಪ್ಯೂಟರ್ ಶಿಕ್ಷಣ ಅವಶ್ಯಕವಾಗಿದ್ದು ತಾಂತ್ರಿಕ ಹಾಗೂ ವೈಧ್ಯಕೀಯ ಲೋಕಕ್ಕೆ ಕಂಪ್ಯೂಟರ್  ಶಿಕ್ಷಣ ಮಾಹಿತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನೇಕ ಸೌಲಭ್ಯಗಳನ್ನ ನೀಡುತ್ತಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯು ಇದರ ಲಾಭ ಪಡೆಯಬೇಕೆಂದು ಹೇಳಿದರು. ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಅಭ್ಯಾಸದಕಡೆ ಹೆಚ್ಚಿನ ಮುತುವರ್ಜಿ ವಹಿಸಿ ಅವರ ಭವಿಷ್ಯಯವನ್ನು ಉಜ್ವಲ ಗೊಳಿಸಬೇಕೆಂಧು ಕರೆ ನೀಡಿದರು.
ಶಾಲಾ ಕೊಠಡಿ ಕಾಮಗಾರಿಗೆ ಶಾಸಕರಿಂದ ಚಾಲನೆ
ಕೊಪ್ಪಳ ೩೦: ಕ್ಷೇತ್ರದ ಬಂಡಿಹರ್ಲಾಪುರ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಡಿಯಲ್ಲಿ ೫೨ ಲಕ್ಷದ ೯ ಕೊಠಡಿಗಳ ಕಾಮಗಾರಿಗೆ ಕೊಪ್ಪಳದ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಭೂಮಿ ಪೂಜೆ ನೇರೆವೆರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಆಧ್ಯಕ್ಷ ಟಿ.ಜನಾರ್ಧನ, ದೇವಣ್ಣ ಮೆಕ್ಕಾಳಿ, ರತ್ನಮ್ಮ ಭ್ರಮ್ಮಯ್ಯ, ಚಂದ್ರ ಶೇಖರ, ವಸಂತರಾವ್, ರೂಪಲ ನಾಯಕ, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.

Leave a Reply