ಹೊಸಗುಡ್ಡ ದಲಿತ ಮಹಿಳೆ ಹತ್ಯೆ : ನ್ಯಾಯಾಂಗ ತನಿಖೆಗೆ ಒತ್ತಾಯ

ಹತ್ಯೆಗೀಡಾದ ಹನುಮಮ್ಮ

ಕೊಪ್ಪಳ : ಗಂಗಾವತಿ ತಾಲೂಕಿನ ಹೊಸಗುಡ್ಡ ಗ್ರಾಮದ ದಲಿತ ಮಹಿಳೆ ಹನುಮಮ್ಮಳ ಕೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಕೊಪ್ಪಳದ ಪ್ರಗತಿಪರ ಸಂಘಟನೆಗಳವರು ಒತ್ತಾಯಿಸಿದ್ದಾರೆ. ಮೀಡಿಯಾ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹತ್ಯೆಗೀಡಾದ ಹನುಮಮ್ಮಳ  ಸೋದರಿ, ಕುಟುಂಬದವರೊಂದಿಗೆ ಘಟನೆಯ ವಿವರ ನೀಡಿದ ಸಂಘಟನೆಯ ವಿಠ್ಠಪ್ಪ ಗೋರಂಟ್ಲಿಯವರು ಈ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ.   ಅವರನ್ನು ಬಿಡುಗಡೆ ಮಾಡಬೇಕು. ಅಲ್ಲದೇ ಮೃತ ಕುಟುಂಬದವರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು. 
ಹನುಮಮ್ಮ  ಹತ್ಯೆಗೀಡಾದ  ಜಾಗ
ಹನುಮಮ್ಮ  ಹತ್ಯೆಗೀಡಾದ  ಜಾಗ
           ಮೃತಳ ಸೋದರಿ ವಿರುಪಮ್ಮ ಹರಿಜನ ಮಾತನಾಡಿ ನಮ್ಮ ಮನೆಯವರ್ಯಾರು ಈ ಕೊಲೆಯಲ್ಲಿ ಭಾಗಿಯಾಗಿಲ್ಲ. ರಾಮಣ್ಣ ನಾಯಕ ಎನ್ನುವ ವ್ಯಕ್ತಿ ನಮ್ಮಕ್ಕಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ.  ಇತ್ತೀಚೆಗೆ ರಾಮಣ್ಣ ನಾಯಕನ ಮಕ್ಕಳು  ನಮ್ಮ ಮನೆಗೆ ಬಂದು ಗಲಾಟೆ ಮಾಡಿದ್ದರು ಹೀಗಾಗಿ ರಾಮಣ್ಣ ನಾಯಕ್ ನಮ್ಮ ಮನೆಗೆ ಬಂದಿದ್ದಾಗ   ಹನುಮಮ್ಮಳು ಅವನೊಂದಿಗೆ ಜಗಳ ಮಾಡಿದ್ದಳು. ನಂತರ ತನ್ನ ಗಂಡನ ಊರಾದ ಅತ್ತಿಗುಡ್ಡಕ್ಕೆ ಹೋಗಿ ಬರುತ್ತೇನೆ ಎಂದು ಹೋಗಿದ್ದಳು. 24-7-2014ರಂದು ಅವಳು ಅಲ್ಲಿಂದ ವಾಪಸ್ ನಮ್ಮ ಮನೆಗೆ ಹೋಗುವುದಾಗಿ ತಿಳಿಸಿ ಬಂದಿದ್ದಾಳೆ. ಆದರೆ ನಾಲ್ಕು ದಿನವಾದರೂ ಬಾರದ್ದಕ್ಕೆ ಎಲ್ಲಿ ಹೋಗಿದ್ದಾಳೆಂದು ಗೊತ್ತಾಗದೇ ಎಲ್ಲಾ ಕಡೆ ವಿಚಾರಿಸಿದರು ಪತ್ತೆಯಾಗಿರಲಿಲ್ಲ. ಸೋಮವಾರ ದಿ.28ರಂದು ಮದ್ಯಾಹ್ನ ಅವಳ  ಹೆಣ ಅರಣ್ಯಭಾಗದ ಗುಡ್ಡದ ಸಮೀಪ ಬಿದ್ದಿರುವುದು ಗೊತ್ತಾಗಿದೆ. ತಪ್ಪಲಿನಲ್ಲಿ ಹೆಣವನ್ನು ಮುಚ್ಚಿಟ್ಟಿದ್ದು. ತಲೆಗೆ ಬಲವಾದ ಪೆಟ್ಟುಬಿದ್ದಿತ್ತು. ಗುದ್ದು ಬಿದ್ದಿತ್ತು. ಬೆತ್ತಲೆಗೊಳಿಸಿ ಕಾಲನ್ನು ಸೀಳಲಾಗಿತ್ತು.
           ಪ್ರಕರಣ ಮುಚ್ಚಿಹಾಕುವುದಕ್ಕೆ ಕೆಲವರು ಒತ್ತಾಯಿಸಿದರು. ಹೂಳುವು ಸಂಸ್ಕೃತಿ ಇರುವ ನಮ್ಮಲ್ಲಿ ಹಾಗೆ ಮಾಡಲು ಬಿಡದೇ ಹೆಣವನ್ನು ಸುಟ್ಟುಹಾಕಿದರು. ನಂತರ  ಪೋಲೀಸರು ನಮ್ಮವರನ್ನು ಬಂಧಿಸಿ ಕರೆದೊಯ್ದು ಕೇಸ್ ದಾಖಲಿಸಿದ್ದಾರೆ. ಇದರ ಹಿಂದೆ ಕೆಲ ಸ್ಥಳೀಯ ರಾಜಕೀಯ ವ್ಯಕ್ತಿಗಳ ಕೈವಾಡ ಇದೆ.  ಪೋಲೀಸರು ನಮ್ಮವರನ್ನು ಬಂದಿಸಿ ಕರೆದೊಯ್ದು ಹೆದರಿಸಿ ಬೆದರಿಸಿ ಹೊಡೆದು ನಾವೇ ಕೊಲೆ ಮಾಡಿದ್ದೇವೆ ಎಂದು ಹೇಳಿಕೆ ಪಡೆದ್ದಾರೆ.  ನಿರಪರಾಧಿಗಳಾದ ನಮ್ಮವರನ್ನು ಬಿಡುಗಡೆಗೊಳಿಸಬೇಕು ಮತ್ತು ಅಕ್ರಮ ಸಂಬಂಧ ಹೊಂದಿದ್ದ ರಾಮಣ್ಣ ನಾಯಕ್ ಮತ್ತು ಅವನ ಮಕ್ಕಳೇ ಈ ಕೊಲೆ ಮಾಡಿರುವ ಶಂಕೆ ಇದೆ. ಅವರನ್ನು ಬಂಧಿಸಬೇಕೆಂದು ಮನವಿ ಮಾಡಿಕೊಂಡರು. 
ಈ ಸಂದರ್ಭದಲ್ಲಿ ಹತ್ಯೆಗೀಡಾಗಿರುವ ಹನುಮಮ್ಮಳ ಕುಟುಂಬದವರು,  ಹೋರಾಟಗಾರ ಜೆ.ಬಾರದ್ವಾಜ್, ಕರಿಯಪ್ಪ ಗುಡಿಮನಿ, ಹೆಚ್.ಎಂ.ಬಡಿಗೇರ , ಬಸವರಾಜ್ ಶೀಲವಂತರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

Leave a Comment