ಇಂದ್ರಧನುಷ್ ವಿಶೇಷ ಲಸಿಕಾ ಕಾರ್ಯಕ್ರಮಕ್ಕೆ ಡಿ.ಸಿ. ಆರ್.ಆರ್. ಜನ್ನು ಚಾಲನೆ

ಮಕ್ಕಳನ್ನು ಕಾಡುವ ೭ ಪ್ರಾಣಘಾತುಕ  ರೋಗಗಳ ನಿರ್ಮೂಲನೆಗೆ ೦೨ ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ’ಮಿಷನ್ ಇಂದ್ರಧನುಷ್’ ಎರಡನೆ ಹಂತದ ವಿಶೇಷ ಲಸಿಕಾ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಕೊಪ್ಪಳ ನಗರದ ನಿರ್ಮಿತಿ ಕೇಂದ್ರ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.

  ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ  ೮೦೭ ಗರ್ಭಿಣಿ ಮಹಿಳೆಯರು ಹಾಗೂ ೦-೨ ವರ್ಷದ ೪೮೪೭ ಮಕ್ಕಳಿಗೆ ಅಭಿಯಾನದ ಲಾಭ ಕಲ್ಪಿಸಲು ಗುರಿ ಹೊಂದಲಾಗಿದೆ.  ಇದಕ್ಕಾಗಿ ಒಟ್ಟು ೩೪೫ ಲಸಿಕಾ ಕೇಂದ್ರಗಳಿದ್ದು, ೬೧- ಸಂಚಾರಿ ತಂಡಗಳನ್ನು ರಚಿಸಲಾಗಿದೆ.  ಎಲ್ಲ ಫಲಾನುಭವಿಗಳು ತಪ್ಪದೆ ಅಮೂಲ್ಯ ಲಸಿಕೆಯನ್ನು ಮಕ್ಕಳಿಗೆ ಹಾಕಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದ್, ಮಿಷನ್ ಇಂದ್ರಧನುಷ್ ಯೋಜನೆ ಜಿಲ್ಲಾ ವೀಕ್ಷಕ ಹಾವೇರಿ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅವರಾದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯಕ್ರಮ ನಿರೂಪಣಾಧಿಕಾರಿ ಮಂಜುನಾಥ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ರಮೇಶ್ ಮೂಲಿಮನಿ, ಡಾ. ನಾಗರಾಜ್, ಮತ್ತಿತರ ಅಧಿಕಾರಿಗಳು, ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Please follow and like us:
error