You are here
Home > Koppal News > ಕುಣಿಕೇರಿ-ಕೊಪ್ಪಳ ರಸ್ತೆ ಸುಧಾರಣೆ ಕಾಮಗಾರಿಗೆ ಸಂಸದರಿಂದ ಭೂಮಿಪೂಜೆ

ಕುಣಿಕೇರಿ-ಕೊಪ್ಪಳ ರಸ್ತೆ ಸುಧಾರಣೆ ಕಾಮಗಾರಿಗೆ ಸಂಸದರಿಂದ ಭೂಮಿಪೂಜೆ

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೊಪ್ಪಳ ತಾಲೂಕಿನ ಕುಣಿಕೇರಿ-ಕೊಪ್ಪಳ ೬. ೬೭ ಕಿ.ಮೀ. ಉದ್ದದ ರಸ್ತೆ ಸುಧಾರಣೆ ಕಾಮಗಾರಿಗೆ ಸಂಸದ ಸಂಗಣ್ಣ ಕರಡಿ ಅವರು ಭೂಮಿ ಪೂಜೆ ನೆರವೇರಿಸಿದರು.

  ಪಿಎಂಜಿಎಸ್‌ವೈ ಎರಡನೆ ಹಂತದ ಯೋಜನೆಯಡಿ ೨. ೦೮ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಕುಣಿಕೇರಿ-ಕೊಪ್ಪಳ ೬. ೬೭ ಕಿ.ಮೀ. ರಸ್ತೆ ಸುಧಾರಣೆ ಕಾಮಗಾರಿಗೆ ಸಂಸದರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಪಿಎಂಜಿಎಸ್‌ವೈ ಯೋಜನೆ ಕಾರ್ಯಪಾಲಕ ಅಭಿಯಂತರ ಕಟ್ಟಿಮನಿ, ತಾ.ಪಂ. ಅಧ್ಯಕ್ಷೆ, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

Leave a Reply

Top