You are here
Home > Koppal News > ಕೆ.ಬಿ.ಆರ್. ಡ್ರಾಮಾ ಕಂಪನಿಯ ಅಕ್ಕ ಪಾಪರ್, ತಂಗಿ ಸುಪರ್ ನಾಟಕ

ಕೆ.ಬಿ.ಆರ್. ಡ್ರಾಮಾ ಕಂಪನಿಯ ಅಕ್ಕ ಪಾಪರ್, ತಂಗಿ ಸುಪರ್ ನಾಟಕ

ಹೊಸಪೇಟೆ:  ದಾವಣಗೆರೆಯ ಕೆ.ಬಿ.ಆರ್. ಡ್ರಾಮಾ ಕಂಪನಿಯು ನಾಳೇ ದಿ.೬ರಿಂದ ಸಂಸಾರಿಕ ಹಾಸ್ಯಮಯ ನಾಟಕ ಅಕ್ಕ ಪಾಪರ್, ತಂಗಿ ಸುಪರ್ ನಾಟಕ ಪ್ರದರ್ಶಿಸಲಿದೆ ಎಂದು ನಾಟಕ ಕಂಪನಿಯ ಮಾಲೀಕ ಚಿಂದೋಡಿ ಶ್ರೀಕಂಠೇಶ್, ಮುಖ್ಯ ವ್ಯವಸ್ಥಾಪಕ ಚಿಂದೋಡಿ ಶಂಭುಲಿಂಗಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ ೮೭ವರ್ಷಗಳಿಂದ ನಿರಂತರ ನಾಟಕ ಪ್ರದರ್ಶಿಸುತ್ತಾ ಭಾರತದ ಹೆಮ್ಮೆಯ ವೃತ್ತಿನಾಟಕ ಸಂಸ್ಥೆಯು ದಾವಣಗೆರೆಯ ಕೆ.ಬಿ.ಆರ್. ಡ್ರಾಮಾ ಕಂಪನಿಯಾಗಿದೆ ಎಂದರು.ವೃತ್ತಿ ನಾಟಕ ಕಂಪನಿಗಳು ಕಷ್ಟಕರ ಪರಿಸ್ಥಿತಿಯಲ್ಲಿದ್ದು, ಇಂತಹ ನಾಟಕ ಕಂಪನಿಗಳಿಗೆ ಕಲಾ ಪ್ರೇಮಿಗಳು ಬೆಂಬಲಿಸಬೇಕೆಂದರು. ೩ ದಶಕಗಳ ನಂತರ ಹೊಸಪೇಟೆಗೆ ಕ್ಯಾಂಪ್ ಹಾಕಲಾಗಿದೆ. ವೃತ್ತಿರಂಗಭೂಮಿಯಲ್ಲಿ ತನ್ನದೇ ಆದ ಸ್ಥಾನ ಪಡೆದಿರುವ ಈ ತಂಡವು ೩ತಿಂಗಳ ಕಾಲ ಕ್ಯಾಂಪ್ ನಡೆಸುವ ಗುರಿ ಹೊಂದಲಾಗಿದೆ ಎಂದರು. ಈ ನಾಟಕ ಪ್ರದರ್ಶನವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಸಿದ್ದನಗೌಡ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೆ.ಎಂ.ಹಾಲಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆಂದು ವಿವರ ನೀಡಿದರು.

Leave a Reply

Top