ಬಿಜೆಪಿ ಜಿಲ್ಲಾ ರೈತ ಮೋರ್ಚಾ ಧರಣಿ ಸತ್ಯಾಗ್ರಹ

 ಕೊಪ್ಪಳ ಬಿ ಜೆ ಪಿ ಜಿಲ್ಲಾ ಘಟಕ
ದಿಂದ  ಜಿಲ್ಲಾ ಅಧಿಕಾರಿಗಳ ಕಾರ್ಯಲಯದ ಮುಂದೆ   ಸತ್ಯಾಗ್ರಹವನ್ನು ರೈತರ ದಿವಸದ ದಿನದಂದು ವಿವಿಧ ಬೇಡಿಕೆಗಳನ್ನು ಹೀಡೆರಿಸಲು ಕೇಂದ್ರ ಹಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿ ಧರಣಿಯನ್ನು ಜಿಲ್ಲಾ ರೈತ ಮೋರ್ಚಾ ಅದ್ಯಕ್ಷ ಬಿ.ನಾರಾಯಣಪ್ಪ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದರು. 
ಈ ಸತ್ಯಾಗ್ರಹವನ್ನು ಉದ್ದೇಶಿಸಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಹೆಚ್ ಗಿರಿಗೌಡ್ರ ರವರು ಮಾತನಾಡಿ, ಸ್ವಾಮಿನಾಥನ್ ಆಯೋಗದ ವರದಿ ಕೂಡಲೇ ಯಥಾವತ್ತಾಗಿ ಜಾರಿಗೊಳಿಸಬೇಕು. ಹಾಗೂ ಕೇಂದ್ರ ಸರ್ಕಾರದ ಅಡಿಕೆ ಬೆಳೆಯನ್ನು ನಿಷೇದಿಸುವ ಬಗ್ಗೆ ನ್ಯಾಯವಾದಿಗಳು ಸುಪ್ರೀಂ ಕೋರ್ಟನಲ್ಲಿ ವಾಧಿಸುತ್ತಿದ್ದಾರೆ. ಮತ್ತು ಅಡಿಕೆ ಹಾನಿಕಾರ ಎಂಬ ಬಗ್ಗೆ ಮಾಹಿತಿ ಸಂಗ್ರಹ ಮಾಡಿ ಕೊಟ್ಟಿರುವುದು. ಅಡಿಕೆ ಬೆಳೆಗಾರರ

ನ್ನು ಆತಂಕಕ್ಕೆ ದೂಡಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಆರೋಗ್ಯ ಸಚಿವರು ಬೆಳೆಗಾರರಿಗೆ ಆತಂಕಕ್ಕೆ ಅವಕಾಶ ನೀಡುವುದಿಲ್ಲವೆಂಬ ಬಗ್ಗೆ ಮಾಧ್ಯಮಗಳಲ್ಲಿ ಹೇಳಿದ್ದಾರೆ. ವಿನಂ ಸುಪ್ರೀಂ ಕೊರ್ಟಿಗೆ ಯಾವುದೇ ಅಭಿಪ್ರಾಯ ತಿಳಿಸಿಲ್ಲ ಸುಮಾರು ೧ ಕೋಟಿ ರೈತರು ಅವಲಂಬಿತ ಸಮುದಾಯದ ಕುಟುಂಬದ ಅಳಿವು ಉಳಿವಿನ ಸಂಗತಿಯ ಬಗ್ಗೆ ಸರ್ಕಾರವು ನಿರ್ಲಕ್ಷವನ್ನು ತೋರಿಸುತ್ತಿದೆ. ಎಂದು ಖಂಡಿಸಿ ಹಾಗೂ ಬಿಜಾಪೂರ ಜಿಲ್ಲೆಯ ಅತ್ಯಂತ ಹೇರಳವಾಗಿ ತೋಗರಿ ಬೆಳೆಯನ್ನು ಬೆಳೆಯುತ್ತಿದ್ದ  ಬೆಲೆಯ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ತೋಗರಿ ಮಂಡಳಿಯಿಂದ ರೈತರ ತೋಗರಿಯನ್ನು ಖರೀದಿಮಾಡಲು ಖರೀದಿ ಕೇಂದ್ರಗಳನ್ನು ಬಿಜಾಪೂರ ಜಿಲ್ಲೆಯ ಸಿಂದಗಿ, ಇಂಡಿ, ಬಾಗೇವಾಡಿ, ಮುದ್ದೆಬಿಹಾಳ, ಬಿಜಾಪೂರದಲ್ಲಿ ತೆರೆಯಲಾಗಿದ್ದು ಅತ್ಯಂತ ಪ್ರಮಾಣದಲ್ಲಿ ಖರೀದಿ ಪ್ರಾರಂಭಿಸಿದ್ದರಿಂದ  ರೈತರಿಗೆ ತುಂಬಾ ತೊಂದರೆಯಾಗುತ್ತದೆ. ದಿನಾಲು ಖರೀದಿ ಕೇಂದ್ರಕ್ಕೆ ದಿನಕ್ಕೆ ೧೦ ಜನ  ರೈತರಿಂದ ಖರೀದಿಸಿದರೆ ಬಹಳ ದಿನಗಳ ವರೆಗೂ ಖರೀದಿ ಮುಂದುವರಿಸಬೇಕಾಗುತ್ತದೆ.    ಸುಮಾರು ೧೫೦೦ ರಿಂದ ೧೬೬೦ ರೈತರು ಪ್ರತಿಯೊಂದು ಕೇಂದ್ರಗಳಲ್ಲಿ ರೈತರು ಹೆಸರನ್ನು  ನೋಂದಾಯಿಸಿದ್ದಾರೆ

ಆದ್ದರಿಂದ ಆದಷ್ಟು ಬೇಗನೆ ತೋಗರಿ ಮಂಡಳಿಯ ಎಮ್ ಡಿ ಯವರಿಗೆ ಹೆಚ್ಚಿನ ಪ್ರಮಾಣದಲ್ಲಿ ತೂಕದ ತಕ್ಕಡಿಯನ್ನು ಹೆಚ್ಚಿಸಿ ಪೇಬ್ರುವರಿ ಕೊನೆಯ ವಾರದೊಳಗೆ ಖರೀದಿ ಮುಗಿಸಿ ರೈತರಿಗೆ ಅನೂಕುಲ ಮಾಡಿಕೊಡಬೇಕಾಗಿ  ಮುಖ್ಯಮಂತ್ರಿಗಳು ಸೂಚಿಸಬೇಕು ಎಂದು ಆಗ್ರಹಿಸದರು.

ರಾಜ್ಯ ರೈತ ಮುಖಂಡರಾದ ತಿಪ್ಪೆರುದ್ರೆಸ್ವಾಮಿ ಮಾತನಾಡಿ, ಕೇಂದ್ರ ರಸಾಯನಿಕ ಗೊಬ್ಬರ ಅವೈಜ್ಞಾನಿಕ ಸಬ್ಸಿಡಿ ನೀತಿಯ ಬಗ್ಗೆ ಆರ್ಥಿಕ ನೀತಿಯಿಂದ ರೂಪಾಯಿ ಮೌಲ್ಯ ಡಾಲರ್ ಎದುರುಗಡೆ ಕುಸಿತ ಉಂಟಾಗಿ ಇದರ ನೇರ ಪ್ರಮಾಣ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಾಸಾಯನಿಕ ಗೊಬ್ಬರದ ಕಚ್ಚಾ ಪದಾರ್ಥಗಳ ಮೇಲೆ ಪ್ರಭಾವ ಬಿರುತ್ತದೆ. ಮತ್ತು ಪೋಷಕಾಂಶ ಆಧಾರಿತ ರಾಸಾಯನಿಕ ಗೊಬ್ಬರಗಳ ಬೇಲೆ ನಿರಂತರವಾಗಿ ಏರಿಕೆ ಕಂಡಿದ್ದು ನ್ಯೂವ್ ಟ್ರೆಂಡ್ ಬೇಸಿಡ್ ಸಬ್ಸಿಡಿ ನೀತಿಯಿಂದ ಗೊಬ್ಬರಗಳ ಉತ್ಪಾದನೆಗೆ ಕೇಂದ್ರ ಸರ್ಕಾರವು ಸಗಟು ಮಾರುಕಟ್ಟೆಯಲ್ಲಿ ತಯಾರಕರು ತಮಗೆ ತೋಚಿದ ಬೆಲೆಯಲ್ಲಿ ಮಾರಟ ಮಾಡಲು ಅನುವು ಮಾಡಿಕೊಟ್ಟಿದೆ. ಇದರಿಂದ ಉತ್ಪಾದಕರು ಹಾಗೂ ಮಾರಾಟಗಾರರ ಮೇಲೆ ಸರ್ಕಾರಕ್ಕೆ ಬೆಲೆ ನಿಯಂತ್ರಿಸಲು ಸಾಧ್ಯವಾಗದೆ ೨೦೦೪ ರಿಂದ ಇಲ್ಲಿಯವರೆಗೆ ೨೦೦ ರಿಂದ ೩೦೦ ಪಟ್ಟು ಹೆಚ್ಚಾಗಿದೆ. ಇದರಿಂದ ಕೃಷಿ ಉತ್ಪಾದನೆ ಸಹ ಗಗನ ಮುಖಿಯಾಗಿದೆ. ಈ ಕೂಡಲೆ ಕೇಂದ್ರ ಸರ್ಕಾರ ಈ ರೈತ ವಿರೋಧ ನೀತಿ ಮತ್ತು ಕೈಗಾರಿಕೋದ್ಯಮಿಗಳ ಪರವಾಗಿರುವರನ್ನು ಕೈ ಬಿಡಬೇಕು ಎನ್.ಡಿ.ಎ ಸರ್ಕಾರದಲ್ಲಿನ ಅವಧಿಯಲ್ಲಿನ ಅಳವಡಿಸಬೇಕು. ಹಾಗೂ ರಾಜ್ಯ ಸರ್ಕಾರವು ೮೫ ತಾಲೂಕಗಳನ್ನು ಬರ ಪಿಡಿತವೆಂದು ಘೋಷಿಸಿದೆ ಈ ಘೋಷಣೆಗೆ ಸರಿಯಾಗಿ ಮಾನದಂಡ ಇರುವುದಿಲ್ಲ ಬರಪಿಡಿತ ತಾಲೂಕ ಎಂದು ಗೋಷಿಸಲ್ಪಟ್ಟ ತಾಲೂಕಿನಲ್ಲಿ ಪಂಚಾಯತಿ ಮತ್ತು ಹೋಬಳಿಗಳನ್ನು ಆಯ್ಕೆ ಮಾಡಿಕೊಂಡ ಕೇವಲ ರಾಜಕೀಯ ಹೀತದೃಷ್ಠಿಯಿಂದ ಘೋಷಿಸಲ್ಪಟ್ಟಿದೆ ಇದೂವರೆಗೆ ಇದರ ಅಡಿಯಲ್ಲಿ ರೈತರಿಗೆ ಸರಿಯಾದ ಪರಿಹಾರ ಇಲ್ಲ. ಈ ತಕ್ಷಣದಲ್ಲಿ ರಾಜ್ಯ ಸರ್ಕಾರವು ಮಹಾರಾಷ್ಟ್ರ ರಾಜ್ಯದ ವಿಧರ್ಭ ಮಾದರಿಯಲ್ಲಿ ಪರಿಹಾರ ಕೈಗೊಳ್ಳಬೇಕೆಂದು ಆಗ್ರಹಿಸದರು. 
ಬಿ ಜೆ ಪಿ  ಜಿಲ್ಲಾ ಮುಖಂಡರಾದ ಹೆಚ್ ಆರ್ ಚನ್ನಕೇಶ್ವರ ಮಾತನಾಡಿ ರಾಷ್ಟ್ರದಲ್ಲಿ ಕರ್ನಾಟಕವು ೨ನೇ ಅತೀ ಹೆಚ್ಚು ಕಬ್ಬು ಬೆಳೆಯುವ ರಾಜ್ಯವಾಗಿದೆ. ಕಾರ್ಖಾನೆಗಳ ಮಾಲೀಕರ ದಬ್ಬಾಳಿಕೆ ಕಬ್ಬೂ ಬೆಳೆಗಾರರ ಮೇಲೆ ನಿರಂತರವಾಗಿ ಹೆಚ್ಚುತ್ತಿದೆ. ಉತ್ಪಾದನೆಯ ವೆಚ್ಚವು ನಿರಂತರವಾಗಿ ಮೇಲೆರುತ್ತಾ ಧಾರಣೆ ಕುಸಿಯುತ್ತಿದ್ದೆ ಸಕ್ಕರೆ ಕಾರ್ಖಾನೆಯ ಮಾಲೀಕರು ರೈತರಿಗೆ ಸರಿಯಾದ ಸಮಯದಲ್ಲಿ ಕಬ್ಬು ಕಟಾವ್ ಮಾಡಲು ಅನುಮತಿ ನೀಡುತ್ತಿಲ್ಲ ಕಾರ್ಖಾನೆಗೆ ಪೂರೈಸಿದ ಕಬ್ಬಿಗೆ ರೈತರಿಗೆ ಸರಿಯಾದ ಸಮಯಕ್ಕೆ ಹಣ ಪಾವತಿ ಮಾಡುತ್ತಿಲ್ಲ. ಸಹ ಉತ್ಪಾದನೆಗಳಾದ ಎಥನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡಲು ವಿಫಲವಾಗಿದೆ. ಕರ್ನಾಟಕದಲ್ಲಿ ಬಿ ಜೆ ಪಿ ನೇತೃತ್ವದ ರಾಜ್ಯ ಸರ್ಕಾರ ಇದ್ದಾಗ ರೈತರ ಹಿತದೃಷ್ಠಿಯಿಂದ ಕೇಂದ್ರದ ಮೇಲೆ ಒತ್ತಡ ತಂದು ಸರ್ಕಾರಿ ಸ್ವಾಮ್ಯದ ಬಸ್ಸುಗಳ ಇಂಧನದಲ್ಲಿ ೫% ಎಥನಾಲ್ ಬಳಕೆ ಮಾಡಲು ಅನುಮತಿ ಪಡೆದಿತ್ತು ಕೇಂದ್ರ ಮತ್ತು  ರಾಜ್ಯ ಸರ್ಕಾರಗಳು ಈ ಕೂಡಲೆ ಕಬ್ಬು ಬೆಳೆಗಾರರ ಮೂಲ ಸಮಸ್ಯೆಗೆ ಸ್ಪಂದಿಸಿ ತಕ್ಷಣದಲ್ಲಿ ಪ್ರತಿ ಟನ್ ಕಬ್ಬಿಗೆ ೩೦೦೦ ರೂ ಗಳು ಸಿಗುವಂತೆ ನಿರ್ಣಯಿಸಬೇಕು. ಹಾಗೂ ರಾಜ್ಯದ ಹತ್ತಾರು ಜಿಲ್ಲೆಗಳಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಹರಡಿದ್ದು ಇದುವರೆಗೆ ಸರಿ ಸುಮಾರು ೧೫೦೦ ಕ್ಕೂ ಹೆಚ್ಚು ಜಾನುವಾರಗಳು ಸಾವನ್ನಪ್ಪಿವೆ ಸಾವಿರಾರು ಜಾನುವಾರುಗಳು  ಖಾಯಲೆಗೆ ತುತ್ತಾಗಿವೆ. ಆಗಾಗಿ ಬಿ ಜೆ ಪಿ ರೈತ ಮೋರ್ಚಾದ ಪ್ರತಿಭಟನೆಗಳಿಂದ ರಾಜ್ಯ ಸರ್ಕಾರಗಳು ಸಾವನ್ನಪ್ಪಿದ ಪ್ರತಿ ಹಸುವಿಗೆ ೨೫೦೦೦ ರೂ ಗಳನ್ನು ನೀಡಲು ನಿಶ್ಚಿಸಿದೆ . ಕಾಲು ಬಾಯಿ ರೋಗ ನಿಯಂತ್ರಣ ವಿಲ್ಲದೆ ಈ ಚಳಿಗಾಲದ ಅವಧಿಯಲ್ಲಿ ತೀವ್ರವಾಗಿ ಹರಡುತ್ತಿದ್ದು ಸರ್ಕಾರವು ಈ ಸಮಯದಲ್ಲಿ ಪರಿಹಾರ ಕೊಡುವುದನ್ನು ನಿಲ್ಲಿಸಿರುವುದು. ರೈತ ವಿರೋದ ನೀತಿಗೆ ಸ್ಪಷ್ಟ ಉದಾಹರಣೆಯಾಗಿದೆ. ಆದ್ದರಿಂದ ಈ ಕೂಡಲೆ ಸರ್ಕಾರವು ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಮನವಿಯನ್ನು  ಜಿಲ್ಲಾ ಅಪಾರ ಅಧಿಕಾರಿಗಳಾದ ಸುರೇಶ ಹಿಟ್ನಾಳ ಇವರ ಮುಖಾಂತರ ಗೌರಾನ್ವಿತ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.    
ಈ ಸಂದರ್ಭದಲ್ಲಿ ಬಿ.ಜೆ.ಪಿ ಜಿಲ್ಲಾ ಮುಖಂಡರಾದ ನರಸಿಂಗರವ್ ಕುಲಕರ್ಣಿ, ಸಂಗಮೇಶ ಡಂಬಳ, ಮಹಿಳಾ ರಾಜ್ಯ ಮುಖಂಡರಾದ ಶಾಮಲಾ ಕೋಮಲಾಪೂರ,  ಪೀರಾಹುಸೇನ ಹೊಸಹಳ್ಳಿ, ಮನೋಹರ್ ಹೇರೂರ, ಡಾ.ಜ್ಞಾನಸುಂದರ, ಸೈಯದ್ ಅಲಿ, ರಾಜು ಬಾಕಳೆ, ಹಾಲೇಶ ಕಂದಾರಿ, ಸುರೇಶ ಮೂಧೋಳ, ದೇವರಾಜ, ತೋಟಪ್ಪ ಕಾಮನೂರು, ಪರಮಾನಂದ ಯಾಳಗಿ, ಪ್ರಾಣೇಶ ಮಾದಿನೂರು, ಹೊನ್ನಾಪೂರ ವಿರೇಶಪ್ಪ ಶೇಕರಪ್ಪ ಸಿದ್ದಾಪೂರ, ಸಂಸಿಮಠಸ್ವಾಮಿ , ಉಮೇಶ ಕರಡೇಕರ್, ಮಹೇಶ ಅಂಗಡಿ, ಬಸವರಾಜ ನಿರಲಗಿ, ಮಾರುತಿ, ನೂರಪಾಷಾ, ಡಿ.ಮಲ್ಲಣ್ಣ, ಮಲ್ಲಪ್ಪ ಬೇಲೆರಿ,  ಕಾರ್ಯಕರ್ತರು ಹಾಗೂ ಜಿಲ್ಲಾ ಬಿ ಜೆ ಪಿ ವಕ್ತಾರರಾದ ಚಂದ್ರಶೇಖರಗೌಡ ಪಾಟೀಲ ಹಲಗೇರಿ  ಧರಣಿಯಲ್ಲಿ  ಪಾಲ್ಗೊಂಡಿದ್ದರು.       

Leave a Reply